ಹಾಸನ

ಕಾಂಗ್ರೆಸ್ ಅಭ್ಯರ್ಥಿ ಬಂಧನ

Published On :

ಕನ್ನಡಪ್ರಭ ವಾರ್ತೆ, ಬೇಲೂರು, ಮಾ. 7
ಇಲ್ಲಿನ ಪುರಸಭೆಗೆ ಸ್ಪರ್ಧಿಸಿದ್ದ 7 ವಾರ್ಡಿನ ಅಭ್ಯರ್ಥಿಯನ್ನು ಅಕ್ರಮ ಮದ್ಯ ಇಟ್ಟುಕೊಂಡಿದ್ದ ಆರೋಪದ ಮೇಲೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಚನ್ನಕೇಶವಸ್ವಾಮಿ ದೇವಾಲಯ ಸಮೀಪ ವ್ಯಾನಿನಲ್ಲಿದ್ದ 7 ನೇ ವಾರ್ಡಿನ ಅಭ್ಯರ್ಥಿ ಕಾಯಿಶಿವು ಸ್ನೇಹಿತ ಈಶ ಎಂಬುವರ ಜೊತೆ ಕುಳಿತಿದ್ದರು. ಈ ಸಂದರ್ಭದಲ್ಲಿ ದಾಳಿ ಮಾಡಿದ ಪಿಎಸ್‌ಐ ತಂಡ ವ್ಯಾನನ್ನು ಪರಿಶೀಲಿಸಿದಾಗ 6 ಲೀಟರ್ ಮದ್ಯ ಹಾಗೂ 42 ಸಾವಿರ ರು. ನಗದು ಮತ್ತು ಕರಪತ್ರಗಳು ದೊರಕಿದ್ದು ಕೂಡಲೆ ಇಬ್ಬರನ್ನು ಬಂಧಿಸಿ ನ್ಯಾಯಾಂಗ ತನಿಖೆಗೆ ಒಪ್ಪಿಸಿದ್ದಾರೆ. ಇಲ್ಲಿನ 5 ನೇ ವಾರ್ಡಿನ ಕೆಜೆಪಿ ಅಭ್ಯರ್ಥಿ ಸತೀಶ ಎಂಬುವರ ಕಾರಿನ ಮೇಲೆ ಭಿತ್ತಿಪತ್ರವಿದೆ ಎಂಬ ಕಾರಣಕ್ಕೆ ವಾಹನವನ್ನು ಪೊಲಿಸರು ವಶಪಡಿಸಿ ಕೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.