ಹಾಸನ

ರೈತನ ಅಥ್ಲೆಟಿಕ್ಸ್ ಸಾಧನೆ

Published On :

 ಪಿ. ರವಿಕುಮಾರ್
ಹಾಸನ: ಇಲ್ಲಿನ ರೈತರೊಬ್ಬರು ಕೇವಲ ಕೃಷಿಗಷ್ಟೇ ಸೀಮಿತಗೊಂಡಿಲ್ಲ. ಕ್ರೀಡೆಯಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕಾಗಿ ದೇಶ-ವಿದೇಶಗಳಲ್ಲಿ ಸ್ಪರ್ಧಿಸಿ ಹತ್ತಾರು ಪದಕ ಗಳಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬರಾಳು ಗ್ರಾಮದ ರೈತ ಸಣ್ಣನಂಜಪ್ಪ ಎಂಬವರ ಪುತ್ರ ಪ್ರಕಾಶ್ ಅಥ್ಲೆಟಿಕ್ಸ್ನಲ್ಲಿ ಈ ಸಾಧನೆ ಮಾಡಿದ್ದಾರೆ.
ಇದೀಗ ಮಾ. 8ರಿಂದ ಬ್ಯಾಂಕಾಕ್ನಲ್ಲಿ ನಡೆಯುತ್ತಿರುವ 18ನೇ ಥಾಯ್ಲ್ಯಾಂಡ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ.  
ಪ್ರಕಾಶ್ ಅವರಿಗೆ ಈಗ 50 ವರ್ಷ ದಾಟಿದೆ. ಆದರೆ ಸಾಧಿಸುವ ಹಂಬಲಕ್ಕೆ ಇನ್ನೂ 18 ಸಹ ಆಗಿಲ್ಲ. ಅಂದರೆ ಅಷ್ಟರ ಮಟ್ಟಿಗೆ ಇವರ ಉತ್ಸಾಹ ಇದೆ. ಇವರ ಸಾಧನೆಗೆ ಕುಟುಂಬ ಅಷ್ಟೇ ಅಲ್ಲದೆ ಇಡೀ ಗ್ರಾಮವೇ ಪ್ರೋತ್ಸಾಹವನ್ನು ನೀಡುತ್ತಿದೆ. ಅನೇಕರು ಒಂದು ಕ್ಷೇತ್ರದಲ್ಲಿ ಹೆಸರು ಮಾಡಿದಾಕ್ಷಣ ತಮ್ಮ ಮೂಲ ಕಸುಬನ್ನು ಮರೆಯುತ್ತಾರೆ. ಇಲ್ಲವೇ ಅದರಿಂದ ದೂರವಾಗುತ್ತಾರೆ. ಆದರೆ ಪ್ರಕಾಶ್ ಹಾಗಲ್ಲ, ದೇಶ-ವಿದೇಶ ಸುತ್ತಾಡಿ ಬಂದರೂ, ಮೂಲ ಕಸುಬು ಕೃಷಿಯನ್ನು ಬಿಟ್ಟಿಲ್ಲ.
ಮಕ್ಕಳಿಗೆ ತರಬೇತಿ ಕನಸು: ಅಲ್ಪಸ್ವಲ್ಪ ಜಮೀನನ್ನು ಹೊಂದಿರುವ ಪ್ರಕಾಶ್ ಅವರು ತಮ್ಮ ಅಥ್ಲೆಟಿಕ್ಗೆ ಅನುಕೂಲವಾಗಲೆಂದು ತಮ್ಮ ತೋಟದಲ್ಲಿಯೇ ಟ್ರ್ಯಾಕ್ ನಿರ್ಮಿಸಿಕೊಂಡಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ಈ ಟ್ರ್ಯಾಕ್ನಲ್ಲಿಯೇ ತಾಲೀಮು ಮಾಡುತ್ತಿದ್ದಾರೆ. ಅಷ್ಟೇ ಅಲ್ಲೆದ ಇದನ್ನು ಮತ್ತಷ್ಟು ವಿಸ್ತರಿಸಿ ಹಳ್ಳಿ ಮಕ್ಕಳಿಗೆ ಉಚಿತ ತರಬೇತಿ ನೀಡುವ ಕನಸನ್ನು ಕಟ್ಟಿಕೊಂಡಿದ್ದಾರೆ. ಕ್ರೀಡೆ ಕೃಷಿ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಇವರು ಇತರರಿಗೆ ಮಾದರಿಯಾಗಿದ್ದಾರೆ.
ಅಷ್ಟೇ ಅಲ್ಲದೆ ಶ್ರೀಲಂಕಾ, ಪೂನಾ, ಬೆಂಗಳೂರು ಸೇರಿದಂತೆ ಇತರೆ ಕಡೆಗಳಲ್ಲಿ ನಡೆದಂತಹ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಸಿ ಚಿನ್ನ, ಬೆಳ್ಳಿ ಸೇರಿದಂತೆ ಹತ್ತಾರು ಪ್ರಶಸ್ತಿ ಗಳಿಸಿದ್ದಾರೆ. ಮ್ಯಾರಥಾನ್ಗಳಲ್ಲೂ ಪಾಲ್ಗೊಂಡು ಗಣನೀಯ ಸಾಧನೆ ಮಾಡಿದ್ದಾರೆ. ಇನ್ನಷ್ಟು ಸಾಧನೆ ಮಾಡುವ ಹಂಬಲ ಹೊಂದಿದ್ದಾರೆ.



