ಹಾಸನ

747 ಅಭ್ಯರ್ಥಿ ಭವಿಷ್ಯ ಬಯಲು ಇಂದು

Published On :

ಕನ್ನಡಪ್ರಭವಾರ್ತೆ೤ ಹಾಸನ ೤ ಮಾ 10
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮಾ.11 ರಂದು ಮತಎಣಿಕೆ ನಡೆಯಲಿದೆ. ನಗರಸಭೆ, 5 ಪುರಸಭೆ, 2 ಪಟ್ಟಣ ಪಂಚಾಯ್ತಿ 177 ವಾರ್ಡ್‌ಗಳಿಂದ 747 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಅವರ ಭವಿಷ್ಯ ಸೋಮವಾರ ಬೆಳಗ್ಗೆ 10.30 ರಿಂದ 11 ಗಂಟೆಯೊಳಗೆ ಬಟಾ ಬಯಲಾಗಲಿದೆ.
ಹಾಸನ ನಗರಸಭೆಯ 34 ವಾರ್ಡ್, ಹೊಳೆನರಸೀಪುರ ಪುರಸಭೆಯ 21, ಸಕಲೇಶಪುರ ಪುರಸಭೆಯ 23, ಬೇಲೂರು ಪುರಸಭೆಯ 23, ಚನ್ನರಾಯಪಟ್ಟಣ ಪುರಸಭೆಯ 23,  ಅರಸೀಕೆರೆ ಪುರಸಭೆಯ 27 ವಾರ್ಡ್ ಗಳು ಮತ್ತು ಆಲೂರು ಪಟ್ಟಣ ಪಂಚಾಯ್ತಿಯ 10 ಮತ್ತು ಅರಕಲಗೂಡು ಪಟ್ಟಣ ಪಂಚಾಯ್ತಿಯ 15  ವಾರ್ಡ್ ಗಳ ಮತಗಳ ಎಣಿಕೆ  ಕಾರ್ಯ ನಡೆಯಲಿದೆ.  ಹೊಳೆನರಸೀಪುರ ಪುರಸಭೆಯ 4 ಮತ್ತು 9 ಹಾಗೂ ಆಲೂರು ಪಟ್ಟಣ ಪಂಚಾಯ್ತಿಯ 2 ನೇ ವಾರ್ಡ್‌ನಲ್ಲಿ ಜೆಡಿಎಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿಗಿ ಪೊಲೀಸ್ ಕಾವಲು:  ಮತ ಯಂತ್ರಗಳನ್ನು ಇಟ್ಟಿರುವ ಕೊಠಡಿಗಳಿಗೆ ಬಿಗಿ ಪೊಲೀಸ್ ಕಾವಲು ಹಾಕಲಾಗಿದೆ
ಹಾಸನ ನಗರಸಭೆಯ ಮತ ಎಣಿಕೆ ಪ್ರಕ್ರಿಯೆ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿದ್ದು, ಸೂಕ್ತ ವ್ಯವಸ್ಥೆಯನ್ನು ಜಿಲ್ಲಾಡಳಿತ ಕೈಕೊಂಡಿದೆ. ಬೆಳಗ್ಗೆ 8 ಕ್ಕೆ ಆರಂಭವಾಗಿ ಕೆಲವೇ ತಾಸುಗಳಲ್ಲಿ ಮುಕ್ತಾಯ ಗೊಳ್ಳಲಿದೆ. ಈ ಕಾರ್ಯಕ್ಕೆ 5 ಕೊಠಡಿಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ನಗರಸಭೆಯಲ್ಲಿ 35 ವಾರ್ಡ್‌ಗಳಿದ್ದು, 126 ಮತಗಟ್ಟೆ ಕೇಂದ್ರಗಳಿದ್ದು, 43,262 ಪುರುಷ  ಮತ್ತು 43,337 ಮಹಿಳಾ ಮತದಾರರು ಸೇರಿ ಒಟ್ಟಾರೆ 86,599 ಮತದಾರರಿದ್ದಾರೆ. ಸೋಮವಾರ ಬೆಳಗ್ಗೆ 8 ಕ್ಕೆ ಮತಎಣಿಗೆ ಪ್ರಾರಂಭವಾಗಲಿದ್ದು, ಅಭ್ಯರ್ಥಿಗಳ ಗಮನ ಸೋಲು ಗೆಲುವಿನ ಕಡೆಗಿದೆ. ಎಣಿಕೆ ಕೇಂದ್ರದಿಂದ 100 ಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸಂಚಾರ ನಿಷೇಧಿಸಲಾಗಿದೆ.   ಈ ಸಂದರ್ಭದಲ್ಲಿ ಜಿಲ್ಲಾದ್ಯಂತ ಭದ್ರತೆ ಒದಗಿಸಲು 2 ಎಎಸ್ಟಿ, 2 ಡಿವೈಎಸ್ಪಿ, 12 ಇನ್ಸ್‌ಪೆಕ್ಟರ್,
36 ಸಬ್ ಇನ್ಸ್‌ಪೆಕ್ಟರ್, 99 ಎಎಸ್‌ಐ, 445 ಪೇದೆಗಳು, 28 ಮಹಿಳಾ ಪೊಲೀಸ್, 200 ಹೋಂ ಗಾರ್ಡ್ ಗಳು, 3 ಕೆಎಸ್‌ಆರ್‌ಪಿ ತುಕಡಿ, 4 ಡಿಆರ್ ಹಾಗೂ 54 ಮೊಬೈಲ್ ಪೊಲೀಸ್ ವ್ಯವಸ್ಥೆ ಮಾಡಲಾಗಿದೆ.
ನಗರಸಭೆ ವಾರ್ಡ್‌ಗಳ 7 ಹಂತಗಳ ಮತ ಎಣಿಕೆ 5 ಕೊಠಡಿಗಳಲ್ಲಿ ನಡೆಯಲಿದೆ. ಪ್ರತಿ ಕೊಠಡಿಗಳಲ್ಲಿ 2 ಟೇಬಲ್‌ಗಳಲ್ಲಿ ಎಣಿಕೆ ನಡೆಯುತ್ತದೆ. ಐವರು ಮತಗಟ್ಟೆ ಅಧಿಕಾರಿ,  5 ಸಹಾಯಕ ಮತಗಟ್ಟೆ ಅಧಿಕಾರಿಗಳು ಮತ್ತು 50 ಸಿಬ್ಬಂದಿ ಒಳಗೊಂಡ ಐದು ತಂಡಗಳು ಎಣಿಕೆ ಕಾರ್ಯ ನಿರ್ವಹಿಸಲಿವೆ. ಹೆಚ್ಚುವರಿಯಾಗಿ 25 ಅಧಿಕಾರಿಗಳು ಕೆಲಸ ನಿರ್ವಹಿಸಲಿದ್ದಾರೆ.



