ಅಪಘಾತ: ಬೈಕ್ ಸವಾರ ಸಾವು
ಅರಸೀಕೆರೆ: ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರನೊಬ್ಬ ಸಾವನ್ನಪ್ಪಿರುವ ಘಟನೆ ಅಗ್ಗುಂದ ಗ್ರಾಮದ ಸಮೀಪ ಶುಕ್ರವಾರ ನಡೆದಿದೆ.
ತಾಲೂಕಿನ ಚಿಕ್ಕಹಲ್ಕೂರು ಗ್ರಾಮದ ವಾಸಿ ಧರಣೇಶ್ (22) ಸಾವನ್ನಪ್ಪಿದ ದುರ್ದೈವಿ.
ಧರಣೇಶ್ ಹಾಗೂ ಹೇಮಂತಕುಮಾರ ಬೈಕ್ನಲ್ಲಿ ಚಿಕ್ಕಹಲ್ಕೂರು ಗ್ರಾಮದಿಂದ ಅರಸೀಕೆರೆ ಕಡೆಗೆ ಹೊರಟಿದ್ದರು. ಅಗ್ಗುಂದ ಗ್ರಾಮದ ಸಮೀಪ ಹರಳಕಟ್ಟಿ ಗ್ರಾಮದ ವಾಸಿ ವಿರೂಪಾಕ್ಷ ಎಂಬಾತ ತನ್ನ ಬೈಕನ್ನು ನಿರ್ಲಕ್ಷ್ಯತೆಯಿಂಜ ಓಡಿಸಿಕೊಂಡು ಬಂದಿದ್ದು, ಎರಡೂ ಬೈಕ್ಗಳು ರಸ್ತೆಯ ಮಧ್ಯ ಭಾಗದಲ್ಲಿ ಪರಸ್ಪರ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ, ಧರಣೇಶ ಸಾವನ್ನಪ್ಪಿದ್ದಾರೆ. ವಿರೂಪಾಕ್ಷಗೆ ಗಾಯವಾಗಿದೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಟೆಂಪೋ ಡಿಕ್ಕಿ: ವ್ಯಕ್ತಿ ಸಾವು
ಚನ್ನರಾಯಪಟ್ಟಣ: ಟೆಂಪೋ ಹಾಗೂ ಬೈಕ್ ಪರಸ್ಪರ ಡಿಕ್ಕಿಯೊಡೆದ ಪರಿಣಾಮ, ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಚೋಗಿಪುರದ ಸಮೀಪ ಶುಕ್ರವಾರ ನಡೆದಿದೆ.ತಾಲೂಕಿನ ನುಗ್ಗೇಹಳ್ಳಿ ಹೋಬಳಿ, ದೊಡ್ಡೇರಿ ಗ್ರಾಮದ ವಿಷಕಂಠೇಗೌಡ (40) ಸಾವನ್ನಪ್ಪದ ದುರ್ದೈವಿ. ವಿಷಕಂಠೇಗೌಡ ಚನ್ನರಾಯಪಟ್ಟಣ ಜೋಗಿಪುರ ಗ್ರಾಮದಿಂದ ಸ್ವಲ್ಪ ಮುಂದೆ ಬಿ.ಎಂ.ರಸ್ತೆಯ ಇಳಿಜಾರಿನಲ್ಲಿ ಹೋಗುತ್ತಿದ್ದಾಗ ಬೆಂಗಳೂರು ಕಡೆಯಿಂದ ಬಂದ 407 ವಾಹನದ ಚಾಲಕ ಅತಿವೇಗದಿಂದ ಬಂದು ಡಿಕ್ಕಿಯೊಡೆದಿದ್ದಾನೆ ಈ ಸಂದರ್ಭದಲ್ಲಿ ವಿಷಕಂಠೇಗೌಡ ಸಾವನ್ನಪ್ಪಿದ್ದಾರೆ.
