ಗುಲ್ಬರ್ಗಾ

ಸೋಯಾ ಬಿತ್ತಿ ರೈತನಿಗೆ ಚಿಂತಿ

Published On :

ಕ.ಪ್ರ. ವಾರ್ತೆ ್ಣ ಆಳಂದ ್ಣ ಜು. 20
ತಾಲೂಕಿನ ಅನ್ನದಾತನ ಪಾಲಿಗೆ ಮುಂಗಾರು ಹಂಗಾಮು ದುಪ್ಪಟ್ಟು ತೊಂದರೆಯ ಕಾಲವಾಗಿ ಪರಿಣಮಿಸಿದೆ. ಏಕೆಂದರೆ ಮೊದಲೇ ಮಳೆ ಇಲ್ಲ ಎಂದು ಕಂಗಾಲಾಗಿರುವ ರೈತ ಈ ಬಾರಿ ಅಲ್ಪಸ್ವಲ್ಪ ಮಳೆ ಬಂತಲ್ಲ ಎಂದು ಅಲಸಂದಿ(ಸೋಯಾಬಿನ್) ಬಿತ್ತಿದ್ದಾನೆ, ಆದರೆ ಬಿತ್ತಿದ ಬೀಜ ನಾಟಿಯಾಗದೆ ಕಂಗಾಲಾಗುವಂತಾಗಿದೆ.
ಜೂನ್ ತಿಂಗಳಲ್ಲಿ ಕೃಷಿ ಇಲಾಖೆಯ ಮೂಲಕ ವಿತರಿಸಲಾದ ಸೋಯಾಬಿನ್ ಬಿತ್ತನೆ ಬೀಜವು ಪ್ರಾಥಮಿಕ ವರದಿಯಂತೆ ತೆಲಾಕುಣಿ, ಖಜೂರಿ ಮತ್ತಿತರ ಕಡೆ ಬಿತ್ತನೆ ಕೈಗೊಂಡು 15 ದಿನಗಳಾದರೂ ಬೀಜದ ಮೊಳಕೆ ಒಡೆದಿಲ್ಲ. ಹೀಗಾಗಿ ಕಳಪೆ ಪಟ್ಟದಿಂದ ಕೂಡಿದ ಬೀಜವನ್ನು ವಿತರಿಸಲಾಗಿದೆ ಎಂದು ರೈತರು ಶಂಕೆ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಇಲಾಖೆ ಮೇಲೂ ಶಂಕೆ: ಈ ಪ್ರಕರಣದಿಂದಾಗಿ ಇದುವರೆಗೆ ಖಾಸಗಿ ಕಂಪನಿಗಳೇ ಕಳಪೆ ಬಿತ್ತನೆ ಬೀಜಗಳನ್ನು ವಿತರಿಸುತ್ತಿವೆ ಎಂಬ ಅನುಮಾನದ ಮಧ್ಯೆಯೂ ಈಗ ಸರ್ಕಾರಿ ಇಲಾಖೆಗಳಲ್ಲೂ ವಿತರಣೆಯಾಗುವ ಬೀಜದ ಮೇಲೂ ಅನುಮಾನ ಹುಟ್ಟಿಸುವಂತಾಗಿದೆ.
ತಾಲೂಕಿನ ಖಜೂರಿ ಗ್ರಾಮದ ಪ್ರಗತಿಪರ ರೈತ ಭೀಮರಾವ್ ಢಗೆ ಅವರಿಗೆ ಸೇರಿದ ಜಮೀನಿನಲ್ಲಿ 24 ಸೋಯಾಬಿನ್ ಪ್ಯಾಕೇಟ್ ಬಿತ್ತನೆ ಕೈಗೊಳ್ಳಲಾಗಿದೆ. ಆದರೆ ಜಮೀನು ತುಂಬೆಲ್ಲ ಹರಕು ಮುರುಕಾಗಿ ಬೆಳೆ ನಾಟಿಯಾಗಿದೆ ಎಂದು ಅವರು ಸುದ್ದಿಗಾರರಿಗೆ ಹೇಳಿಕೊಂಡರು.
ಹದವಾಗಿ ಮಳೆಯಾದ ಮೇಲೆ ಸರ್ವೆ ನಂಬರ್ 363 ಮತ್ತು 364 ಹಾಗೂ 200 ಅಲ್ಲದೆ ಸಾಲೇಗಾಂವ ಸರ್ವೆ ನಂಬರ್ 128ರ ಜಮೀನನಲ್ಲಿ ಕಳೆದ ಜು.8ರಂದು 30 ಎಕರೆ ಬಿತ್ತನೆ ಕೈಗೊಳ್ಳಲಾಗಿದೆ. ಬೀಜದ ದೋಷದಿಂದಾಗಿ ಬೆಳೆ ನಾಟಿಯಾಗಿಲ್ಲ. ನನ್ನದು ಹಾಗೂ ತಾಲೂಕಿನ ಇತರ ರೈತರು ಬಿತ್ತನೆ ಮಾಡಿದ ಸೋಯಾಅವರೆ ಬೆಳೆಯ ಸ್ಥಿತಿಯೂ ಹೀಗೆಯೇ ಆಗಿದೆ ಎಂದು ದೂರಿದರು.
ನಷ್ಟಕ್ಕೆ ಗುರಿ: ಕಳೆದ ಬಾರಿ 10 ಎಕರೆ ಬಿತ್ತಿ 5 ಲಕ್ಷ ಆದಾಯ ಪಡೆಯಲಾಗಿತ್ತು. ಈ ಬಾರಿ 30 ಎಕರೆ ಬಿತ್ತನೆ ಮಾಡಿ 25 ಲಕ್ಷ ಆದಾಯ ಅಂದಾಜಿಸಲಾಗಿತ್ತಾದರೂ ಬಿತ್ತನೆ ಬೀಜ ನಾಟಿಯಾದಿರುವುದು ನಷ್ಟಕ್ಕೆ ಗುರಿಯಾಗಿದೆ ಎಂದರು.
ತೆಲಾಕುಣಿ ಗ್ರಾಮದ 150 ಎಕರೆ ಪ್ರದೇಶದಲ್ಲಿ ಇದೇ ಬೀಜವನ್ನು ಬಿತ್ತನೆ ಮಾಡಲಾಗಿದೆ. ಅಲ್ಲೂ ಬೆಳೆ ನಾಟಿಯಾಗಿಲ್ಲ. ಗ್ರಾಮದ ರವಿಂದ್ರ ಪಾಟೀಲರ 4 ಎಕರೆ, ