ಹಾಸನ

ರೇಲ್ವೆ ಬಜೆಟ್ 2013 ಏನಂತಾರೆ...?

Published On :

ಕೇಂದ್ರ ರೈಲ್ವೆ ಬಜೆಟ್ನಲ್ಲಿ ಚಿಕ್ಕಮಗಳೂರಿಂದ ಸಕಲೇಶಪುರಕ್ಕೆ ರೈಲು ಸಂಚಾರ ಬಿಟ್ಟರೆ ಬೇರೆ ಯಾವುದೇ ರೀತಿಯ ಅನುಕೂಲವಾಗಿಲ್ಲ. ಇದು ಚುನಾವಣಾ ಬಜೆಟ್.
-ಎಚ್.ಟಿ.ಚಂದ್ರಶೇಖರ್, ಜಿಲ್ಲಾ ವಾಣಿಜ್ಯ ಕೈಗಾರಿಕಾ ಮಂಡಳಿ ಅಧ್ಯಕ್ಷ

ಜಿಲ್ಲೆಯಿಂದ ಹೊರ ಜಿಲ್ಲೆ ಹಾಗೂ ರಾಜ್ಯಕ್ಕೆ ರೈಲು ಸಂಪರ್ಕವೇ ಇಲ್ಲದಂತಾಗಿದ್ದು, ಬಾಂಬೆ ಹಾಗೂ ಇತರೆ ಕಡೆಗಳಿಗೆ ತೆರಳಲು ಬೆಂಗಳೂರಿನಂತಹ ನಗರಕ್ಕೆ ಹೋಗಬೇಕಾಗಿದೆ. ಪ್ರತಿ ಬಾರಿಯೂ ಜಿಲ್ಲೆಗೆ ಅನ್ಯಾಯವಾಗುತ್ತಿದೆ.
-ಬಾನು ಮುಷ್ತಾಕ್, ಸಾಹಿತಿ

ಜಿಲ್ಲೆಯಲ್ಲಿ ಹಾಸನ-ಬೆಂಗಳೂರು ಮಾರ್ಗವನ್ನು ಪೂರ್ಣಗೊಳಿಸಿ, ನಂತರ ಚಿಕ್ಕಮಗಳೂರು-ಸಕಲೇಶಪುರ ಮಾರ್ಗವನ್ನು ಪ್ರಸ್ತಾಪಿಸಬೇಕಿತ್ತು. ರೈಲ್ವೆಯನ್ನು ಖಾಸಗೀಕರಣ ಗೊಳಿಸುತ್ತಿರುವುದು ಖಂಡನೀಯ.
-ಧರ್ಮೇಶ್, ಸಿಐಟಿಯು ಕಾರ್ಯದರ್ಶಿ

ರಾಜ್ಯಕ್ಕೆ ಹೇಳಿಕೊಳ್ಳುವಂತಹ ಬಜೆಟ್ ನೀಡಿಲ್ಲ. ಜಿಲ್ಲೆಯಲ್ಲಿ ಹಳೇ ಕಾಮಗಾರಿಗಳೇ ಪೂರ್ಣಗೊಂಡಿಲ್ಲ. ಅದನ್ನು ಪೂರ್ಣಗೊಳಿಸಬೇಕಿತ್ತು. ಜೊತೆಗೆ ವಾರಕ್ಕೊಮ್ಮೆ ಎಕ್ಸ್ಪ್ರೆಸ್ ರೈಲನ್ನು ಬಿಟ್ಟಿರುವುದರಿಂದ ಪ್ರಯೋಜನವಾಗುವುದಿಲ್ಲ.
-ನಾಗೇಂದ್ರ ಗುಪ್ತ, ಉದ್ಯಮಿ

ಚಿಕ್ಕಮಗಳೂರು-ಸಕಲೇಶಪುರ ನಡುವೆ ಹೊಸ ರೈಲು ಮಾರ್ಗ ನೀಡಿರುವುದು ಅನುಕೂಲವಾಗಿದ್ದು, ಬೆಂಗಳೂರು-ಮಂಗಳೂರಿಗೆ ಎಕ್ಸ್ಪ್ರೆಸ್ ರೈಲು ಅನುಕೂಲವಾಗದು.
-ಕಿಶೋರ್ಕುಮಾರ್, ಮಲೆನಾಡು ಜನಪರ ಹೋರಾಟ ಸಮಿತಿ ಅಧ್ಯಕ್ಷ

