ಪ್ರತ್ಯೇಕ ಅಪಘಾತ: ಮೂವರು ಸಾವು
ಹಾಸನ: ಜಿಲ್ಲೆಯ ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಅಪಘಾತ ಪ್ರಕರಣಗಳಲ್ಲಿ ಮೂವರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಲಾರಿಯೊಂದು ಟಿವಿಎಸ್ಗೆ ಡಿಕ್ಕಿ ಹೊಡೆದ ಪರಿಣಾಮ ಟಿವಿಎಸ್ ಸವಾರ ಸಾವನ್ನಪ್ಪಿದ ಘಟನೆ ಅರಸೀಕೆರೆ ಪಟ್ಟಣದ ಎಂಪಿಎಂಸಿ ಮುಂಭಾಗ ನಡೆದಿದೆ.
ತಾಲೂಕಿನ ಲಕ್ಷ್ಮಿದೇವರಹಳ್ಳಿ ಮರಿಯಾನಾಯ್ಕ (48) ಎಂಬಾತ ಮೃತಪಟ್ಟ ದುರ್ದೈವಿ. ಅವರು ಟಿವಿಎಸ್ನಲ್ಲಿ ಪುತ್ರ ರವಿನಾಯ್ಕ ಜತೆ ಎಪಿಎಂಸಿ ಮಾರ್ಕೆಟ್ಗೆ ಹೋಗಲು ಬಿ.ಎಚ್ ರಸ್ತೆ ಎಪಿಎಂಸಿ ಮುಂಭಾಗ ಹೋಗುತ್ತಿದ್ದರು. ಆಗ ತಿಪಟೂರು ಕಡೆಯಿಂದ ಬಂದ ಲಾರಿ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಹೊಡೆದಿದೆ. ಇದರಿಂದ ತೀವ್ರವಾಗಿ ಗಾಯಗೊಂಡ ಮರಿಯಾನಾಯ್ಕ ಅವರನ್ನು ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಟ್ರ್ಯಾಕ್ಟರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ಘಟನೆ ಹೊಳೆನರಸೀಪುರ ಪಟ್ಟಣದ ಕೆಇಬಿ ಪವರ್ ಸ್ಟೇಷನ್ ಮುಂಭಾಗ ಸಂಭವಿಸಿದೆ.
ತಾಲೂಕಿನ ಹಳೇಕೋಟೆ ಹೋಬಳಿ, ಬೆಟ್ಟದಸಾತೇನಹಳ್ಳಿ ಗ್ರಾಮದ ಬಿ.ವಿ.ವೀರಭದ್ರಪ್ಪ ಮೃತಪಟ್ಟ ದುರ್ದೈವಿ. ಅವರು ಬೈಕಿನಲ್ಲಿ ಹೊಳೆನರಸೀಪುರ-ಚನ್ನರಾಯಪಟ್ಟಣ ರಸ್ತೆ, ಕೆಇಬಿ ಮುಂಭಾಗ ಹೋಗುತ್ತಿದ್ದರು. ಆಗ ಎದುರಿನಿಂದ ಬಂದ ಟ್ರ್ಯಾಕ್ಟರ್ ಚಾಲಕನ ನಿರ್ಲಕ್ಷ್ಯತೆಯಿಂದ ಡಿಕ್ಕಿ ಮಾಡಿದೆ. ಇದರಿಂದ ತೀವ್ರ ಗಾಯಗೊಂಡ ವೀರಭದ್ರಪ್ಪ ಮೃತಪಟ್ಟಿದ್ದಾರೆ. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿದ ಘಟನೆ ಹಾಸನ ತಾಲೂಕಿನ ಗೊರೂರು ಸಮೀಪದ ಬಿಎಸ್ಎನ್ಎಲ್ ಕಚೇರಿ ಬಳಿ ನಡೆದಿದೆ.
ತಾಲೂಕಿನ ಕಟ್ಟಾಯ ಹೋಬಳಿ, ಗೊರೂರು ಗ್ರಾಮದ ನರಸಿಂಹಯ್ಯ (74) ಮೃತಪಟ್ಟ ದುರ್ದೈವಿ. ಅವರು ಅರಕಲಗೂಡು-ಗೊರೂರು ರಸ್ತೆ, ಬಿಎಸ್ಎನ್ಎಲ್ ಕಚೇರಿ ರಸ್ತೆ ಎಡಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಆಗ ಮೋಟಾರ್ಬೈಕ್ ಚಾಲಕ ನಿರ್ಲಕ್ಷ್ಯತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಮಾಡಿದ್ದಾನೆ. ಇದರಿಂದ ತೀವ್ರ ಗಾಯಗೊಂಡ ನರಸಿಂಹಯ್ಯ ಅವರನ್ನು ಮಂಗಳಾ ಆಸ್ಪತ್ರೆಗೆ ಸೇರಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ಬಗ್ಗೆ ಗೊರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

