ಹಾಸನ

ಇಂದು ತಾಲೂಕಿಗೆ ದೇವೇಗೌಡರ ಭೇಟಿ

Published On :

ಚನ್ನರಾಯಪಟ್ಟಣ: ತಾಲೂಕಿನಲ್ಲಿ ಜನತಾದಳ(ಜಾ) ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಜ.24ರಂದು ತಾಲೂಕಿನ ಹೋಬಳಿ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ ಎಂದು ತಾಲೂಕು ಜೆಡಿಎಸ್ ಮುಖಂಡ ಸಿ.ಎನ್.ಬಾಲಕೃಷ್ಣ ತಿಳಿಸಿದರು. ಗುರುವಾರ ಬೆಂಗಳೂರಿನಿಂದ ಹಿರೀಸಾವೆಗೆ ಆಗಮಿಸುವ ಮಾಜಿ ಪ್ರಧಾನಿ ದೇವೇಗೌಡ ಹಿರೀಸಾವೆ ಬಿ.ಎಂ ರಸ್ತೆಯ ಶ್ರೀಕಂಠಯ್ಯ ಸರ್ಕಲ್‌ನಲ್ಲಿ  ಕಾರ್ಯಕರ್ತರನ್ನು ಮಾತನಾಡಿದ ನಂತರ ಶ್ರವಣಬೆಳಗೊಳದ ಎಪಿಎಂಸಿ ಮಾರ್ಕೆಟ್‌ಯಾರ್ಡ್  ಬಾಗೂರು  ಹಾಗೂ  ನುಗ್ಗೇಹಳ್ಳಿಯಲ್ಲಿ ಸಂತೆ ಮೈದಾನ ನಂತರ ಪಟ್ಟಣದ ಎಪಿಎಂಸಿ ಯಾರ್ಡ್‌ನಲ್ಲಿ  ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ತಿಳಿಸಿದರು. ಜೆಡಿಎಲ್‌ಪಿ ನಾಯಕ ಎಚ್.ಡಿ ರೇವಣ್ಣ ಪಾಲ್ಗೊಳ್ಳಿದ್ದಾರೆಂದರು.
ಸಹಾಯಕ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಅರಸೀಕೆರೆ ತಾಲ್ಲೂಕಿನ ಬೆಳುವಳ್ಳಿ, ಬಾಳೇನಹಳ್ಳಿ, ಚರ್ಚ್ ಕಾಲೋನಿ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಸಹಾಯಕಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಜನವರಿ 31 ಕೊನೆಯ ದಿನ. ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವಣದ್ಧಿ ಯೋಜನಾಧಿಕಾರಿ, ಅರಸೀಕೆರೆ ಇವರನ್ನು ಸಂಪರ್ಕಿಸಲು ಕೋರಿದೆ.
ಶಾಲಾ ಕಟ್ಟಡಗಳ ಉದ್ಘಾಟನೆ
ಅರಕಲಗೂಡು: ತಾಲೂಕಿನ ವಿವಿಧ ಶಾಲಾ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮ ಜ. 24 ಗುರುವಾರ ನಡೆಯಲಿದೆ. ಶಾಸಕ ಎ. ಮಂಜು ವಿವಿಧ ಕಟ್ಟಡ ಉದ್ಘಾಟಿಸುವರು. ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ 4.6 ಲಕ್ಷ ರು. ವೆಚ್ಚದಲ್ಲಿ  ನಿರ್ಮಿಸಲಾಗಿರುವ ಶಾಲಾ ಮುಖ್ಯ ಶಿಕ್ಷಕರ ಕೊಠಡಿ, ದೊಡ್ಡಗಾವನಹಳ್ಳಿ, ಕಳ್ಳಿ ಮುದ್ದನಹಳ್ಳಿ ಅತ್ನಿ ಉಪ್ಪಾರಕೊಪ್ಪಲು ಶಾಲಾ ಕೊಠಡಿಗಳನ್ನು ಶಾಸಕರು ಉದ್ಘಾಟಿಸುವರು. ಗಂಜಲಗೂಡು ಗ್ರಾಮ ಪ್ರೌಢಶಾಲೆಯ ಎರಡು ಕೊಠಡಿ ಉದ್ಘಾಟನೆ ಮತ್ತು ಪ್ರಾಥಮಿಕ ಶಾಲೆಯ ಒಂದು ಕೊಠಡಿಯ ಶಂಕುಸ್ಥಾಪನೆ ನೆರವೇರಲಿದೆ.ಇದರ ಒಟ್ಟು ವೆಚ್ಚ 15.72 ಲಕ್ಷ ರೂಗಳು.ತಾಲೂಕಿನ ದೇವೀಪುರದಲ್ಲಿ 3.2ಲಕ್ಷ ರೂ ವೆಚ್ಚದ ಅಂಗನವಾಡಿ ಕಟ್ಟಡದ ಉದ್ಘಾಟನೆಯೂ ಇದೇ ವೇಳೆ ನಡೆಯಲಿದೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.