ಹಾಸನ

14ರಂದು ಮೇವು ಉತ್ಪಾದನೆ ತರಬೇತಿ

Published On :

ಹಾಸನ: ನಗರದ ಪಶು ವೈದ್ಯಕೀಯ ಮಹಾವಿದ್ಯಾಲಯ ವಿಸ್ತರಣಾ ಶಿಕ್ಷಣ ಕೇಂದ್ರದಿಂದ ಮಾ.14 ರಂದು ಸುಧಾರಿತ ಮೇವು ಉತ್ಪಾದನೆ ಹಾಗೂ ಸಮರ್ಪಕ ಬಳಕೆ ಕುರಿತು ಒಂದು ದಿನದ ತರಬೇತಿಯನ್ನು ಅರಸೀಕೆರೆ ರಸ್ತೆಯಲ್ಲಿರುವ ಕೋರವಂಗಲಗೇಟ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ತರಬೇತಿಯಲ್ಲಿ ಹೈನುರಾಸುಗಳಿಗೆ ಕುರಿ ಮತ್ತು ಮೇಕೆಗಳಿಗೆ ಬೆಳೆಯ ಬಹುದಾದ ನಾನಾ ಏಕದಳ ಮತ್ತು ದ್ವಿದಳ ವಾರ್ಷಿಕ ಮತ್ತು ಬಹುವಾರ್ಷಿಕ ಮೇವಿನ ಬೆಳೆಗಳ ಬಗ್ಗೆ ಮೆಕ್ಕೆ ಜೋಳ ಬೆಳೆ ಕೊಯ್ಲು ನಂತರ ಉಳಿಕೆ ಕಡ್ಡಿಯಲ್ಲಿ ರಸ ಮೇವು ತಯಾರಿಸಿ ನಾನಾ ಮೇವಿನ ಮರಗಳು, ಅಸಂಪ್ರದಾಯ ಮೇವಿನ ಮೂಲಗಳು ಮೇವಿನ ಸದ್ಬಳಕೆ ಮುಂತಾದ ವಿಷಯಗಳ ಬಗ್ಗೆ ಮಾಹಿತಿ  ನೀಡಲಾಗುವುದು. ಆಸಕ್ತ ರೈತರು ಮೊ 991633 9922 ಸಂಪರ್ಕಿಸಿ ಹೆಸರನ್ನು ಮಾ 12 ರೊಳಗೆ ನೋಂದಾಯಿಸಿದ 30 ಜನಕ್ಕೆ ಆದ್ಯತೆ ನೀಡಲಾಗುವುದು ಎಂದು ವಿವಿ ಡೀನ್ ತಿಳಿಸಿದ್ದಾರೆ.
ಜಾಹಿರಾತು, ವಾಣಿಜ್ಯ ರಸಪ್ರಶ್ನೆ ಸ್ಪರ್ಧೆ
ಹಾಸನ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಸ್ತುಗಳನ್ನು ಖರೀದಿಸಲು ಗ್ರಾಹಕರಲ್ಲಿ ಜಾಗೃತಿ ಮೂಡಿಸಲು ಜಾಹಿರಾತುಗಳಲ್ಲಿ ಏಕತಾನತೆ ದೂರವಾಗಿ ವೈವಿಧ್ಯಮಯವಾಗಿ ಮೂಡಿ ಬಂದಲ್ಲಿ ಮಾತ್ರ ಗ್ರಾಹಕರನ್ನು ಆಕರ್ಷಿಸಬಹುದು ಎಂದು ಆರೈಸ್ ಸಂಸ್ಥೆಯ ಪ್ರೊ. ರಜನಿಚೌಬೆ ತಿಳಿಸಿದ್ದಾರೆ. ಸರ್ಕಾರಿ ಕಲಾ ಕಾಲೇಜಿನ ವಾಣಿಜ್ಯ ಮತ್ತು ವ್ಯವಸ್ಥಾಪನಾ ವಿದ್ಯಾರ್ಥಿ ಸಂಘದ ಅರೈಸ್ ಏರ್ಪಡಿಸಿದ್ದ ಜಿಲ್ಲಾ ಜಾಹಿರಾತು ಮತ್ತು ವಾಣಿಜ್ಯ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.