ರೈಲ್ವೆ ಬಜೆಟ್ ಜಿಲ್ಲೆಗೆ ಯಾವುದೇ ರೀತಿ ತೃಪ್ತಿದಾಯಕ ತಂದಿಲ್ಲ. ಹಳೇ ಮಾರ್ಗವೇ ಇನ್ನೂ ಪೂರ್ಣಗೊಂಡಿಲ್ಲ. ಅಂತಹದರಲ್ಲಿ ಚಿಕ್ಕಮಗಳೂರು-ಸಕಲೇಶಪುರ ಹೊಸ ಮಾರ್ಗಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 
-ತ್ರಿನೇಶ್.ಡಿ.ಎನ್. ವಿದ್ಯಾರ್ಥಿ

ಹಾಸನದಿಂದ ಬೆಂಗಳೂರು ಹಾಗೂ ಮಂಗಳೂರಿಗೆ ಹೆಚ್ಚಿನ ರೈಲಿನ ಆವಶ್ಯಕತೆ ಇತ್ತು. ಆದ್ರೆ ಅದು ರೈಲ್ವೆ ಬಜೆಟ್ನಲ್ಲಿ ಸಾಕಾರಗೊಂಡಿಲ್ಲ. ಹಾಸನ-ಶ್ರಮವಣಬೆಳಗೊಳ ಮಾರ್ಗವನ್ನು ಬೆಂಗಳೂರಿಗೆ ವಿಸ್ತರಿಸಬೇಕಿತ್ತು.
-ರೂಪ ಹಾಸನ್, ಸಾಹಿತಿ

ಜಿಲ್ಲೆಗೆ ಇರುವಂತಹ ರೈಲುಗಳು ಸಾಲದು. ಇನ್ನೂ ಹೆಚ್ಚಿನ ಪ್ಯಾಸೆಂಜರ್ ರೈಲುಗಳನ್ನು ನೀಡಬೇಕಿತ್ತು. ಈ ಬಗ್ಗೆ ಬಜೆಟ್ ಪ್ರಸ್ತಾಪವಾಗಿಲ್ಲ. ಸಾರಿಗೆ ದರ ಹೆಚ್ಚಾಗಿದ್ದು, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
-ಕೇಶವೇಗೌಡ, ರೈತ

ರೈಲ್ವೆ ಬಜೆಟ್ನಲ್ಲಿ ಜಿಲ್ಲೆಗೆ ಮಲತಾಯಿ ಧೋರಣೆ ಮಾಡಿದೆ. ಕೇಂದ್ರ ಸರ್ಕಾರಕ್ಕೆ ಜಿಲ್ಲೆಯ ಬಗ್ಗೆ ಕಿಂಚಿತ್ತ್ತೂ ಕಾಳಜಿ ಇಲ್ಲ. ಹಾಸನ-ಬೆಂಗಳೂರು ಮಾರ್ಗ ಪೂರ್ಣಗೊಳ್ಳದಿರುವುದು ಘೋರ ಅನ್ಯಾಯ.
-ಸಂದೇಶ್.ಕೆ.ಆರ್, ಅತಿಥಿ ಉಪನ್ಯಾಸಕ

ರೈಲ್ವೆ ಬಜೆಟ್ ನೀರಸ. ರಾಜ್ಯ ಹಾಗೂ ಜಿಲ್ಲೆಗೆ ಯಾವುದೇ ರೀತಿಯ ಸಮರ್ಪಕವಾದ ನೂತನ ರೈಲ್ವೆ ಯೋಜನೆಗಳಿಗೆ ಗ್ರೀನ್ ಸಿಗ್ನಲ್  ನೀಡದಿರುವುದು ಮಲತಾಯಿ ಧೋರಣೆಯಾಗಿದೆ. ಚುನಾವಣೆ ದೃಷ್ಟಿಕೋನದ ಬಜೆಟ್ ಅಷ್ಟೇ.
-ವೇದಮೂರ್ತಿ, ಅತಿಥಿ ಉಪನ್ಯಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.