ಹಾಸನ

ನೀತಿ ಸಂಹಿತೆ ಜಾರಿಗೆ ಸಂಚಾಲನಾ ಅಧಿಕಾರಿ

Published On :

ಹಾಸನ: ನಗರ, ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾ ಸಂಚಾಲನಾ ಆಧಿಕಾರಿಯನ್ನಾಗಿ ಹಾಸನದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲ ಸಾರಿಗೆ ಇಲಾಖೆಯ ಸೂಪರಿಂಟೆಂಡೆಂಟ್ ಎಂಜಿನಿಯರ್ ಜಗಲಾಸರ ಅವರನ್ನು  ನೇಮಕ ಮಾಡಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿ ಕೆ.ಪಿ.ಮೋಹನ್ ರಾಜ್ ಆದೇಶ ಹೊರಡಿಸಿದ್ದಾರೆ.
ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಮತ್ತು ಅವರ ಪರವಾಗಿ ಜಿಲ್ಲಾ ಮಟ್ಟದಲ್ಲಿ ನಡೆಸುವ ಸಭೆ, ಪ್ರಚಾರ ಸಭೆಗಳು, ಮೆರವಣಿಗೆ ಯಾವುದೇ ರೀತಿಯ ಬೈಕ್ ರ್ಯಾಲಿ, ಧ್ವನಿವರ್ಧಕ ಬಳಕೆ ಅಥವಾ ಯಾವುದೇ  ಸೌಕರ್ಯಕ್ಕಾಗಿ ಅನುಮತಿ ಕೋರಿದಲ್ಲಿ ಅದನ್ನು ಪರಿಶಿಲಿಸಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿ ಪರವಾಗಿ ಅನುಮತಿ ನೀಡುವ ಕರ್ತವ್ಯ ನಿರ್ವಹಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.
ಎಂಸಿಸಿ ತಂಡದ ಮುಖ್ಯಸ್ಥರೊಡನೆ:  ಜಿಲ್ಲೆಯ 8 ತಾಲೂಕುಗಳಲ್ಲಿ ರಚಿಸಲಾಗಿರುವ ಎಂಸಿಸಿ ತಂಡದ ಮುಖ್ಯಸ್ಥರೊಡನೆ (ತಹಶೀಲ್ದಾರ್‌ಗಳೊಡನೆ) ಸಂಪರ್ಕ ಇರಿಸಿಕೊಂಡು ಪ್ರತಿದಿನವೂ ಅವರೊಂದಿಗೆ ಸಮಾಲೋಚಿಸಲು ಜಗಲಾಸರರಿಗೆ ಸೂಚಿಲಾಗಿದೆ.
ದೈನಂದಿನ ಶಾಂತಿ ಸುವ್ಯವಸ್ಥೆಯ ಸ್ಥಿತಿಗತಿ ಮತ್ತು ಚುನಾವಣೆಗೆ ಸಂಬಂಧಿಸಿದಂತೆ ನೀಡಲಾಗುವ ದೂರುಗಳ ಬಗ್ಗೆ ಪರಿಶೀಲಿಸಿ ತನಿಖೆ ಮಾಡಿ ಉತ್ತರ ನೀಡಬೇಕಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಯ ದೂರುಗಳ ಬಗ್ಗೆ ಕ್ರಮ ಕೈಗೊಂಡ ಕುರಿತು ವರದಿಗಳನ್ನು ಆಯಾಯ ದಿನದಂದೆ ಸಂಜೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾಧಿಕಾರಿಯವರನ್ನು ಖುದ್ದು ಭೇಟಿ ಮಾಡಿ ವಿವರಿಸುವಂತೆ ನಿರ್ದೇಶನ ನೀಡಲಾಗಿದೆ.
ದಿನ ಪತ್ರಿಕೆಗಳು, ವಾರ ಪತ್ರಿಕೆಗಳಲ್ಲಿ ಬರುವ ದೂರುಗಳ ಬಗ್ಗೆ ಪತ್ರಿಕಾ ತುಣುಕುಗಳನ್ನು ಕತ್ತರಿಸಿ ಯಾರ ವಿರುದ್ಧ ದೂರು ಬಂದಿರುವುದೋ ಆ ಅಧಿಕಾರಿಯ ವಿರುದ್ಧ ತನಿಖೆ ಮಾಡಿಸುವ ಸಂದರ್ಭದಲ್ಲಿ ಸಂಬಧಪಟ್ಟ ಅಧಿಕಾರಿಯಿಂದ ವರದಿ ಪಡೆದು ಆ ಪ್ರಾಧಿಕಾರಕ್ಕೆ ತಿಳಿಸುವುದು ಹಾಗೂ ನಿಯಮಗಳಂತೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.