ವಯಸ್ಸು 50 ಆದರೂ, ಸಾಧನೆಗೆ ಬರದ ಮುಪ್ಪು


ನನ್ನ ಮಗ ಪ್ರಕಾಶ್ ಬಹಳ ವರ್ಷಗಳಿಂದ ಕೃಷಿ ಜೊತೆಗೆ ಈ ಕ್ರೀಡೆಯಲ್ಲಿ ತೊಡಗಿಕೊಂಡು ಸಾಕಷ್ಟು ರಾಜ್ಯ ಹಾಗೂ ದೇಶ ಸುತ್ತಿಕೊಂಡು ಬಂದು ಹತ್ತಾರು ಬಹುಮಾನ ಪಡೆದಿರುವುದು ಬಹಳ ಸಂತಸ ತಂದಿದೆ. ಮತ್ತಷ್ಟು ಸಾಧನೆ ಮಾಡಬೇಕೆಂಬುದು ನಮ್ಮ ಮಹದಾಸೆ.
ಟಿ ಸಣ್ಣನಂಜಪ್ಪ, ತಂದೆ

ಮೊದಲಿನಿಂದಲೂ ಇವರು ಕೃಷಿ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡಬೇಕು ಎಂದು ಪಣ ತೊಟ್ಟಿದ್ದ. ಈ ವಯಸ್ಸಿನಲ್ಲೂ ಅವರ ಸಾಧನೆ ಕಂಡರೆ ನಾವೂ ಕ್ರೀಡೆಯಲ್ಲಿ ಭಾಗವಹಿಸಬೇಕಿತ್ತು ಎಂಬ ಆಸೆಯಾಗುತ್ತಿದೆ.
ಟಿ ಸತ್ಯಪ್ರಸಾದ್, ಸ್ನೇಹಿತ

ಪ್ರಾರಂಭದಲ್ಲಿ ಇವರು ಕ್ರೀಡಾಸಕ್ತಿ ಬೆಳೆಸಿಕೊಂಡಾಗ ನಾವು ಬೇಡ ಹಣ ವ್ಯಯ ಆಗುತ್ತೆ ಅಂದಿದ್ವಿ. ಆದರೆ ಈಗ ಪ್ರಕಾಶ್ ದೇಶ-ವಿದೇಶಗಳಲ್ಲಿ ನಡೆಯುವ ಹಿರಿಯರ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪದಕ ಗೆಲ್ಲುತ್ತಿದ್ದಾರೆ. ಇದರಿಂದ ರೈತನೋರ್ವ ಎಂತಹಾ ಸಾಧನೆಬೇಕಾದರೂ ಮಾಡಬಹುದು ಎಂಬುದನ್ನು ತೋರಿಸಿಕೊಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
ಟಿ ನಂಜೇಗೌಡ, ಸ್ಥಳೀಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.