ರಕ್ಷಣೆ ಭರವಸೆ: ರೈತರ ಧರಣಿ ವಾಪಸ್
ಚಿಂಚೋಳಿ: ಶಾದಿಪುರ ಗ್ರಾಮದಲ್ಲಿ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಕಂದಾಯ ಇಲಾಖೆಯಲ್ಲಿ ಸರಿಯಾಗಿಲ್ಲ. ಹಿಂದಿನ ಅಧಿಕಾರಿಗಳು ಮಾಡಿದ ತಪ್ಪಿನಿಂದಾಗಿ ತಹಸೀಲ್ದಾರ್ ಕಚೇರಿಗೆ ರೈತರು ಅಲೆಯುವಂತಾಗಿದೆ. ಈ ಬಗ್ಗೆ ಪರಿಶೀಲಿಸಿ ರೈತರಿಗೆ ಬಿತ್ತನೆಗೆ ಪೊಲೀಸ್ ರಕ್ಷಣೆ ನೀಡಲಾಗುವುದೆಂದು ತಹಸೀಲ್ದಾರ್ ಯಲ್ಲಪ್ಪ ಸುಬೇದಾರ್ ಭರವಸೆ ನೀಡಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ಶಾದಿಪುರ ಗ್ರಾಮದ ಸರಕಾರಿ ಜಮೀನು ಸರ್ವೆ ನಂ. 126/1ಮತ್ತು 126/3 ಹಾಗೂ 127/3 ರಲ್ಲಿ ಒಟ್ಟು 59 ಜನರಿಗೆ ರಕ್ಷಣೆ ನೀಡುವಂತೆ ತಹಸೀಲ್ದಾರ್ ಕಚೇರಿ ಎದುರು ಶುಕ್ರವಾರದಿಂದ ಧರಣಿ ಸತ್ಯಾಗ್ರಹ ನಡೆಸಲಾಗುತ್ತಿದೆ.
ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿ ಮಾತನಾಡಿದ ಸುಬೇದಾರ, ತಾಲೂಕು ಕಂದಾಯ ಇಲಾಖೆಯಿಂದ 2011- 12ರಲ್ಲಿ ಹೆಚ್ಚುವರಿ ಭೂಮಿಯನ್ನು ಹರಿಜನ, ಗಿರಿಜನ್, ಮಾಜಿ ಸೈನಿಕರಿಗೆ ಮಂಜೂರು ಮಾಡಲಾಗಿದೆ. ಆದರೆ ದಾಖಲೆಗಳಲ್ಲಿ ಮಾತ್ರ ಕೆಲವರ ಹೆಸರುಗಳಿದ್ದು, ಇನ್ನುಳಿದ ರೈತರ ಹೆಸರುಗಳಿಲ್ಲ. ಶಾದಿಪುರ ರೈತರ ಬಗ್ಗೆ ಸಹಾಯಕ ಆಯುಕ್ತರು ಸೇಡಂ ಅವರಿಗೆ ವಿವರಿಸಲಾಗಿದೆ ಎಂದರು.
ಬಡವರು ಬಲಿಪಶು: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಭೀಮಶೆಟ್ಟಿ ಎಂಪಳ್ಳಿ ಮಾತನಾಡಿ, ಜಮೀನು ಕಬ್ಬೆಯಲ್ಲಿ ಕೊಡದೆ ಅವರ ಹೆಸರಿನಲ್ಲಿ ಪಹಣಿ ಮತ್ತು ನಕಾಶೆ ನೀಡಿದ್ದಾರೆ. ಕಂದಾಯ ಅಧಿಕಾರಿಗಳು ಮೋಸ ಮಾಡಿ ಬಡ ರೈತರಿಗೆ ಅನ್ಯಾಯ ಮಾಡಿದ್ದಾರೆ. ಭೂ ಮಾಲೀಕರ ಅಮಿಷಕ್ಕೆ ಒಳಗಾಗಿ ಬಡವರು ಬಲಿ ಪಶುಗಳಾಗಿದ್ದಾರೆಂದು ಹೇಳಿದರು. ಚಿನ್ನಯ್ಯ ಕಾವಲಿ, ಮಲ್ಲಮ್ಮ ಕೊಡ್ಲಿ, ನಾಮದೇವ್ ರಾಠೋಡ್, ಗೋಪಾಲ ಭಜಂತ್ರಿ, ದೇವೇಂದ್ರಪ್ಪ ಸಜ್ಜನ್, ಪ್ರಭು ಕರಕನಳ್ಳಿ, ಜೈಶಂಕರ ಕೊರವಿ, ಶಾರದಾಬಾಯಿ ಚವ್ಹಾಣ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.
ತಹಸೀಲ್ದಾರ್ ಯಲ್ಲಪ್ಪಾ ಸುಬೇದಾರ ನೀಡಿದ ಭರವಸೆಯಿಂದ ಧರಣಿ ಸತ್ಯಾಗ್ರಹ ವಾಪಸ್ ಪಡೆದುಕೊಳ್ಳಲಾಯಿತು. ಚಿಂಚೋಳಿ ಪಿಎಸೈ ಸುಭಾಶಚಂದ್ರ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

