ವಿದ್ಯಾರ್ಥಿನಿಯರಲ್ಲಿ ಋತುಚಕ್ರ ಸಂಬಂಧಿ ಸಮಸ್ಯೆ, ಪರಿಹಾರ ಕುರಿತು ಉಪನ್ಯಾಸ
ಕನ್ನಡಪ್ರಭವಾರ್ತೆ ಹಾಸನ ಮಾ. 29
ಮಹಿಳೆಯರು ತಮ್ಮ ದೇಹಾರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಾತ್ಸಲ್ಯ ಆಸ್ಪತ್ರೆಯ ಮುಖ್ಯಸ್ಥೆ ಡಾ. ಭಾರತಿ ರಾಜಶೇಖರ್ ತಿಳಿಸಿದರು.
ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಭಗವತಿ ಮಹಿಳಾ ಯೋಗ ಘಟಕದಿಂದ ಆಯೋಜಿಸಲಾಗಿದ್ದ ವಿದ್ಯಾರ್ಥಿನಿಯರಲ್ಲಿ ಋತುಚಕ್ರ ಸಂಬಂಧಿ ಸಮಸ್ಯೆ ಹಾಗೂ ಪರಿಹಾರ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಸಮತೋಲಿತ ಆಹಾರ ಸೇವನೆ, ಯೋಗಾಭ್ಯಾಸ ವ್ಯಾಯಾಮಗಳಿಂದ ವಿದ್ಯಾರ್ಥಿನಿಯರು ಚಿಕ್ಕ ವಯಸ್ಸಿನಲ್ಲಿಯೇ ಆರೋಗ್ಯ ರಕ್ಷಣೆಗೆ ಒತ್ತು ನೀಡಬೇಕು. ವಯೋ ಸಹಜ ಆಕರ್ಷಣೆಗಳಿಂದ ದೂರವಿದ್ದು ವೈಯುಕ್ತಿಕ ನೈರ್ಮಲ್ಯದ ಕುರಿತು ಜಾಗೃತರಾಗಬೇಕು. ಇದರಿಂದ ಭವಿಷ್ಯದಲ್ಲಿ ಉದ್ಭವಿಸುವ ಬಹಳಷ್ಟು ಕಾಯಿಲೆಗಳನ್ನು ದೂರ ಇಡಬಹುದು ಎಂದು ಹೇಳಿದರು.
ಹಾಸನದ ಪ್ರಮುಖ ಸರ್ಕಾರೇತರ ಸಂಸ್ಥೆ ಅನನ್ಯ ಟ್ರಸ್ಟಿನ ಕಾರ್ಯದರ್ಶಿ ಕೆ.ಟಿ. ಜಯಶ್ರೀ ಅವರು ಟ್ರಸ್ಟ್ ಮೂಲಕ ಮಹಿಳೆಯರ ಸಹಾಯವಾಣಿಯಾಗಿ ಕಾರ್ಯ ನಿರ್ವಹಿಸುತ್ತಿರುವ ತಮ್ಮ ಸಂಸ್ಥೆಯ ವಿಶೇಷ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಐ.ಎಂ.ಮೋಹನ್ ಮಾತನಾಡಿ, ಇಂದಿನ ವಿದ್ಯಾರ್ಥಿನಿಯರು ಬಹಳಷ್ಟು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜೀವನವಿಡೀ ಸುಖ ಸಂತೋಷಗಳಿಂದ ಕಳೆಯ ಬೇಕಾದರೆ ಆರೋಗ್ಯದ ಸಂಪೂರ್ಣ ಸಮತೋಲಿತ ಆಹಾರ ಉತ್ತಮ ವೈಯುಕ್ತಿಕ ನೈರ್ಮಲ್ಯ ಮತ್ತು ಅತ್ಯುತ್ತಮ ಮನೋಭಿಲಾಷೆಗಳನ್ನು ಹೊಂದಿದ್ದು ಅಂತರ್ಗತವಾದ ಸ್ವಚ್ಛತೆಗೆ ಆದ್ಯತೆ ನೀಡಬೇಕೆಂದರು.
ವಿದ್ಯಾರ್ಥಿನಿಯರ ಋತುಚಕ್ರ ಸಂಬಂಧಿ ಪ್ರಶ್ನೆಗಳಿಗೆ ವೈದ್ಯರು ಸ್ಥಳದಲ್ಲಿಯೇ ಪರಿಹಾರ ಸೂಚಿಸಿದರು. ಡಾ. ವಿದ್ಯಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಗ ಘಟಕ ಸಂಯೋಜಕಿ ಡಾ. ವೀಣಾ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

