ಹಾಸನ

ಪೊಲೀಸರ ಭರ್ಜರಿ ಬೇಟೆ

Published On :

ಹಾಸನ: ಜಿಲ್ಲಾ ಪೊಲೀಸರು ಭರ್ಜರಿ ಬೇಟೆ ನಡೆಸಿ ದೇವಾಲಯ, ಮನೆಗಳಲ್ಲಿ ಕಳವು ಮಾಡುತ್ತಿದ್ದ ಮತ್ತು ಮಹಿಳೆಯರಿಂದ ಚಿನ್ನದ ಸರ ಎಗರಿಸುತ್ತಿದ್ದ 36 ಕಳ್ಳರನ್ನು ಬಂಧಿಸಿ, 49, 16, 500 ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ಸಿಯಾಗಿದ್ದಾರೆ.
 35 ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದ 36 ಆರೋಪಿಗಳನ್ನು ಬಂಧಿಸಿದ್ದು, 19. 64 ಲಕ್ಷ ರು. ಮೌಲ್ಯದ ಬೆಲೆ ಬಾಳುವ ಚಿನ್ನ-ಬೆಳ್ಳಿ ಆಭರಣವನ್ನು ಸಂಬಂಧಪಟ್ಟವರಿಗೆ ಬುಧವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ವಿತರಿಸಲಾಯಿತು.
 ಈ ಸಂದರ್ಭದಲ್ಲಿ ಮಾತನಾಡಿದ  ಜಿಲ್ಲಾ ಎಸ್ಪಿ ಅಮಿತ್‌ಸಿಂಗ್, ನಗರ ಮತ್ತು ಜಿಲ್ಲಾದ್ಯಂತ ಅಪರಾಧ ಪ್ರಕರಣಗಳು ನಡೆಯುವುದನ್ನು ತಪ್ಪಿಸಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಹೇಳಿದರಲ್ಲದೇ, ಕಳವುವಾದ ಆಭರಣ ಮತ್ತಿತರ ಮಾಹಿತಿಗಳನ್ನು ನೀಡಿದರು.
 ಹೊಳೆನರಸೀಪುರ ವೃತ್ತ ವ್ಯಾಪ್ತಿಯಲ್ಲಿ ಕಳ್ಳತನವಾದ 3.95 ಲಕ್ಷ ರು. ಬೆಲೆ ಬಾಳುವ ವಸ್ತುಗಳನ್ನು, ಬೇಲೂರು ವೃತ್ತಕ್ಕೆ ಸಂಬಂಧ ಪಟ್ಟ 3 .36 ಲಕ್ಷ ರು, ಅರಸೀಕೆರೆ ಗ್ರಾಮಾಂತರ ವೃತ್ತದ ವ್ಯಾಪ್ತಿಯಲ್ಲಿ ಕಳವು ಮಾಡಲಾಗಿದ್ದ 2 ಲಕ್ಷ ರು. ಮೌಲ್ಯದ ಚಿನ್ನದ ವಾಲೆ, ಸರ, ಬಳೆ ಹಾಗೂ ಬೆಳ್ಳಿ ವಸ್ತುಗಳನ್ನು, ಆಲೂರು ಪೊಲೀಸ್ ಠಾಣೆ ವ್ಯಾಪ್ತಿಯ ಕಳವುಗೊಂಡ 90 ಸಾವಿರ ಮೌಲ್ಯದ ವಸ್ತುಗಳನ್ನು , ಚನ್ನರಾಯಪಟ್ಟಣ ವೃತ್ತದಲ್ಲಿ ನಾನಾ ಪ್ರಕರಣಗಳಲ್ಲಿ ಕಳವು ಮಾಡಲಾಗಿದ್ದ 9 ಲಕ್ಷ ಮೌಲ್ಯದ ಚಿನ್ನಾಭರಣವನ್ನು  ಮಾಲೀಕರಿಗೆ ನೀಡಲಾಗಿದೆ ಎಂದು ಎಸ್ಪಿ ತಿಳಿಸಿದರು.  ಜಿಲ್ಲೆಯ ನಾನಾ ತಾಲ್ಲೂಕಿ ನಲ್ಲಿ ಜನವರಿ 2012 ರಿಂದ  ಡಿಸೆಂಬರ್ 12 ರ ವರೆಗೆ 254 ಕಳವು ಪ್ರಕರಣಗಳಲ್ಲಿ ಪತ್ತೆ ಹಚ್ಚಿ 340 ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ 2,74,45,353 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. 2012 ರಲ್ಲಿ ಶೇಕಡವಾರು 56.74 ರಷ್ಟು ಪತ್ತೆ ಕಾರ್ಯ ನಡೆದಿದೆ ಎಂದರು. ಇದೆ ವೇಳೆ ವಾಹನಗಳ ಕಳ್ಳತನವು ಹೆಚ್ಚು ಆಗುತ್ತಿರುವುದರ ಬಗ್ಗೆ   ಈಗಾಗಲೇ ಇದರ ಬಗ್ಗೆ ಹೆಚ್ಚಿನ ಗಮನ ವಹಿಸಲಾಗಿದೆ ಎಂದು ಹೇಳಿದರು.   ವಿದ್ಯಾರ್ಥಿನಿಯರು ಕಾಲೇಜು ಮುಗಿದ ಮೇಲೆ ರಸ್ತೆಯಲ್ಲಿ ಭಯಭೀತರಾಗಿ ಓಡಾಡುವ ಪರಿಸ್ಥಿತಿ ಹೆಚ್ಚಾಗಿರುವ ಬಗ್ಗೆ ನಿಗಾವಹಿಸಲಾಗುವುದು. ಕಾಲೇಜು ಬಿಡುವ ಸಮಯದಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸುವ ಭರವಸೆ ನೀಡಿದರು.
 ಕೆಲ ಮುಖ್ಯ ರಸ್ತೆಯಲ್ಲಿ ಸೈಕ್ಲಿಂಗ್ ಕಾಟ ಹೆಚ್ಚಾಗಿದ್ದು, ಅತಿ ವೇಗವಾಗಿ ಓಡಿಸುವ ವಾಹನಗಳ ವಿಚಾರವಾಗಿ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು. ಸಹಾಯಕ ಪೊಲೀಸ್ ಅಧಿಕಾರಿ ಯಡಾ ಮಾರ್ಟಿನ್ ಇತರರು ಇದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.