'ವಿಜ್ಞಾನ ಅಷ್ಟೇ ಅಪಾಯಕಾರಿ'
ಹಾಸನ: ಸಮಾಜಕ್ಕೆ ಹತ್ತಿರವಾಗಿ, ಶಾಲೆ, ಮನೆಯವರನ್ನು ಪ್ರೀತಿಸಲು ಕಲಿತರೆ ಉತ್ತಮ ವ್ಯಕ್ತಿತ್ವ ಪಡೆಯಲು ಸಾಧ್ಯ ಎಂದು ಅರವಿಂದ ಶಾಲೆಯ ಹಿರಿಯ ಶಿಕ್ಷಕ ಪರಮೇಶ್ವರ ತಿಳಿಸಿದ್ದಾರೆ. ಇಲ್ಲಿನ ರಾಜೀವ ಶಿಕ್ಷಣ ಮಹಾ ವಿದ್ಯಾಲಯದಲ್ಲಿ ಇತ್ತೀಚೆಗೆ ಬಿ.ಎಡ್ ಪ್ರಶಿಕ್ಷಣಾರ್ಥಿಗಳ ವಿಜ್ಞಾನ ಸಂಘದಿಂದ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವೇಗವಾದ ಜಗತ್ತಿನಲ್ಲಿ ವಿಜ್ಞಾನದ ಕೊಡುಗೆಗಳು ಎಷ್ಟು ಉಪಯೋಗವೋ, ಅದರಷ್ಟೆ ಅಪಾಯಕಾರಿ ಕೂಡ ಎಂದು ಅಭಿಪ್ರಾಯಪಟ್ಟರು. ಮುಂದಿನ ಪೀಳಿಗೆಗೆ ಏನನ್ನು ಉಳಿಸದ, ಕೊನೆಗೆ ಉಸಿರಾಡಲು ಶುದ್ಧ ಗಾಳಿಯನ್ನು ಸಹ ನಾವು ಬಿಡುವುದಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು. ವಿಜ್ಞಾನಿ ಸರ್.ಸಿ.ವಿ ರಾಮನ್ ತಮ್ಮ ಇಡೀ ಜೀವನವನ್ನೇ ವಿಜ್ಞಾನಕ್ಕಾಗಿ ತ್ಯಾಗ ಮಾಡಿದ್ದರಿಂದಲೇ ಅವರಿಗೆ ನೊಬೆಲ್ ಪ್ರಶಸ್ತಿ ಲಭಿಸಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಸುದೀಶ ತರ್ಕಬದ್ದವಾಗಿ ಯೋಚಿಸಿ, ವಿಮರ್ಶಾತ್ಮಕವಾಗಿ ಚಿಂತಿಸುವ ಮನೋಭಾವವೇ ವಿಜ್ಞಾನ ಎಂದರು. ಉಪನ್ಯಾಸಕರಾದ ಉಮಾ, ಸೋಮಶೇಖರ, ನವೀನ, ಪವಿತ್ರ, ಮಿನಿವರ್ಗೀಸ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

