ಸುದ್ದಿ ಸಂಕ್ಷೇಪ
109 ಲಕ್ಷ ರಾಜಸ್ವ ವಸೂಲಿ
ಹಾಸನ: 2012-13ನೇ ಸಾಲಿನಲ್ಲಿ ಏಪ್ರಿಲ್ 2012 ರಿಂದ ಫೆಬ್ರವರಿ 2013 ರವರೆಗೆ ಸಕಲೇಶಪುರ ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ವಸೂಲಿ ಮಾಡಲಾದ ಪ್ರಗತಿಯ ಅಂಕಿ-ಅಂಶ ಇಂತಿದೆ. 2013ರ ಫೆಬ್ರವರಿವರೆಗೆ ವಸೂಲಿ ಮಾಡಬೇಕಾಗಿದ್ದ ರಾಜಸ್ವ 91.85 ಲಕ್ಷ ರು., ಇದುವರೆಗೆ ವಸೂಲಾಗಿರುವ ರಾಜಸ್ವ 109 ಲಕ್ಷ ರು., ಹೆಚ್ಚುವರಿ ರಾಜಸ್ವ ಸಂಗ್ರಹ 92 ಲಕ್ಷ ರು. ಸಂಗ್ರಹವಾಗಿದೆ.
ಪ್ರಸಕ್ತ ವರ್ಷ ತಪಾಸಣೆ ಮಾಡಿರುವ ಒಟ್ಟು ವಾಹನಗಳು- 6673, ವಾಹನಗಳ ತಪಾಸಣೆ ಮಾಡಿ- ರಾಜಿದಂಡ ಸಂಗ್ರಹ- 17.83 ಲಕ್ಷ ರು , ಬಾಕಿ ತೆರಿಗೆ ಸಂಗ್ರಹ 34.26 ಲಕ್ಷ ರು, ಅಧಿಕ ಭಾರ ಸಾಗಾಣಿಕೆ ವಾಹನಗಳ ಪ್ರಕರಣ ದಾಖಲು - 118 ವಾಹನಗಳು, ವಿವಿಧ ವರ್ಗದ ವಾಹನಗಳು - 4941 ಇದುವರೆಗೆ ನೋಂದಣಿಯಾಗಿವೆ ಎಂದು ಸಕಲೇಶಪುರ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಅಕ್ರಮ ಮರಳು ಸಮೇತ ಟ್ರ್ಯಾಕ್ಟರ್ ವಶ
ಕನ್ನಡಪ್ರಭವಾರ್ತೆ ಸಕಲೇಶಪುರ ಮಾ.12
ಅಕ್ರಮವಾಗಿ ತುಂಬುತ್ತಿದ್ದ ಮರಳು ಸಮೇತ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿ ಕೊಂಡಿರುವ ಘಟನೆ ತಾಲೂಕಿನ ಯಸಳೂರು ಹೋಬಳಿಯ ಫಾಲಹಳ್ಳಿ ಹತ್ತಿರದ ಸೇತುವೆ ಹತ್ತಿರ ಭಾನುವಾರ ನಡೆದಿದೆ.
ಹೊಳೆಯಲ್ಲಿ ಅಕ್ರಮವಾಗಿ ಮರಳು ಅಕ್ರಮವಾಗಿ ತುಂಬುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ ಪೊಲೀಸರನ್ನು ಕಂಡು ಮರಳು ತುಂಬುತ್ತಿದ್ದ ಅಶೋಕ ಟ್ರ್ಯಾಕ್ಟರನ್ನು ಸ್ಥಳದಲ್ಲಿ ಬಿಟ್ಟು ಓಡಿ ಹೋಗಿದ್ದಾನೆ. ಮರಳು ತುಂಬಿದ ಟ್ರ್ಯಾಕ್ಟರನ್ನು ವಶಪಡಿಸಿಕೊಂಡಿರುವ ಯಸಳೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇಂದು ಹಾಸನ-ಸಕಲೇಶಪುರ ವಿದ್ಯುತ್ ವ್ಯತ್ಯಯ
ಹಾಸನ, ಮಾ.11
ಹಾಸನ-ಸಕಲೇಶಪುರದ ವಿದ್ಯುತ್ ಮಾರ್ಗದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.13 ರಂದು ಈ ಮಾರ್ಗದ ಮಗ್ಗೆ, ಬಾಳ್ಳುಪೇಟೆ, ಸಕಲೇಶಪುರ, ಹಾನಬಾಳು ಮತ್ತು ಅರೇಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆ.10ರಿಂದ ಮಧ್ಯಾಹ್ನ 3ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಬೃಹತ್ ಕಾಮಗಾರಿ ವಿಭಾಗದ ಕಾರ್ಯ ನಿರ್ವಾಹಕ ಎಂಜಿನಿಯರ್ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

