ಟ್ರ್ಯಾಕ್ಟರ್ ಡಿಕ್ಕಿ; ಬೈಕ್ ಸವಾರ ಸಾವು
ಹೊಳೆನರಸೀಪುರ: ತಿರುವು ರಸ್ತೆಯಲ್ಲಿ ವೇಗವಾಗಿ ಬಂದ ಟ್ರ್ಯಾಕ್ಟರ್ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಟ್ರ್ಯಾಕ್ಟರ್ ಟ್ರೈಲರ್ಗೆ ಸಿಲುಕಿ ಬೈಕ್ ಸವಾರ ಮೃತಪಟ್ಟ ಘಟನೆ ಪಟ್ಟಣದ ಹೊರವಲಯದಲ್ಲಿನ ಕಡವಿನಕೋಟೆ ಗ್ರಾಮದ ಬಳಿಯ ಬೆಟ್ಟದ ಸಾತೇನಹಳ್ಳಿ ತಿರುವಿನ ಬಳಿ ಸೋಮವಾರ ಸಂಜೆ ನಡೆದಿದೆ. ರಾಜ್ಯರಸ್ತೆ ಸಾರಿಗೆ ಸಂಸ್ಥೆಯ ನಿವೃತ್ತ ನಿರ್ವಾಹಕ ಬೆಟ್ಟದಸಾತೇನಹಳ್ಳಿ ಗ್ರಾಮದ ಬಿ.ವಿ. ವೀರಭದ್ರಪ್ಪ (58) ಮೃತಪಟ್ಟ ದುರ್ದೈವಿ. ಅಪಘಾತ ನಡೆದ ಕೂಡಲೇ ಚಾಲಕ ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾನೆ. ಪಟ್ಟಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೂಜುಕೋರರ ಬಂಧನ
ಅರಸೀಕೆರೆ: ತಾಲೂಕಿನ ಜೆ.ಸಿ.ಪುರ ಗ್ರಾಮದ ಪುಟ್ಟಗವಿ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಅಂದರ್ಬಾಹರ್ ಆಡುತ್ತಿದ್ದ 7 ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಇತ್ತೀಚೆಗೆ ನಡೆದಿದೆ. ಸಮಿ, ದಾಸಪ್ಪ, ಮುಜಾಹಿದ್, ನೂರುಲ್ಲಾ, ಸಿದ್ದಪ್ಪ, ರಾಜಶೇಖರ, ಗೌಸಿಯಾ ಎಂಬವರೇ ಬಂಧಿತ ಜೂಜಕೋರರು. ಪಣಕ್ಕಿಟ್ಟಿದ್ದ ಸುಮಾರು 10074 ನಗದನ್ನು ವಶಪಡಿಸಿಕೊಂಡಿರುವ ಗ್ರಾಮಾಂತರ ಪೊಲೀಸರು ದೂರು ದಾಖಲಿಸಿದ್ದಾರೆ.
ಬೈಕ್ ಸವಾರ ಸಾವು
ಬೇಲೂರು: ತಾಲೂಕಿನ ದೇವಿಹಳ್ಳಿಗ್ರಾಮದ ವಾಸಿ ಬ್ರಹ್ಮೇಶ ಉರುಫ್ ಪಾಪಣ್ಣ ಅವರು ಮೂಳೇನಹಳ್ಳಿ ಗ್ರಾಮದ ವಾಸಿ ವಿರೂಪಾಕ್ಷ (40) ಎಂಬವರ ಬೈಕಿನ ಹಿಂಭಾಗದಲ್ಲಿ ಕುಳಿತುಕೊಂಡು ಹಗರೆ ಕಡೆಗೆ ಬರುತ್ತಿದ್ದಾಗ ಹಳೇಬೀಡು ಕಡೆಯಿಂದ ಬಂದ ಟಿವಿಎಸ್ ಎಕ್ಸ್ಎಲ್ ಮೊಪೆಡ್ ಡಿಕ್ಕಿ ಮಾಡಿದ್ದು, ಇದರಿಂದ ವಿರೂಪಾಕ್ಷ ಮೃತಪಟ್ಟಿದ್ದಾರೆ. ಈ ಬಗ್ಗೆ ಹಳೇಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮದ್ಯ ವಶ
ಬೇಲೂರು: ಪಟ್ಟಣದ ಹಳೇ ಮಾರ್ಕೆಟ್ಲ್ಲಿರುವ ರಜತ ಹೊಟೇಲ್ನ ಮಾಲಿಕ ನಿಂಗೇಗೌಡರವರು ಅಕ್ರಮವಾಗಿ ಮದ್ಯಮಾರಾಟ ಮಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಸ್ಥಳದಲ್ಲಿದ್ದ 235 ರು. ಬೆಲೆಯ 180 ಎಂಎಲ್ನ ವಿಸ್ಕಿ ಮತ್ತು 90 ಎಂಎಲ್ನ ಮ್ಯಾಕ್ಡೋಲ್ ವಿಸ್ಕಿಯನ್ನು ವಶಪಡಿಸಿಕೊಂಡಿರುವ ಘಟನೆ ಇತ್ತೀಚೆಗೆ ನಡೆದಿದೆ. ಆರೋಪಿ ಪರಾರಿಯಾಗಿದ್ದು, ಪಟ್ಟಣ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯುವಕ ನಾಪತ್ತೆ
ಅರಸೀಕೆರೆ: ತಾಲೂಕಿನ ಈಡಿಗರಹಟ್ಟಿಗ್ರಾಮದ ವಾಸಿ ಗಂಗಮ್ಮ ಎಂಬವರ ಪುತ್ರ ಗೋಪಿ ಉರುಫ್ ಬಾಬು (22) ತನ್ನ ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಕೆಲಸಕ್ಕೂ ಹೋಗದೆ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿರುವ ಘಟನೆ ಇತ್ತೀಚೆಗೆ ನಡೆದಿದೆ. 5.5 ಅಡಿ ಎತ್ತರ, ಕಪ್ಪು ಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಕನ್ನಡ ಮತ್ತು ತೆಲುಗು ಮಾತನಾಡುತ್ತಾನೆ. ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಬೈಕ್ ಕಳವು
ಹೊಳೆನರಸೀಪುರ: ಪಟ್ಟಣದ ಕಾರ್ಯಾಲಯ ಬಡಾವಣೆ ವಾಸಿ ಮೋಹನಕುಮಾರ್ ತಮ್ಮ ಮನೆಯ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ 20 ಸಾವಿರ ರು. ಮೌಲ್ಯದ ಬಜಾಜ್ ಡಿಸ್ಕವರಿ ಬೈಕನ್ನು ಕಳವು ಮಾಡಿರುವ ಘಟನೆ ನಡೆದಿದೆ. ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

