ಶೇಕ್ಸ್‌ಪಿಯರ್ ಜಗತ್ತಿನ ಶ್ರೇಷ್ಠ ನಾಟಕಕಾರ: ಪ್ರೊ. ರುದ್ರಮುನಿ
ಕ.ಪ್ರ.ವಾರ್ತೆ, ಹೊಳೆನರಸೀಪುರ, ಮಾ. 30
ಶೇಕ್ಸ್‌ಪಿಯರ್ ಜಗತ್ತಿನ ಒಬ್ಬ ಶ್ರೇಷ್ಠ ನಾಟಕಕಾರನಾಗಿದ್ದು, ಅವರ ನಾಟಕಗಳಲ್ಲಿನ ಪಾತ್ರಗಳು ಸಮಾಜದ ಮೇಲೆ ಪ್ರಭಾವ ಬೀರುವ ಮತ್ತು ಸಾರ್ವಕಾಲಿಕವಾಗಿಯೂ ಜೀವಂತಿಕೆಯಿಂದ ಕೂಡಿರುವ ನಾಟಕಗಳಾಗಿವೆ ಎಂದು ಮೈಸೂರು ಮಾನಸ ಗಂಗೋತ್ರಿ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರೊ. ರುದ್ರಮುನಿ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆಂಗ್ಲ ವಿಭಾಗದಿಂದ ಹಮ್ಮಿಕೊಳ್ಳಲಾಗಿದ್ದ ಶೇಕ್ಸ್‌ಪಿಯರ್‌ನ ಜನಪ್ರಿಯ ಮ್ಯಾಕ್‌ಬೆತ್ ನಾಟಕ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೇಕ್ಸ್‌ಪಿಯರ್ ಮತ್ತು ಅರಿಸ್ಟಾಟಲ್‌ನ ದುರಂತ ನಾಟಕಗಳಲ್ಲಿನ ನಾಟಕಕಾರನ ಕಲ್ಪನೆ ಮತ್ತು ಆತ ತನ್ನ ಪ್ರೇಕ್ಷಕರಿಗೆ ಹೇಳಲು ಇಚ್ಚಿಸುತ್ತಿದ್ದ ಕಲ್ಪನೆಯನ್ನು ಸ್ಥೂಲವಾಗಿ ವಿಶ್ಲೇಷಣೆ ಮಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರೊ. ಎಂ.ಬಿ ಇರ್ಷಾದ್ ಮಾತನಾಡಿ, ಶೇಕ್ಸ್‌ಪಿಯರ್ ಒಬ್ಬ ಕವಿ, ನಾಟಕಕಾರ ಅದೆಲ್ಲಕ್ಕಿಂತ ಮಿಗಿಲಾಗಿ ಮಾನವೀಯ ಮೌಲ್ಯಗಳನ್ನು ಹೊಂದಿದ್ದ ವ್ಯಕ್ತಿಯಾಗಿದ್ದು, ಆತನ ಸಾಹಿತ್ಯವನ್ನು ವಿದ್ಯಾರ್ಥಿಗಳು ನಿರಂತರವಾಗಿ ಅಧ್ಯಯನ ಮಾಡುವುದು ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮ ಸಂಯೋಜಕ ಹಾಗೂ ಇಂಗ್ಲಿಷ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರೊ. ದೊಡ್ಡದುರುಗಪ್ಪ ಮಾತನಾಡಿ, ಮ್ಯಾಕ್‌ಬೆತ್ ನಾಟಕದ ಅತಿ ಮುಖ್ಯ ಸನ್ನಿವೇಶಗಳನ್ನು ವಿವರಿಸಿದರು. ಕಾಲೇಜಿನ ವಿದ್ಯಾರ್ಥಿಗಳು ಮ್ಯಾಕ್‌ಬತ್ ನಾಟಕದ ವೇಷಧಾರಿಗಳಾಗಿ ಪ್ರಮುಖ ಸನ್ನಿವೇಶ ಪ್ರದರ್ಶಿಸಿ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಯಾದರು.
ಗೃಹ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಚನ್ನವೀರಪ್ಪ, ಡಾ. ಬಿ.ಸಿ. ಮಲ್ಲೇಶ್ ಇದ್ದರು. ಉಪನ್ಯಾಸಕಿ ಕೆ.ಎನ್. ರೂಪ, ವಿದ್ಯಾರ್ಥಿನಿ ಸಲ್ಮಾ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

