ಅಕ್ರಮ ಮದ್ಯ, ನಗದು ವಶ
ಹಾಸನ: ಜಿಲ್ಲೆಯಲ್ಲಿ ನಾನಾ ಕಡೆ ಚುನಾವಣಾ ಸಂಬಂಧ ಅಕ್ರಮವಾಗಿ ಸಾಗಿಸುತ್ತಿದ್ದ 6,66,515 ರು. ನಗದು ಹಾಗೂ ಅಪಾರ ಪ್ರಮಾಣದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೇಲೂರಿನಲ್ಲಿ
ಪಟ್ಟಣದ ರಾಘವೇಂದ್ರ ಬಡಾವಣೆಯಲ್ಲಿ ಪುರಸಭೆ ಚುನಾವಣೆ ಸಂಬಂಧವಾಗಿ ಕಾರಿನಲ್ಲಿ ಅಕ್ರಮವಾಗಿ ಮದ್ಯ ಮತ್ತು ನಗದನ್ನು ಸಾಗಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಪಟ್ಟಣದ ಗುರಪ್ಪಗೌಡ ಬೀದಿಯ ಶಿವಾನಂದ ( 42), ಈಶ್ವರ್ (40) ಎಂಬುವರನ್ನು ಬಂಧಿಸಿದ್ದು, 40,500 ರು. ನಗದು, 750 ಎಂಎಲ್ನ 2 ಮ್ಯಾಕ್ಡ್ಯೂಯೆಲ್ ವಿಸ್ಕಿ ಬಾಟಲಿಗಳು, 375 ಎಂಎಲ್ನ 2 ಮ್ಯಾಕ್ಡ್ಯೂಯೆಲ್ ವಿಸ್ಕಿ ಬಾಟಲಿಗಳು, 180 ಎಂಎಲ್ನ 10 ಮ್ಯಾಕ್ಡ್ಯೂಯೆಲ್ ಟೆಟ್ರಾ ಪ್ಯಾಕೇಟ್ಗಳನ್ನು ವಶಪಡಿಸಿಕೊಂಡಿರುವ ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಾಸನದಲ್ಲಿ
ಹಾಸನದ ಮಿರ್ಜಾ ಮೊಹಲ್ಲಾದ ಶೇಖರ್ ಎಂಬುವರ ಮನೆಯಲ್ಲಿ ಪರವಾನಗಿ ಇಲ್ಲದೆ ಅಕ್ರಮವಾಗಿ ನಗರ ಸಭಾ ಚುನಾವಣೆ ಸಮಯದಲ್ಲಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡಲು ಮದ್ಯದ ಬಾಟಲಿಗಳನ್ನು ಸಂಗ್ರಹಿಸಿಟ್ಟಿದ್ದಾಗ ಪೊಲೀಸರು ದಾಳಿ ನಡೆಸಿ ವಶಪಡಿಸಿ ಕೊಂಡಿದ್ದಾರೆ. ಆರೋಪಿ ಶೇಖರ್ ಪರಾರಿಯಾಗಿದ್ದು, ಸ್ಥಳದಲ್ಲಿದ್ದ 3288 ರು. ಬೆಲೆಯ 180 ಎಂಎಲ್ನ 29 ಕ್ವಾರ್ಟರ್ ವಿಸ್ಕಿ ತುಂಬಿರುವ ಗಾಜಿನ ಬಾಟಲಿಗಳು, ಮತ್ತು 6 ಸ್ಯಾಚೇಟ್ಗಳನ್ನು ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ನಗರ ಅರಳೇಪೇಟೆ ನಗರಸಭಾ ವಾರ್ಡ್ ನಂ. 19 ರ ಕಾಂಗ್ರೆಸ್ ಅಭ್ಯರ್ಥಿ ನೀಲಕಂಠಪ್ಪ ಚುನಾವಣಾ ಪ್ರಚಾರ ವೇಳೆ ಮತದಾರರಿಗೆ ಹಣವನ್ನು ಹಂಚುತ್ತಿದ್ದಾಗ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಅರಳೇಪೇಟೆಯ ನೀಲಕಂಠಪ್ಪ (46)ರನ್ನು ಬಂಧಿಸಲಾಗಿದೆ. ಅವರ ಬಳಿಯಿದ್ದ ಒಟ್ಟು 19,885 ನಗದನ್ನು ನಗರ ಠಾಣೆ ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಹಾಸನ ನಗರ ಪೆನ್ಷನ್ ಮೊಹಲ್ಲಾ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಅಮೀರ್ ಜಾನ್ ಎಂಬುವವರಿಗೆ ಸೇರಿದ ಮನೆಯಲ್ಲಿ ಆತ ಯಾವುದೆ ಪರವಾನಗಿ ಇಲ್ಲದೆ ಅಕ್ರಮವಾಗಿ ಹಾಸನ ನಗರ ಸಭಾ ಚುನಾವಣೆಯ ಸಮಯದಲ್ಲಿ ಮತದಾರರಿಗೆ ಹಂಚಿ ಮತ ಹಾಕುವಂತೆ ಆಮಿಷವೊಡ್ಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಮಾಲೀಕ ಅಮೀರ್ಜಾನ್ ಪರಾರಿಯಾಗಿ ದ್ದಾರೆ. ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ 6,219 ರು. ಮೌಲ್ಯದ ಮದ್ಯದ ಬಾಟಲಿಗಳನ್ನು ವಶಪಡಿಸಿ ಕೊಂಡಿರುವ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಮರಳು, ಟ್ರ್ಯಾಕ್ಟರ್ ವಶ
ಸಕಲೇಶಪುರ: ಅಕ್ರಮವಾಗಿ ಮರಳು ತುಂಬುತ್ತಿದ್ದ ವೇಳೆ ಮರಳು ಸಮೇತ ಟ್ರ್ಯಾಕ್ಟರನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಾಲೂಕಿನ ಯಸಳೂರು ಹೋಬಳಿ, ಹೂವಿನಹಳ್ಳಿ ದೊಡ್ಡನಹಳ್ಳಿ ಮದ್ಯದಲ್ಲಿರುವ ಹೇಮಾವತಿ ಉಪನದಿ ತೀರದಲ್ಲಿ ನಡೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

