ಹಾಸನ

ಮನೆ ಮನೆ ಕವಿಗೋಷ್ಠಿ

Published On :

ಆಲೂರು: ಯಾರು ಬದುಕನ್ನು ಪ್ರೀತಿಸುತ್ತಾರೋ ಅಂತಹವರು ಪ್ರೇಮಕವಿಗಳಾಗಬಲ್ಲರು ಎಂದು ಸಾಹಿತಿ ಹಾಗೂ ಮನೆ-ಮನೆ ಕವಿಗೋಷ್ಠಿ ಸಂಚಾಲಕ ಶೀಟಿ ಸತ್ಯನಾರಾಯಣ ಅಭಿಪ್ರಾಯಪಟ್ಟರು.  
 ಅವರು ನಗರದ ವಿವೇಕಾನಂದ ಯೋಗ ಶಿಕ್ಷಣ ಶಾಲೆಯಲ್ಲಿ ನಡೆದ ಮನೆ-ಮನೆ ಕವಿಗೋಷ್ಠಿಯ 196 ನೇ ಮಾಸಿಕ ಕಾರ್ಯಕ್ರಮದಲ್ಲಿ ಸ್ಥಳೀಯ ಸಾಹಿತಿಗಳ ಕೃತಿ ಪರಿಚಯ ಮಾಲಿಕೆಯಲ್ಲಿ  ನಾಯಕರಹಳ್ಳಿ ಮಂಜೇಗೌಡರ ಶಿಹವಳಶಿ ಕೃತಿಯನ್ನು ವಿಶ್ಲೇಷಿಸಿ ಮಾತನಾಡುತ್ತಿದ್ದರು.  
 ಲೇಖಕರ ಕೃತಿ ಶಿವಚನಚೈತ್ರಶಿವನ್ನು ವಿಶ್ಲೇಷಿಸಿದ ಸಾಹಿತಿ ಎನ್.ಎಲ್. ಚನ್ನೇಗೌಡ,  12ನೇ ಶತಮಾನದಿಂದಲೂ ವಚನಗಳು ಸಮಾಜದ ಮಹತ್ತರ ಬದಲಾವಣೆಗೆ ತಮ್ಮದೇ ಆದ ಕೊಡುಗೆ ನೀಡುತ್ತ ಬಂದಿವೆ. ಕೆಸರಿನಲ್ಲಿ ಹುಟ್ಟಿದರೂ ಸಹ ತಾವರೆ ನೀರನ್ನು ಅಂಟಿಸಿಕೊಳ್ಳದೆ ಹೇಗೆ ಸುಂದರವಾಗಿ ಹೊಳೆಯುತ್ತದೆಯೋ ಹಾಗೆ ವಚನಗಳೂ ವಚನಕಾರರ ಮನದ ತುಮುಲತೆಯನ್ನು ಬೆಳಗಿಸುತ್ತವೆ ಎಂದರು.
 ನಂತರ ನಡೆದ ಕವಿಗೋಷ್ಠಿ ಮತ್ತು ಸಂವಾದದಲ್ಲಿ  ಜ.ಹೊ. ನಾರಾಯಣಸ್ವಾಮಿ, ಎಸ್.ಎಂ. ಧರ್ಮಪ್ಪ, ಪ್ರೊ. ಸೈಯ್ಯದ್ ಶಹಾಬುದ್ದೀನ್, ಡಾ. ಕೆ.ಕೆ. ಜಯಚಂದ್ರ ಗುಪ್ತ, ಎನ್.ಎಲ್. ಚನ್ನೇಗೌಡ, ಶೀಟಿ,  ಕಲಾವತಿ ಮಧುಸೂದನ್, ನೀಲಾವತಿ ಸಿ.ಎಸ್. ಲಲಿತ ಎಸ್, ದೇವಿರಮ್ಮ, ಮಮತಾಶಿವು, ಬಿ. ವೇದಾವತಿ, ವೇದಶ್ರೀ ರಾಜ್, ಎಸ್. ಎನ್. ಸೀತಾರಾಂ, ಭಾಗ್ಯ ಇದ್ದರು.
ಕಲಾವತಿ ಮಧುಸೂದನ್ ಪ್ರಾರ್ಥಿಸಿದರು.  ಪ್ರಾಯೋಜಕರಾದ ಸಾಹಿತಿ ಶಿವಬಸಪ್ಪ ಪರವಾಗಿ ಎನ್. ಎಲ್. ಚನ್ನೇಗೌಡ ಸ್ವಾಗತಿಸಿದರು.  ಸಂಚಾಲಕ ಶೀಟಿ ನಿರೂಪಿಸಿ ವಂದಿಸಿದರು.
ಆರೋಗ್ಯ ಉಚಿತತಪಾಸಣಾ ಶಿಬಿರ
ಹೊಳೆನರಸೀಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ತಾಲೂಕಿನ ಹಿರೇಬೆಳಗುಲಿ ಗ್ರಾಮದಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
 ಕಾಲೇಜಿನ ಎನ್‌ಎಸ್‌ಎಸ್ ಘಟಕವು ಗ್ರಾಮ ನೈರ್ಮಲ್ಯದ ಜೊತೆಗೆ ಸಾಮಾಜಿಕ ಆರೋಗ್ಯಕ್ಕೂ ಹೆಚ್ಚಿನ ಮುತುವರ್ಜಿ ನೀಡುವ ಉದ್ಧೇಶದಿಂದ ಜಿಲ್ಲಾ ಔಷಧಿ ಪ್ರತಿನಿಧಿಗಳ ಸಂಘ ಹಾಗೂ ತಾಲೂಕು ಔಷಧಿ ಮಾರಾಟಗಾರರ ಸಂಘದ ಸಹಯೋಗದಲ್ಲಿ ಈ ಬೃಹತ್ ಆರೋಗ್ಯ ಶಿಬಿರ ಆಯೋಜಿಸಿತ್ತು.
