ಅಭ್ಯರ್ಥಿಗಳಿಂದ ಮತ ಭಿಕ್ಷೆ...
ಹಾಸನ: ಮಿನಿ ಕದನಕ್ಕೆ ಈಗ ಅಖಾಡ ಸಿದ್ದವಾಗಿದೆ.
ಗೆಲ್ಲಲು ಬೇಕಾದ ಎಲ್ಲಾ ಬಗೆಯ ಕಸರತ್ತುಗಳನ್ನು ಆರಂಭಿಸಿದ್ದಾರೆ. ಮತದಾನ ಆರಂಭಕ್ಕೂ ಮೊದಲು ತಮಗಿಷ್ಟವಾದ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಬ್ಯಾನರ್,
ಕಟೌಟ್ಗಳು ಕಾಣ ಸಿಗದಿದ್ದರೂ ಕರಪತ್ರಗಳೊಂದಿಗೆ ಮನೆ ಮನೆ ಬಾಗಿಲಿಗೆ ತೆರಳಿ ಮತದಾರರನ್ನು ಒಲಿಸಿಕೊಳ್ಳುವ ಯತ್ನ ಮಾಡುತ್ತಿದ್ದು, ಬೈಕ್ ರ್ಯಾಲಿಯನ್ನು ಕೂಡ ಅಲ್ಲಲ್ಲಿ ನಡೆಸಲಾಗುತ್ತಿದೆ.
ಜಿಲ್ಲೆಯ 1 ನಗರಸಭೆ, 5 ಪುರಸಭೆ ಮತ್ತು 2 ಪಟ್ಟಣ ಪಂಚಾಯ್ತಿಗಳ 177 ಸ್ಥಾನಗಳಿಗೆ ಅಂತಿಮವಾಗಿ 749 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಇದು ಕೆಟ್ಟದಕ್ಕೆ ಒಳ್ಳೇಯದಕ್ಕೂ ಎಂಬುದು ರಾಜಕೀಯದಲ್ಲಿ ಮುಳುಗಿರುವವರೆಗೂ ತಿಳಿಯುತ್ತಿಲ್ಲ. ಅದೆನೆಂದರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷೇತರರು ಸ್ಪರ್ಧಿಸಿದ್ದಾರೆ. ಅತಂತ್ರ ಪರಿಸ್ಥಿತಿ ಉಂಟಾದರ ಅದರ ಲಾಭ ಪಡೆದು ಅಧಿಕಾರ ಗಿಟ್ಟಿಸಿಕೊಳ್ಳುವ ತಂತ್ರಗಾರಿಕೆಯೇ ಪಕ್ಷೇತರರಾಗಿ ನಿಲ್ಲುವುದರ ಹಿಂದೆ ಇದೆ ಹೊರತು ಇನ್ನೇನು ಅಲ್ಲ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಮತದಾರರು ಇದಕ್ಕೆ ಅವಕಾಶ ನೀಡುವರೇ ಎಂಬುದು ಯಕ್ಷ ಪ್ರಶ್ನೆಯಾಗಿಯೇ ಇದೆ.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಇತಿಹಾಸವನ್ನು ಕೆದಕಿ ನೋಡಿದರೇ ಹಾಸನ ನಗರಸಭೆ ಮತ್ತು ಪಟ್ಟಣ ಪಂಚಾಯ್ತಿ ಬಿಟ್ಟರೆ 5 ಪುರಸಭೆಗಳಲ್ಲಿ ಅತಂತ್ರ ಸ್ಥಿತಿ ಉದ್ಭವಿಸಿರಲಿಲ್ಲ. 2007 ರ ಚುನಾವಣೆಯಲ್ಲಿ ಹಾಸನ ನಗರಸಭೆಗೆ ಜೆಡಿಎಸ್ 16, ಕಾಂಗ್ರೆಸ್ 11, ಬಿಜೆಪಿ 2 ಮತ್ತು ಪಕ್ಷೇತರು 6 ಕ್ಷೇತ್ರಗಳಲ್ಲಿ ಗೆದ್ದಿದ್ದರು. ಇದರಿಂದ ಅತಂತ್ರ ಸ್ಥಿತಿ ಉಂಟಾಗಿತ್ತು. ಪರಿಣಾಮ ಪಕ್ಷಾಂತರದ ಪರ್ವವೇ ನಡೆಯಿತು. ಹಾಗೆಯೇ ಅರಕಲಗೂಡು ಮತ್ತು ಆಲೂರು ಪಟ್ಟಣ ಪಂಚಾಯ್ತಿಗಳಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಕ್ಕಿರಲಿಲ್ಲ.
ಹಾಸನ ನಗರಸಭೆ 3, 11, 28, 14 ಮತ್ತು 29 ನೇ ವಾರ್ಡ್ ಗಳಲ್ಲಿ ಜೆಡಿಎಸ್ಬ್ಂಡಾಯ ಎದುರಿಸಬೇಕಾಗಿದೆ. ಆದರೆ ಕಾಂಗ್ರೆಸ್ಗೆ ಅಭ್ಯರ್ಥಿಗಳೇ ಸಿಕ್ಕಿದ್ದೇ ಹೆಚ್ಚಾಯಿತು ಎನ್ನುವ ಸ್ಥಿತಿ ಇತ್ತು. ಆದರೂ ವಾರ್ಡ್ 9 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಹೂಡಿಲ್ಲ.
ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಯ ಒಟ್ಟು ಸ್ಥಾನಗಳು 180. ಆದರೆ ಹೊಳೆನರಸೀಪುರದ 9 ನೇ ವಾರ್ಡ್ನಿಂದ ಜೆಡಿಎಸ್ನ ಎಚ್.ವಿ. ಸುರೇಶ್ಕುಮಾರ್ (ಸಾಮಾನ್ಯ) ಮತ್ತು 4 ನೇ ವಾರ್ಡ್ನಿಂದ ಸುಮ (ಹಿಂದುಳಿದ ವರ್ಗ ಎ) ಹಾಗೂ ಆಲೂರು ಪಟ್ಟಣ ಪಂಚಾಯ್ತಿಯ 2 ನೇ ವಾರ್ಡ್ನಿಂದ ಎಚ್.ಎಸ್. ನಾಗರತ್ನ (ಪರಿಶಿಷ್ಟ ಪಂಗಡ ಮಹಿಳೆ) ಅವರು ಅವಿರೋಧವಾಗಿ ಆಯ್ಕೆ ಆಗಿರುವುದರಿಂದ 177 ಕ್ಷೇತ್ರಗಳಿಗೆ ಚುನಾವಣೆ ನಡೆಸಲಾಗುತ್ತಿದೆ.
ಪಕ್ಷೇತರರೇ ಹೆಚ್ಚು: ಜಿಲ್ಲೆಯಲ್ಲಿ ಜೆಡಿಎಸ್ನಿಂದ 175, ಕಾಂಗ್ರೆಸ್ - 169, ಬಿಜೆಪಿ - 106, ಸಿಪಿಎಂ -1, ಪಕ್ಷೇತರ - 241, ಜೆಡಿಯು -1, ಬಿಎಸ್ಆರ್ -4, ಕೆಜೆಪಿ- 51, ಎಸ್ ಡಿಪಿಐ -1 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.
ಹಾಸನ ನಗರಸಭೆ- 35 ವಾರ್ಡ್ಗಳಿಂದ 198 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದು, ಜೆಡಿಎಸ್ - 35, ಕಾಂಗ್ರೆಸ್ -33, ಬಿಜೆಪಿ - 25, ಸಿಪಿಎಂ -1, ಪಕ್ಷೇತರ - 97, ಕೆಜೆಪಿ - 6 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಅರಸೀಕೆರೆ ಪುರಸಭೆ-- 27 ವಾರ್ಡ್ಗಳಿಂದ 101 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್ - 27, ಕಾಂಗ್ರೆಸ್ - 26, ಬಿಜೆಪಿ - 13, ಪಕ್ಷೇತರ - 35 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಚನ್ನರಾಯಪಟ್ಟಣ ಪುರಸಭೆ- 23 ವಾರ್ಡ್ಗಳಿಂದ 90 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಜೆಡಿಎಸ್- 23,ಕಾಂಗ್ರೆಸ್ -23, ಬಿಜೆಪಿ- 20,ಪಕ್ಷೇತರ -22, ಬಿಎಸ್ಆರ್- 1,ಕೆಜೆಪಿ-1 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಬೇಲೂರು ಪುರಸಭೆ- 23 ವಾರ್ಡ್ಗಳಿಂದ 91 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ - 21, ಕಾಂಗ್ರೆಸ್ - 23, ಬಿಜೆಪಿ - 18, ಪಕ್ಷೇತರ - 15, ಕೆಜೆಪಿ - 14 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಹೊಳೆನರಸೀಪುರ ಪುರಸಭೆ- 21 ವಾರ್ಡ್ಗಳಿಂದ 61 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ - 21, ಕಾಂಗ್ರೆಸ್ -8, ಬಿಜೆಪಿ - 5, ಪಕ್ಷೇತರ - 12, ಜೆಡಿಯು -1, ಬಿಎಸ್ಆರ್ -2, ಕೆಜೆಪಿ - 2 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಸಕಲೇಶಪುರ ಪುರಸಭೆ- 23 ವಾರ್ಡ್ಗಳಿಂದ 106 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಅವರಲ್ಲಿ ಜೆಡಿಎಸ್ -23, ಕಾಂಗ್ರೆಸ್ -22, ಬಿಜೆಪಿ -15, ಪಕ್ಷೇತರ 27, ಕೆಜೆಪಿ - 19 ಅಭ್ಯರ್ಥಿಗಳು.
ಅರಕಲಗೂಡು ಪಟ್ಟಣ ಪಂಚಾಯ್ತಿಯ 15 ವಾರ್ಡ್ಗಳಿಂದ 59 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ - 15, ಕಾಂಗ್ರೆಸ್ - 15, ಬಿಜೆಪಿ -7, ಪಕ್ಷೇತರ - 22 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಆಲೂರು ಪಟ್ಟಣ ಪಂಚಾಯ್ತಿಯ 10 ವಾರ್ಡ್ಗಳಿಂದ 43 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಜೆಡಿಎಸ್ - 10, ಕಾಂಗ್ರೆಸ್ -9, ಬಿಜೆಪಿ -3, ಪಕ್ಷೇತರ -11, ಬಿಎಸ್ಆರ್ -1, ಕೆಜೆಪಿ -9 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

