ಅರಕಲಗೂಡು: ನಾಳೆ ಬಿಎಸ್‌ಪಿ ಸಮಾವೇಶ
ಅರಕಲಗೂಡು: ಬಹುಜನರ ಸ್ವಾಭಿಮಾನಿ ರಾಜಕೀಯ ಸಮಾವೇಶ ಜ. 25ರಂದು ಬೆಳಿಗ್ಗೆ 11ಕ್ಕೆ ಪಟ್ಟಣದ ಶಿಕ್ಷಕರ ಭವನ ಮುಂಭಾಗ ನಡೆಯಲಿದೆ ಎಂದು ಅರಕಲಗೂಡು ವಿಧಾನಸಭಾ ಬಿಎಸ್ಪಿ ಅಭ್ಯರ್ಥಿ ಬಿ.ಸಿ.ರಾಜೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಇಂದಿನ ದಿನಗಳಲ್ಲಿ ಜಾತಿಗೊಂದು ಪಕ್ಷ ಹುಟ್ಟಿಕೊಳ್ಳುತ್ತಿರುವ ಸಂದರ್ಭದಲ್ಲಿ ಬಹುಜನರಾದ ದಲಿತರು,ಹಿಂದುಳಿದವರ ಸಂಘಟನೆಗೆ ಕಾರ್ಯಕ್ರಮ ನೆರವಾಗಿದೆ ಎಂದು ಹೇಳಿದರು.
ಉಳಿದ ಯಾವುದೇ ರಾಜಕೀಯ ಪಕ್ಷಗಳು ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಹೆಸರನ್ನು ಇದುವರೆಗೂ ಘೋಷಣೆ ಮಾಡಿಲ್ಲ. ಇದು ಆಪಕ್ಷಗಳಲ್ಲಿ ಒಗ್ಗಟ್ಟು ಇಲ್ಲದಿರುವುದನ್ನು ಸಾಬೀತುಮಾಡಿದೆ. ಬಿಎಸ್ಪಿ ಕಳೆದ ಒಂದು ವಾರದಿಂದಲೂ ಇಡೀ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವ್ಯಾಪ್ತಿಯಲ್ಲಿ ಸಂಚಾರ ಆರಂಭಿಸಿದೆ. ತಾಲೂಕಿನ ವಿಧಾನಸಭಾ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ಮತಗಳು ಬಹುಸಂಖ್ಯಾತ ದಲಿತ ಸಮುದಾಯದಲ್ಲಿದ್ದು, ಈ ಮತಗಳು ವಿಂಗಡಣೆಯಾಗದಂತೆ ಜನತೆಯಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸುಮಾರು 10 ಸಾವಿರ ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ಸಂಚಾಲಕ ಎನ್.ಮಹೇಶ್,ಜಿಲ್ಲಾಧ್ಯಕ್ಷ ಎ.ಪಿ.ಅಹಮದ್,ಪ್ರಧಾನ ಕಾರ್ಯದರ್ಶಿ ಕುಮಾರಗೌರವ್, ಉಪಾಧ್ಯಕ್ಷ ದೇವರಾಜು ಮುಂತಾದವರು ಭಾಗವಹಿಸುತ್ತಿದ್ದಾರೆ. ತಾಲೂಕಿನ ವಿಧಾನಸಭೆ ವ್ಯಾಪ್ತಿಯ ಎಲ್ಲಾ ದಲಿತ,ಹಿಂದುಳಿದ ಬಾಂಧವರು ಆಗಮಿಸಬೇಕೆಂದು ಅವರು ಮನವಿ ಮಾಡಿದರು. ಬಿಎಸ್ಪಿ ತಾಲೂಕು ಅಧ್ಯಕ್ಷ ಹರೀಶ್‌ಅತ್ನಿ, ಚಿನ್ನಸ್ವಾಮಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