 ಆರೋಗ್ಯ ಶಿಬಿರವನ್ನು ಜಿಪಂ ಸದಸ್ಯ ಎಚ್.ಎನ್.ದೇವೇಗೌಡ ಉದ್ಘಾಟಿಸಿದರು. ರಕ್ತದಾನ ಶಿಬಿರದಲ್ಲಿ 53ಜನರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು. 745ಜನರು ಉಚಿತವಾಗಿ ತಮ್ಮ ಆರೋಗ್ಯ ತಪಾಸಣೆ ನಡೆಸಿಕೊಂಡರು. ಜಿಲ್ಲಾ ಔಷಧಿ ಪ್ರತಿನಿಧಿಗಳ ಸಂಘ ಹಾಗೂ ತಾಲೂಕು ಔಷಧಿ ವ್ಯಾಪಾರಿಗಳ ಸಂಘದಿಂದ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
 ತಾಪಂ ಅಧ್ಯಕ್ಷೆ ಕೆ.ಎಂ.ಚಂದ್ರಮತಿ, ಪುರಸಭಾ ಸದಸ್ಯೆ ಹೇಮಶ್ರೀ, ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪುಟ್ಟಸ್ವಾಮಪ್ಪ,  ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಲಕ್ಷ್ಮೀಕಾಂತ್, ಡಾ.ಕೆ.ಶ್ರೀನಿವಾಸಮೂರ್ತಿ, ಡಾ.ನಟರಾಜ್, ಡಾ.ವೆಂಕಟೇಶಮೂರ್ತಿ, ತಾಲೂಕು ಔಷಧಿ ಮಾರಾಟಗಾರರ ಸಂಘದ ಕಾರ್ಯದರ್ಶಿ ಇಂದ್ರಕುಮಾರ್, ಜಿಲ್ಲಾ ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಟಿ.ಟಿ.ಕೆ ಶ್ರೀಕಾಂತ್,  ಜೀವರಕ್ಷ ರಕ್ತ ನಿಧಿ ತಂಡದ ಜಿ.ಎಸ್.ಮೋಹನ್, ಶಿಬಿರಾಧಿಕಾರಿ  ಮಧೂಸೂದನ್, ಸಹ ಶಿಬಿರಾಧಿಕಾರಿ ಎಸ್.ಕಿರಣ್‌ರಾವತ್, ಪಿ.ಆರ್.ಶಾಂತ, ಪ್ರಾಧ್ಯಾಪಕ   ಶ್ರೀನಿವಾಸ್ ಇದ್ದರು.
ವಾರ್ಷಿಕ ಶಿಬಿರ
ಜಾವಗಲ್: ಸಮಾಜದ ಪ್ರಗತಿಗೆ ಸ್ವಾಸ್ಥ್ಯ ಆರೋಗ್ಯವೇ ಮುಖ್ಯವೆಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಬಾಷಾ ಹೇಳಿದರು. ತಿಮ್ಮನಹಳ್ಳಿಯಲ್ಲಿ ಜಾವಗಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ಶಿಬಿರದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೌಷ್ಠಿಕ ಆಹಾರ ಮತ್ತು ಮಹತ್ವ ಕುರಿತ ವಿಚಾರವಾಗಿ ಮಾತನಾಡಿದ ಅವರು,  ಪೋಷಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ವಹಿಸುವ ಕಾಳಜಿಯನ್ನು ಮಕ್ಕಳ ಆರೋಗ್ಯದ ವಿಚಾರಕ್ಕೂ ಮಹತ್ವ ನೀಡ ಬೇಕು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.