ಹಾಸನ

ಸಡಗರ, ಸಂಭ್ರಮದ ಸಿದ್ದೇಶ್ವರಸ್ವಾಮಿ ರಥೋತ್ಸವ

Published On :

ಕ.ಪ್ರ. ವಾರ್ತೆ ಅರಸೀಕೆರೆ ಮಾ. 30
ಬಾಣಾವರ ಹೋಬಳಿ ಹಿರಿಯೂರು ಗ್ರಾಮದ ಹಾಲು ಸಿದ್ದೇಶ್ವರ ಹಾಗೂ ಬಸವೇಶ್ವರಸ್ವಾಮಿ ಮಹಾ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಡಗರ, ಸಂಭ್ರಮದಿಂದ ನಡೆಯಿತು.
ಹಿರಿಯೂರು ಗ್ರಾಮಕ್ಕೆ ಹೊಂದಿಕೊಂಡಿರುವ ಕೆಂಚೇನಹಳ್ಳಿ, ಕೀರ್ಯನಾಯಕನಹಟ್ಟಿ, ಹರಿಹರಪುರ, ಬಿಸಲೆಹಳ್ಳಿ, ಭೈರಾಂಬುಧಿ, ಚಿಕ್ಕೂರು, ಕಾಚೀಘಟ್ಟ, ಕೋರನಹಳ್ಳಿ, ಬೆಟ್ಟದಪುರ ಸೇರಿದಂತೆ ಹತ್ತಾರು ಗ್ರಾಮಗಳ ಭಕ್ತರು ಮುಂಜಾನೆಯಿಂದಲೇ ದೇವರ ಸನ್ನಿಧಿಗೆ ಆಗಮಿಸಿ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಭಕ್ತಿ ಭಾವ ಪ್ರದರ್ಶಿಸಿದರು.
 ಮಧ್ಯಾಹ್ನ 11 ಗಂಟೆಗೆ ಬೈರಾಂಬುದಿ ಗ್ರಾಮ ದೇವತೆ ಹೊಂಗ್ಯಮ್ಮ, ಮಲ್ಲಿಗೆಮ್ಮ, ಚಲುವರಾಯಸ್ವಾಮಿ, ಧೂತರಾಯಸ್ವಾಮಿ ರಥಕ್ಕೆ ತೆಂಗಿನಕಾಯಿ ಒಡೆದ ನಂತರ ರಥ ಎಳೆಯಲಾಯಿತು. ಭಕ್ತರು ರಥಕ್ಕೆ ದವನ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿಯ ಪರಾಕಾಷ್ಟೆ ಪ್ರದರ್ಶಿಸಿದರು. ಭಕ್ತಾಧಿಗಳಿಗೆ ದಾಸೋಹ ಕಲ್ಪಿಸಲಾಗಿತ್ತು. ಸೋಮೇಶ್ವರ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದ ಬೀದಿ ಬೀದಿಗಳಲ್ಲಿ ಮಾವಿನ ತಳಿರು ತೋರಣ ಕಟ್ಟಿ ಶೃಂಗರಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.