ಎತ್ತಿನಗಾಡಿ ಮಾಲೀಕರ ಪ್ರತಿಭಟನೆ
ಕ.ಪ್ರ. ವಾರ್ತೆ ಹಾಸನ ಮಾ.18
ಹೊಳೆನರಸೀಪುರ ಸುತ್ತಮುತ್ತಲಿನಲ್ಲಿ ನೂರಾರು ವರ್ಷಗಳಿಂದ ಎತ್ತಿನಗಾಡಿ ಮಾಲೀಕರು ನಡೆಸುತ್ತಿರುವ ಮರಳು ಸಾಗಾಣಿಕೆಗೆ ಅಕ್ರಮ ಮರಳುಗಾರರು ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಡಾ.ಬಿ.ಆರ್.ಅಂಬೇಡ್ಕರ್ ಎತ್ತಿನಗಾಡಿ ಯುವಕರ ಸಂಘದ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಪುರಾತನಕಾಲದಿಂದಲೂ ಹೊಳೆನರಸೀಪುರ ಹೇಮಾವತಿ ಹೊಳೆ ಸುತ್ತಮುತ್ತ ಕಡವಿನ ಹೊಸಹಳ್ಳಿ, ಸೂರನಹಳ್ಳಿ ಭಾಗಗಳಲ್ಲಿ ಎತ್ತಿನಾಗಡಿ ಮಾಲೀಕರು ಹೊಳೆನರಸೀಪುರಕ್ಕೆ ಮರಳನ್ನು ಸಾಗಿಸಿಕೊಂಡು ಜೀವನ ನಡೆಸುತ್ತಾ ಬಂದಿದ್ದಾರೆ. ಇವರೆಲ್ಲ ತುಂಬಾ ಬಡವರಾಗಿದ್ದು, ಈ ಕಸುಬು ಬಿಟ್ಟರೆ ಬೇರೆ ಯಾವುದೇ ರೀತಿಯ ಉದ್ಯೋಗವಾಗಲೀ, ಜಮೀನಾಗಲೀ ಇಲ್ಲ. ಈಗ ಕೆಲವು ಬಂಡವಾಳಶಾಹಿಗಳು ಹಣ ಗಳಿಸುವ ಸಲುವಾಗಿ ಅಕ್ರಮವಾಗಿ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮರಳುಗಾರರು ಜೆಸಿಬಿ, ಹಿಟಾಚಿ ಯಂತ್ರಗಳನ್ನು ಹೊಳೆಗೆ ಇಳಿಸಿ ಮರಳು ದಂದೆ ನಡೆಸುತ್ತಿದ್ದಾರೆ. ಅಕ್ರಮ ಮರಳು ದಂದೆ ಕಾನೂನು ಬಾಹಿರವಾಗಿದ್ದರೂ ರಾಜಾರೋಷವಾಗಿ ಮರಳು ದಂದೆ ನಡೆಸುತ್ತಿದ್ದಾರೆ. ಆದ್ದರಿಂದ ಅಕ್ರಮ ಮರಳು ದಂದೆ ಕೋರರನ್ನು ಕಾನೂನು ರೀತ್ಯ ಬಂಧಿಸಿ ಹಾಗೂ ಅವರು ಮರಳು ದಂದೆಗೆ ಬಳಸುತ್ತಿರುವ ವಾಹನಗಳನ್ನು ಸೀಜ್ ಮಾಡುವಂತೆ ಪ್ರತಿಭಟನಾಕಾರರು ಪಟ್ಟು ಹಿಡಿದರು. ಪ್ರತಿಭಟನೆಯಲ್ಲಿ ವೈರಮುಡಿ, ರವಿ, ವಸಂತ್ಕುಮಾರ್, ಗಂಗರಾಜು, ಕೇಶವ, ಹರೀಶ್, ಗಂಗಾ, ಶಂಖರ್, ರಂಗಸ್ವಾಮಿ, ಬಾಬು, ನಂಜುಂಡ, ಸಂತೋಷ್, ಶಿವಶಂಕರ್, ಮಂಜು, ವಿಶ್ವನಾಥ್, ರಮೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

