ಹಾಸನ

ಕಲಾಪ ಬಹಿಷ್ಕರಿಸಿ ವಕೀಲರ ಪ್ರತಿಭಟನೆ

Published On :

ಕ.ಪ್ರ.ವಾರ್ತೆ ್ಣ ಹೊಳೆನರಸೀಪುರ ್ಣ ಮಾ. 13
ಇಲ್ಲಿನ ವಕೀಲರ ಸಂಘದ ಕೆಲವು ವಕೀಲರ ವಿರುದ್ಧವಾಗಿ ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲ್ ನಾಯಕ್ ಹಾಗೂ ತಹಸೀಲ್ದಾರ್ ಈಶ್ವರಪ್ಪ ಅವರು ಸುಳ್ಳು ದೂರು ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಂದು ಪಕ್ಷದ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಬ್ಬರನ್ನು ಕೂಡಲೇ ತಾಲೂಕಿನಿಂದ ವರ್ಗಾಯಿಸುವಂತೆ ವಕೀಲರು ಸಂಘವು ಬುಧವಾರ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಿತು.
ತಾಲೂಕು ವಕೀಲರ ಸಂಘವು ಸುಳ್ಳು ದೂರಿನ ಹಿನ್ನೆಲೆಯಲ್ಲಿ ಸಂಘದ ತುರ್ತು ಸಭೆ ಕರೆದು ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು.
ಸ್ಥಳೀಯ ಪುರಸಭೆ ಚುನಾವಣೆ ಮುಗಿದ ನಂತರ ಕಂಟ್ರೋಲ್ ಯುನಿಟ್ ಮತ್ತು ಬ್ಯಾಲೆಟ್ ಯುನಿಟ್ ತೆಗೆದುಕೊಂಡು ಹೋಗುವ ವಾಹನದ ಜೊತೆಯಲ್ಲಿ ತೆರಳಿದ್ದ ಅಭ್ಯರ್ಥಿಗಳು ಹಾಗೂ ಅಭ್ಯರ್ಥಿಗಳ ಪರ ಏಜೆಂಟರನ್ನು ಆರಕ್ಷಕ ವೃತ್ತ ನಿರೀಕ್ಷಕರಾದ ಗೋಪಾಲ್ ನಾಯಕ್ ಅವರು ಒಂದು ಪಕ್ಷದ ಏಜೆಂಟರಂತೆ ವರ್ತಿಸುತ್ತಾ ಉದ್ದೇಶಪೂರ್ವಕವಾಗಿ ಕೆಲವೊಂದು ಆಯ್ದ ವ್ಯಕ್ತಿಗಳನ್ನು ಗುರುತಿಸಿ ಹಾಗೂ ವಕೀಲರಾದ ಕೆ.ಆರ್. ಸುನೀಲ್ ಕುಮಾರ್, ಕೆ.ವಿ. ನಟರಾಜ್, ಎಚ್.ಆರ್. ಮಂಜುನಾಥ್ ಜೊತೆ ಎಚ್.ಆರ್. ನಾರಾಯಣ್, ಅಬ್ದುಲ್ ವಹಾಬ್, ಗಣೇಶ್, ಕೆ.ಎಂ. ರಾಜೇಗೌಡ, ಕೆ.ಆರ್. ಸುದರ್ಶನ್, ವಳಂಬಿಗೆ ನಾರಾಯಣ್, ಕೆ.ಎಚ್. ಹೊನ್ನೇಗೌಡ, ಜಲೇಂದ್ರ ಇವರುಗಳ ಮೇಲೆ ತಹಸೀಲ್ದಾರರ ಅನುಮತಿ ಮೇರೆಗೆ ಸ್ಟ್ರಾಂಗ್ ರೂಂನ್ನು ಪರಿಶೀಲಿಸುವ ಸಂದರ್ಭದಲ್ಲಿ ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲ್ ನಾಯಕ್ ಅವರು 21ನೇ ವಾರ್ಡ್ನಲ್ಲಿ ಚುನಾವಣೆಗೆ ನಿಂತಿದ್ದ ರಾಘವೇಂದ್ರ ಅವರನ್ನು ಹೊರತಳ್ಳುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಕೀಲರ ಸಂಘದ ಅಧ್ಯಕ್ಷ ಆರ್. ಭಾಷ್ಯಂ ದೂರಿದ್ದಾರೆ.
ಅಲ್ಲದೇ ವಿನಾಕಾರಣ ದ್ವೇಷದಿಂದ ಆರಕ್ಷಕ ವೃತ್ತ ನಿರೀಕ್ಷಕ ಗೋಪಾಲ್ ನಾಯಕ್ ಅವರು ಏಳು ದಿನಗಳ ನಂತರ ಮೇಲ್ಕಂಡ ಜನರ ವಿರುದ್ಧವಾಗಿ ಸುಳ್ಳು ದೂರು ದಾಖಲಿಸಿರುವ ಕಾರಣದಿಂದಾಗಿ ಇಲ್ಲಿನ ವಕೀಲರ ಸಂಘದ ಎಲ್ಲ ಸದಸ್ಯರೂ ತುರ್ತು ಸಭೆ ಸೇರಿ ಗೋಪಾಲ್ ನಾಯಕ್ ಅವರ ವರ್ತನೆಯ ವಿರುದ್ಧವಾಗಿ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ಬುಧವಾರದಂದು ದಿಢೀರನೆ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಉದಯರಂಜನ್, ಅರುಣ್ ಕುಮಾರ್, ಮುತ್ತಪ್ಪ, ಎಸ್.ಎಚ್. ಮೋಹನ್ ಕುಮಾರ್, ವಕೀಲರ ಸಂಘದ ಕಾರ್ಯದರ್ಶಿ ಜಯರಾಂ, ಪುರುಷೋತ್ತಮ್, ಜೈಪ್ರಕಾಶ್, ಸೋಮೇಶ್, ಸುನೀಲ್ ಕುಮಾರ್, ಮಂಜುನಾಥ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.