ಅತ್ಯಾಚಾರ, ದೌರ್ಜನ್ಯ ವಿರುದ್ಧ ಬಂಡೇಳಿ
ಆಳಂದ: ಅತ್ಯಾಚಾರ, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಮತ್ತು ಮಕ್ಕಳ ಪರ ಎಲ್ಲರು ಧ್ವನಿಯಾಗಿ ನಿಂತು ಪೊಲೀಸರಿಗೆ ದೂರು ನೀಡಿದರೆ ಮಾತ್ರ ಅಪರಾಧಿಗಳಿಗೆ ತಕ್ಕ ಶಾಸ್ತಿ ನೀಡಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ಸಾಧ್ಯವಾಗುತ್ತದೆ ಎಂದು ಸಿಪಿಐ ಕೆ.ಎಚ್. ಹಟ್ಟಿ ಹೇಳಿದರು. ಪಟ್ಟಣದ ಗುರುಭವನದಲ್ಲಿ ಪೊಲೀಸ್ ಇಲಾಖೆ ಸೋಮವಾರ ಏರ್ಪಡಿಸಿದ್ದ ಮಹಿಳೆಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರ ವಿರುದ್ಧ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
1098 ಉಚಿತ ಕರೆ: ಸಾರ್ವಜನಿಕ ಸ್ಥಳ, ಶಾಲಾ, ಕಾಲೇಜುಗಳಲ್ಲಿ ಹೆಣ್ಮಕ್ಕಳಿಗೆ ಚುಡಾಯಿಸಿದರೆ, ಕಿರುಕುಳ ಇನ್ನಿತರ ಹಿಂಸೆ ಅಲ್ಲದೆ, ನೆರೆ, ಹೊರೆಯವರು ಅಸಭ್ಯವಾಗಿ ವರ್ತಿಸಿದರೆ 1098 ಉಚಿತ ಕರೆಗೆ ದೂರು ಕೊಡಬೇಕೆಂದರು. ಮಹಿಳಾ ಸಂಘದ ಸದಸ್ಯೆಯರು, ಮುಖಂಡರು ಇಂಥ ಅನೈತಿಕ ಚಟುವಟಿಕೆ ಗೊತ್ತಿದ್ದರು ನಿರ್ಲಕ್ಷ್ಯ ವಹಿಸದೆ ದೂರು ಕೊಡಬೇಕು. ತಪ್ಪಿತಸ್ಥರಿಗೆ ಗೂಂಡಾ ಕಾಯ್ದೆಯಡಿ ಬಂಧಿಸಲಾಗುವುದು. ಅನ್ಯಾಯ ಸಹಿಸಿಕೊಳ್ಳದೆ ಧೈರ್ಯದಿಂದ ಬದುಕಬೇಕೆಂದು ಮಹಿಳೆಯರಿಗೆ ಕರೆ ನೀಡಿದರು. ಪುರಸಭೆ ಸಮುದಾಯ ಸಂಘಟನೆ ಅಧಿಕಾರಿ ನಾಗರತ್ನ ದೇಶಮಾನೆ ಹಾಗೂ ಸಿಡಿಪಿ ರಾಮಣ್ಣಾ ಮಾತನಾಡಿದರು. ಪಿಎಸ್ಐ ಮಹಾದೇವ ಪಂಚಮುಖಿ ಅವರು ಪ್ರಾಸ್ತಾವಿಕ ಮಾತನಾಡಿದರು. ಪುಷ್ಪಾವತಿ ಚಟ್ಟಿ ಮತ್ತು ಶಾಂತಾಬಾಯಿ ತಟ್ಟಿ ಪ್ರಾರ್ಥನೆ ಗೀತೆ ಹಾಡಿದರು. ಅಂಗನವಾಡಿ ಕಾರ್ಯಕರ್ತೆಯರು, ಮಹಿಳಾ ಸಂಘದವರಿದ್ದರು.
ಬಿಸಿಲು ಬೆಳದಿಂಗಳ ವೇದಿಕೆ
ಅತ್ಯಾಚಾರಿಗಳಿಗೆ ಕ್ರೂರ ಶಿಕ್ಷೆ ವಿಧಿಸಬೇಕು, ಅವರ ವಿರುದ್ಧ ಚಾರ್ಜ್ ಶೀಟ್ ದಾಖಲಿಸುವಲ್ಲಿ ಪೊಲೀಸರು ವಿಳಂಬ ಮಾಡುತ್ತಿದ್ದಾರೆ. ಇದು ನಿಲ್ಲಬೇಕು, ಪೊಲೀಸರಿಗೆ ಈ ವಿಚಾರದಲ್ಲಿ ಸಂವೇದನಾಶೀಲರಾಗಿರುವಂತೆ ಮಾಡಬೇಕೆಂದು ಆಗ್ರಹಿಸಿ ಬಿಸಿಲು- ಬೆಳದಿಂಗಳು ವೇದಿಕೆಯ ಕಾರ್ಯಕರ್ತೆಯರು ನಗರದಲ್ಲಿ ಹೋರಾಟ ನಡೆಸಿದರು. ಇದೇ ಸಂದರ್ಭದಲ್ಲಿ ಅತ್ಯಾಚಾರಿ ಪ್ರತಿಕೃತಿ ಮಾಡಿ ಜಿಲ್ಲಾದಿಕಾರಿ ಕಚೇರಿ ಮುಂದೆ ನೇಣು ಹಾಕುವ ಮೂಲಕ ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಗುಲ್ಬರ್ಗದಲ್ಲಂತೂ ಕೆಲ ಕಾಮುಕರು ಮನೋರೋಗಿಗಳಂತೆ ವರ್ತಿಸುತ್ತಿದ್ದಾರೆ. ಇಂತಹ ಘಟನೆಗಳು ಬೆಳಕಿಗೆ ಬಂದರೂ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ತಮ್ಮ ಪಾಡಿಗೆ ತಾವಿದ್ದಾರೆ. ಇದರಿಂದಾಗಿ ಅತ್ಯಾಚಾರ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿವೆ ಎಂದು ಹೋರಾಟಗಾರರು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಸಲ್ಲಿಸಿರುವ ಮನವಿಯಲ್ಲಿ ದೂರಿದ್ದಾರೆ.
ವಜಾಕ್ಕೆ ಆಗ್ರಹ
ಅತ್ಯಾಚಾರದ ದೂರು ಪಡೆದು ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಬದಲು ನೌಕರಿಯಿಂದಲೇ ವಜಾ ಮಾಡಬೇಕು ಎಂದೂ ಸಂಘಟನೆಯವರು ಆಗ್ರಹಿಸಿದ್ದಾರೆ. ಜನವಾದಿ ಮಹಿಳಾ ಸಂಘದ ಅಮೀನಾ ಬೇಗಂ, ಚಂದಮ್ಮ ಗೋಳಾ, ಜಗದೇವಿ ನೂಲಕರ್, ವಿಶಲ ಕುಲ್ಕರ್ಣಿ, ಪ್ರಿಯಾಂಕಾ, ಶಾಂತೇಶ, ರಾಹುಲ್, ಸಂಗೀತಾ, ಪೂಜಾ, ಕಪೀಲ, ಮಿಥುನ, ಕೈಲಾಸ, ರೇಣುಕಾ, ಇಂದುಮತಿ, ಮಹೇಶ ಸೇರಿದಂತೆ ಅನೇಕರು ಹೋರಾಟದಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

