ಗುಲ್ಬರ್ಗಾ

ಕರ್ತವ್ಯ ಲೋಪ ಶಿಕ್ಷಕರ ಅಮಾನತು

Published On :

ಯಾದಗಿರಿ: ಕರ್ತವ್ಯ ಲೋಪ ಮತ್ತು ಶಾಲಾವಧಿಯಲ್ಲಿ ಅಸಭ್ಯ ವರ್ತನೆ ತೋರಿದ ಇಬ್ಬರು ಪ್ರಾಥಮಿಕ ಶಾಲಾ ಸಹ ಶಿಕ್ಷಕರನ್ನು ಶಹಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಆದೇಶ ಹೊರಡಿಸಿದ್ದಾರೆ. ಶಹಾಪುರ ತಾಲೂಕಿನ ಕಂದಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ರಮೇಶ್ ಮತ್ತು ಕೃಷ್ಣಮೂರ್ತಿ ಎಂಬುವವರೇ ಅಮಾನತಾದ ಶಿಕ್ಷಕರು. ಶಾಲಾವಧಿಯಲ್ಲಿ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಶಹಾಪುರ ಬಿಇಒ ಆದೇಶದಲ್ಲಿ ತಿಳಿಸಿದ್ದಾರೆ.



ಕಳ್ಳಭಟ್ಟಿ ಸಾರಾಯಿ ಜಪ್ತಿ
ಯಾದಗಿರಿ: ತಾಲೂಕಿನ ಆಶಾನಾಳ ತಾಂಡದಲ್ಲಿ ಯಾದಗಿರಿ ಜಿಲ್ಲೆಯ ಅಬಕಾರಿ ಉಪ ಆಯುಕ್ತ ಸೂರ್ಯಕಾಂತ ಸುಣಗಾರ ಅವರ ನೇತೃತ್ವದಲ್ಲಿ ಅಬಕಾರಿ ದಾಳಿ ಮಾಡಿ ಸುಮಾರು ರು. 12000 ಮೌಲ್ಯದ 10.ಲೀ ಕಳ್ಳ ಭಟ್ಟಿ ಸಾರಾಯಿ ಮತ್ತು 100 ಲೀ. ಬೆಲ್ಲದ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ. ಆಶನಾಳ ಗ್ರಾಮದ ದೇವಿಬಾಯಿ ಗಂಡ ರೇವ್ಯಾ ನಾಯಕ ಎಂಬುವವರ ಮನೆ ಮೇಲೆ ದಾಳಿ ಮಾಡಿ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಸರಸ್ವತಿ ಅಬಕಾರಿ ಉಪ ನಿರೀಕ್ಷಕರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ದಾಳಿಯಲ್ಲಿ ಉಪ ಅಧೀಕ್ಷಕ ಮಹ್ಮದ್ ಇಸ್ಮಾಯಿಲ್, ಇನಾಮದಾರ ನಿರೀಕ್ಷಕ ವಿಠಲರಾವ್ ಎಂ. ವಾಲಿ, ಶಾಂತೇಶ ಕಮತಾರ, ನೂರ್ ಮಹ್ಮದ್,  ಸಾಧಿಕ ಹುಸೇನ್ ಸಿಬ್ಬಂದಿ ಎನ್ ಸಾಯಪ್ಪ, ಪಾಂಡುರಂಗ, ನಾರಾಯಣ ರಾಠೋಡ, ವಾಹನ ಚಾಲಕ ಶರಣಪ್ಪ ದೇಸಾಯಿ ಭಾಗವಹಿಸಿದರು ಎಂದು ಅಬಕಾರಿ ನಿರೀಕ್ಷಕರು ಯಾದಗಿರಿ ವಲಯ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.