ಈ ಸಂಬಂಧ ನಂಜೇಗೌಡ ಎಂಬುವರು ಚನ್ನರಾಯಪಟ್ಟಣ ನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಬೈಕ್ನಿಂದ ಬಿದ್ದು ಮಹಿಳೆ ಸಾವು
ಹೊಳೆನರಸೀಪುರ: ಬೈಕ್ ನಿಯಂತ್ರಣ ತಪ್ಪಿದ ಪರಿಣಾಮ, ಬೈಕ್ ಹಿಂಬದಿಯಲ್ಲಿ ಕುಳಿತ್ತಿದ್ದ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ತಾಲೂಕಿನ ಕೆಂಬಾರಹಳ್ಳದ ಸಮೀಪ ಶುಕ್ರವಾರ ನಡೆದಿದೆ.ತಾಲೂಕಿನ ಹಳೇಕೋಟೆ ಹೋಬಳಿ, ಅಂಥೋಣಿ ನಗರದ ಪ್ರಮೀಳಾ (30) ಸಾವನ್ನಪ್ಪಿದ ದುರ್ದೈವಿ. ಪ್ರಮೀಳಾ, ತಮ್ಮ ಪತಿ ಬಾಬು ಬೈಕ್ನಲ್ಲಿ ಹಿಂಬದಿಯಲ್ಲಿ ಕುಳಿತುಕೊಂಡು ತಮ್ಮ ಗ್ರಾಮದಿಂದ ಚನ್ನರಾಯಪಟ್ಟಣಕ್ಕೆ ಹೋಗಲು ಅಂಥೋಣಿ ನಗರ ಕೆಂಬಾರಹಳ್ಳದ ಹತ್ತಿರ ಹೋಗುತ್ತಿದ್ದಾಗ, ಬೈಕ್ ರಸ್ತೆಗೆ ಬಿದ್ದ ಪರಿಣಾಮ, ಪ್ರಮೀಳಾ ಅವರಿಗೆ ತೀವ್ರ ಗಾಯವಾಗಿದ್ದು, ಚಿಕಿತ್ಸೆಗಾಗಿ ಹಾಸನದ ಎಸ್ಎಸ್ಎಂ ಆಸ್ಪತ್ರೆಗೆ ಸೇರಿಸಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮದ್ಯೆ ಪ್ರಮೀಳಾ ಸಾವನ್ನಪ್ಪಿದ್ದಾರೆ. ಹೊಳೆನರಸೀಪುರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜೂಜು: 8 ಮಂದಿ ಬಂಧನ
ಅರಕಲಗೂಡು: ಜಿಲ್ಲೆಯ ಪ್ರತ್ಯೇಕ ಪ್ರಕರಣದಲ್ಲಿ 8 ಜನರನ್ನು ಬಂಧಿಸಿರುವ ಘಟನೆ ಶುಕ್ರವಾರ ನಡೆದಿದೆ.
ತಾಲೂಕಿನ ವಿಜಾಪುರ ಕಾಲೋನಿಯ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ಜಗುಲಿಯ ಮೇಲೆ ಅಂದರ್ ಬಾಹರ್ ಜೂಟಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ಪಟ್ಟಣದ ಮಂಜು (30), ಕೃಷ್ಣ (34), ರಾಮ (40) ಮತ್ತು ಕುಮಾರ (36) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ಸುಮಾರು ರು. 3050 ನಗದು ವಶಪಡಿಸಿಕೊಂಡಿದ್ದಾರೆ.ಅರಕಲಗೂಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಸಕಲೇಶಪುರ ತಾಲೂಕಿನ ಚಂಗಡಿಹಳ್ಳಿಯ ಹೆಗ್ಗಡಿಯಲ್ಲಿ ಮಠದ ಹಿಂದೆ ಇರುವ ದಿಣ್ಣೆಯಲ್ಲಿ ಅಂದರ್ ಬಾಹರ್ ಜೂಟಾಡುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ತಾಲೂಕಿನ ಚಂಗಡಿಹಳ್ಳಿಯ ಪುನೀತ್(21), ಶನಿವಾರ ಸಂತೆಯ ರವಿಕುಮಾರ (27), ಹೆಗ್ಗಡಹಳ್ಳಿಯ ಚಂದ್ರಶೇಖರ್ (24) ಎಂಬವರನ್ನು ಬಂಧಿಸಿದ್ದು, ಜೂಜಾಟದಲ್ಲಿ ಪಣಕ್ಕಿಟ್ಟಿದ್ದ ರು. 2200 ನಗದನ್ನು ವಶಪಡಿಸಿಕೊಂಡಿದ್ದಾರೆ. ಯಸಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ನಾಪತ್ತೆ
ಚನ್ನರಾಯಪಟ್ಟಣ: ತಾಲೂಕಿನ ಹಿರಿಸಾವೆ ಹೋಬಳಿ, ಜಿನ್ನೇನಹಳ್ಳಿಕೊಪ್ಪಲು ಗ್ರಾಮದ ವಾಸಿ ನಾಗರಾಜ ಎಂಬುವರ ಪುತ್ರಿ ಜೆ.ಎನ್.ಚೈತ್ರಾ(19) ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಬಿಳಿ ಬಣ್ಣ, ದುಂಡು ಮುಖ, ಕನ್ನಡ ಭಾಷೆ ಮಾತನಾಡುತ್ತಾಳೆ. ಮನೆಯಿಂದ ಹೋಗುವಾಗ ಹಸಿರು ಮತ್ತು ಬಿಳಿ ಬಣ್ಣದ ಚೂಡಿದಾರ ಧರಿಸಿರುತ್ತಾಳೆ.ಈ ಸಂಬಂಧ ಕಾಣೆಯಾದವಳ ತಂದೆ ನಾಗರಾಜು ಹಿರಿಸಾವೆ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಅಪಘಾತ: ವಿದ್ಯಾರ್ಥಿ ಸಾವು
ಆಲೂರು: ತಾಲೂಕಿನ ಮಗ್ಗೆ-ಆಲೂರು ರಸ್ತೆಯಲ್ಲಿ ನಿಂತಿದ್ದ ಟಿಪ್ಪರ್ ಲಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ತಾಲೂಕಿನ ಕಣಿವೆ ಬಸವನಹಳ್ಳಿ ಗ್ರಾಮದ ಗೋಪಿ ಎಂಬುವರ ಪುತ್ರ ವಿಕಾಸ (14) ಶನಿವಾರ ಮೃತಪಟ್ಟಿದ್ದಾನೆ. ಈ ಅಪಘಾತದಿಂದ ಮೃತಪಟ್ಟವರ ಸಂಖ್ಯೆ 3ಕ್ಕೇರಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