ಮತಗಳ ಎಣಿಕೆ ಕಾರ್ಯ ಎಲ್ಲೆಲ್ಲಿ?

ಹಾಸನ ನಗರಸಭೆ     ಸರ್ಕಾರಿ ಮಹಿಳಾ ಪ್ರಥಮ    ದರ್ಜೆ ಕಾಲೇಜು
ಅರಸೀಕೆರೆ ಪುರಸಭೆ     ಸೆಂಟ್ ಮೇರೀಸ್ ಶಾಲೆ
ಚನ್ನರಾಯಪಟ್ಟಣ ಪುರಸಭೆ     ನವೋದಯ ಶಾಲೆ
ಹೊಳೆನರಸೀಪುರ ಪುರಸಭೆ     ಸರ್ಕಾರಿ ನರ್ಸಿಂಗ್    ಕಾಲೇಜು
ಸಕಲೇಶಪುರ ಪುರಸಭೆ     ಮಿನಿ ವಿಧಾನ ಸೌಧ
ಬೇಲೂರು ಪುರಸಭೆ    ಶಾಂತಲ ಎಜುಕೇಷನ್    ಸೊಸೈಟಿ
ಅರಕಲಗೂಡು ಪಪಂ     ಕೃಷಿ ಇಲಾಖೆ
ಆಲೂರು ಪಪಂ     ತಾಲೂಕು ಕಚೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.