ಹಾಸನ

'ಮಹಿಳೆಯರು ಆರೋಗ್ಯದ ಕಡೆ ಗಮನವೀಯಲಿ'

Published On :

ಕ.ಪ್ರ.ವಾರ್ತೆ೤ ಹಾಸನ೤ ಮಾ. 15
ಮಹಿಳೆಯರು ಕುಟುಂಬ ನಿರ್ವಹಣೆ ಜತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ಯಾಮಲಾದೇವಿ ತಿಳಿಸಿದರು.
ನಗರದ ಸಂತ ಅಂತೋಣಿಯವರ ದೇವಾಲಯ ಸಭಾಂಗಣದಲ್ಲಿ ಸಿಎಂಎಸ್‌ಎಸ್‌ಎಸ್ ಮಹಿಳಾ ಸಂಘಟನೆ ಗಳು ಹಾಗೂ  ಜೀವನ್‌ಧಾರಾ ಸಂಸ್ಥೆ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಹುತೇಕ ಮಹಿಳೆಯರು ತಮ್ಮ ಕುಟುಂಬ ಸದಸ್ಯರ ಕಡೆ ಹೆಚ್ಚು ಗಮನಹರಿಸುತ್ತ ತಮ್ಮ ಆರೋಗ್ಯವನ್ನೇ ಮರೆತುಬಿಟ್ಟಿರುತ್ತಾರೆ ಎಂದು ವಿಷಾದಿಸಿದರು. ಎಲ್ಲಾ ಹೆಣ್ಣು ಮಕ್ಕಳಿಗೂ ವಿದ್ಯಾಭ್ಯಾಸಕ್ಕೆ ಅನುವು ಮಾಡಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವೂ ಹೌದು, ಸುಶಿಕ್ಷಿತ ಹೆಣ್ಣು ಮಕ್ಕಳು ತಮ್ಮ ಆರೋಗ್ಯವನ್ನು ಉತ್ತಮವಾಗಿ ನೋಡಿಕೊಳ್ಳಲು ಸಹಕಾರಿ ಆಗಲಿದೆ ಎಂದು  ಹೇಳಿದರು.
ಹೆರಿಗೆಯನ್ನು ಮನೆಯಲ್ಲಿ ಮಾಡದೆ ಆಸ್ಪತ್ರೆಯಲ್ಲಿಯೇ ಮಾಡಿಸಿದರೆ ಮಗು ಸುರಕ್ಷಿತವಾಗಿರುತ್ತದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಲೀಲಾವತಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.  ಧರ್ಮಗುರುಗಳು ಘಾ. ಜಾರ್ಜ್ ಅಂದ್ರಾದೆ ಸಾಧನ ಮಹಿಳಾ ತಾಲೂಕು ಒಕ್ಕೂಟ ಅಧ್ಯಕ್ಷೆ ಜ್ಯೋತಿ, ಸಿಎಂಎಸ್ ಎಸ್‌ಎಸ್ ಸೇವಾ ಸಂಸ್ಥೆ ನಿರ್ದೇಶಕ ಪಾ. ಫೆಲಿಕ್ಸ್ ತೋಮಸ್ ರೊಸಾರಿಯೋ, ವಕೀಲೆ ಗಿರಿಜಾಂಬಿಕ, ಆರ್ಥಿಕ ಸಾಕ್ಷರತ ಕೇಂದ್ರದ ಆಪ್ತ ಸಮಾಲೋಚಕಿ ಆಗ್ನೇಸ್ ಇತರರು ಇದ್ದರು. ಪ್ರಮೀಳ ನಿರೂಪಿಸಿದರು, ಲತಾ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.