ಹಕ್ಕುಪತ್ರಗಳ ವಿತರಣೆ
ಸಕಲೇಶಪುರ: ತಾಲೂಕಿನ ಬಾಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ 232 ಮಂದಿ ನಿವೇಶನರಹಿತ ಕುಟುಂಬಗಳಿಗೆ ಇತ್ತೀಚೆಗೆ ಗ್ರಾಪಂ ವತಿಯಿಂದ ಹಕ್ಕುಪತ್ರಗಳನ್ನು ವಿತರಣೆ ಮಾಡಲಾಯಿತು. ಬಾಗೆ ಗ್ರಾಮದಲ್ಲಿ 120, ಗುಲಗಳಲೆ ಗ್ರಾಮದಲ್ಲಿ 72, ಯಡೇಹಳ್ಳಿಯಲ್ಲಿ 40 ಕುಟುಂಬಗಳಿಗೆ ತಲಾ 40್ಢ 30 ಅಳತೆ ನಿವೇಶಗಳ ಹಕ್ಕುಪತ್ರ ನೀಡಲಾಯಿತು. ಕಂದಾಯ ಇಲಾಖೆ ನಿವೇಶನದ ಜಾಗವನ್ನು 2005-06ರಲ್ಲಿ ಜಿಲ್ಲಾಧಿಕಾರಿ ನಿವೇಶನಕ್ಕಾಗಿ ಮಂಜೂರು ಮಾಡಿದ್ದರು. ರಸ್ತೆ ಇತರ ತಾಂತ್ರಿಕ ತೊಂದರೆಗಳಿಂದ 7 ವರ್ಷಗಳಿಂದ ನಿವೇಶನ ಹಂಚಿಕೆ ನೆನೆಗುದಿಗೆ ಬಿದ್ದಿತ್ತು. ಗ್ರಾಪಂ ಅಧ್ಯಕ್ಷ ಎಚ್.ಸಿ. ನೀಲಕಂಠ ಅಧ್ಯಕ್ಷತೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ, ಜಿಪಂ ಮಾಜಿ ಉಪಾಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಲೋಚನಾ ರಾಮಕೃಷ್ಣ, ತಾಪಂ ಉಪಾಧ್ಯಕ್ಷೆ ವೇದಾವತಿ, ತಾಪಂ ಸದಸ್ಯೆ ಮಂಜುಳ, ತಹಸೀಲ್ದಾರ್ ಮಂಜುನಾಥ್, ತಾಪಂ ಸಿಇಇ ಸಿದ್ದರಾಜು, ರಾಜೀವ್ ಗಾಂಧಿ ವಸತಿ ನಿಗಮದ ತಾಲೂಕು ಉಸ್ತುವಾರಿ ರಾಜೇಶ್, ಗ್ರಾಪಂ ಉಪಾಧ್ಯಕ್ಷೆ ಮಾಲತಿ ಹಾಗೂ ಸದಸ್ಯರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಶಾಸಕ ಎಚ್.ಕೆ. ಕುಮಾರಸ್ವಾಮಿ ಮಾತನಾಡಿದರು. ಗ್ರಾಪಂ ಕಾರ್ಯದರ್ಶಿ ಸಂಗಮೇಶ್ ನಿರೂಪಿಸಿದರು.
ನಾಳೆ ಕಾಂಗ್ರೆಸ್ ಕಾರ್ಯಕರ್ತರ ಸಭೆ
ಅರಕಲಗೂಡು: ತಾಲೂಕಿನ ಕೊಣನೂರು ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಸಭೆ ಕೆ.ಆರ್. ಕನ್ವೆನ್ಷನ್ ಹಾಲ್ನಲ್ಲಿ ಮಾ.19ರಂದು ಮಂಗಳವಾರ ಬೆಳಗ್ಗೆ 11.30ಕ್ಕೆ ನಡೆಯಲಿದೆ ಎಂದು ತಿಳಿಸಿದ್ದಾರೆ. ಕ್ಷೇತ್ರದ ಶಾಸಕ ಎ. ಮಂಜು ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಕುಮಾರ ಬಂಗಾರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಕೆಪಿಸಿಸಿ ಉಪಾಧ್ಯಕ್ಷ ಬಿ.ಎಲ್. ಶಂಕರ್, ಪ್ರಧಾನ ಕಾರ್ಯದರ್ಶಿಗಳಾದ ಎಚ್.ಸಿ. ಮಹದೇವಪ್ಪ, ಮಲ್ಲಿಗೆವೀರೇಶ್, ರಾಜ್ಯ ಹಿಂದುಳಿದ ವರ್ಗ ಪ್ರಧಾನ ಕಾರ್ಯದರ್ಶಿ ಕೊಣನೂರು ಎಸ್.ಜೆ. ವೀರರಾಜು, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನಕುಮಾರ್. ತಾಲೂಕು ಅಧ್ಯಕ್ಷ ಕಬ್ಬಳಗೆರೆ ಬೈರೇಗೌಡ ಮುಂತಾದವರು ಭಾಗವಹಿಸುವರು ಎಂದು ಹೋಬಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಯರಾಮ್ ಹಾಗೂ ಮಹಿಳಾ ಅಧ್ಯಕ್ಷೆ ಎಸ್.ಕೆ. ರೂಪ ತಿಳಿಸಿದ್ದಾರೆ.
22ಕ್ಕೆ ರಥೋತ್ಸವ
ಅರಕಲಗೂಡು: ತಾಲೂಕಿನ ರಾಮನಾಥಪುರ ಹೋಬಳಿ ಕೇರಳಾಪುರ ಗ್ರಾಮದಲ್ಲಿ ಶ್ರೀ ಪ್ರಸನ್ನ ವೀರಭದ್ರೇಶ್ವರಸ್ವಾಮಿ ರಥೋತ್ಸವ ಮಾ.22ರಂದು ಶುಕ್ರವಾರ ನಡೆಯಲಿದೆ. ತಾಲೂಕು ಆರಾಧನಾ ಕಮಿಟಿ ಅಧ್ಯಕ್ಷ ಹಾಗೂ ಕ್ಷೇತ್ರದ ಶಾಸಕ ಎ. ಮಂಜು, ತಾಲೂಕು ದಂಡಾಧಿಕಾರಿ ಶಾರದಾಂಬ, ಗ್ರಾ.ಪಂ. ಅಧ್ಯಕ್ಷ ಕೆ.ಎಸ್. ಕರೀಗೌಡ, ಉಪ ತಹಸೀಲ್ದಾರ್ ಜಿ.ಎಚ್. ಶಂಕರಪ್ಪ, ರಾಜಸ್ವ ನಿರೀಕ್ಷಕ ಎಚ್.ಎಸ್. ಅಂಜನಪ್ಪ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

