ಹಾಸನ

ಜಿಲ್ಲಾದ್ಯಂತ ನಾಗರ ಪಂಚಮಿ

Published On :

ಹಾಸನ: ನಾಗರಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಜಿಲ್ಲೆಯ ಜನತೆ ಶುಕ್ರವಾರ ಆಚರಿಸಿದರು.
ನಗರದ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಪುನಸ್ಕಾರ ನಡೆದವು. ಅಲ್ಲದೇ ನಾಗರ ಕಲ್ಲುಗಳಿಗೆ ಹತ್ತಿ ಹಾರ ಧಾರಣೆ ಮಾಡಿ, ಹಾಲು ಎರೆಯುವ ಮೂಲಕ ಭಕ್ತಿ ಭಾವದಿಂದ ಪೂಜೆ ಸಲ್ಲಿಸಲಾಯಿತು. ಮಹಿಳೆಯರು ತಮ್ಮ  ಪತಿ ಹಾಗೂ ಮಕ್ಕಳೊಂದಿಗೆ ನಾಗರಾಜನಿಗೆ ಹಾಲೆರೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.
ಜಾವಗಲ್: ಹಬ್ಬಗಳ ಪ್ರಾರಂಭ ಮಾಸವಾದ ಶ್ರಾವಣ ಮಾಸದ ಶುದ್ಧ ಪಂಚಮಿ ನಾಗರ ಪಂಚಮಿಯಾಗಿದ್ದು, ಅರಸೀಕೆರೆ ತಾಲೂಕು ಜಾವಗಲ್‌ನಲ್ಲಿ ವಿವಿಧ  ಸಮಾಜದವರು ನಾಗರ ಪಂಚಮಿ ಹಬ್ಬವನ್ನು ಭಕ್ತಿ ಶ್ರದ್ದೆಯಿಂದ ಆಚರಿಸಿದರು.
ಭಕ್ತರು ನಾಗರ ಕಲ್ಲಿನ ದೇವಾಲಯಕ್ಕೆ ಮುಂಜಾನೆ ಹೋಗಿ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, ಅರ್ಚನೆ, ಪುಷ್ಪಾಲಂಕಾರ ಮಾಡಿಸಿ ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ಸ್ವೀಕರಿಸಿದರು.
ದೇಗುಲದ ಆವರಣದಲ್ಲಿರುವ ತಾವರೆ ಮರದ ಸುತ್ತಲೂ ಆವೃತಗೊಂಡಿರುವ ಹುತ್ತಕ್ಕೆ ಪೂಜೆ ಮಾಡಿ, ತನಿ ಎರೆದು, ಹಣ್ಣು ಹಂಪಲುಗಳು, ತೆಂಗಿನಕಾಯಿ, ಚಿಗಲಿ ತಂಬಿಟ್ಟು, ತಳಿಗೆ, ಕಿಚಡಿಗಳನ್ನು ದೇವರಿಗೆ ಅರ್ಪಿಸಿ ನಂತರ ಪರಸ್ಪರ ನಾಗರ ಪಂಚಮಿಯ ಶುಭಾಶಯ ಕೋರಿ ಸಹೋದರಿಯರಿಗೆ ಅರಿಶಿಣದ ದಾರ ಕಟ್ಟಿದರು. ನಂತರ ಸಹಭೋಜನ ನಡೆಸಿದರು.
ಸಹೋದರ ಸಹೋದರಿಯರ ಹಬ್ಬವೆಂದು ವಿಶೇಷವಾಗಿ ಆಚರಿಸುವ ವಾಡಿಕೆ ಇದೆ. ಕೆಲವರು ಹುತ್ತಕ್ಕೆ ಹೋಗಿ ತನಿ ಎರೆದು ಹಬ್ಬ ಮಾಡಿಕೊಂಡು ಬರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.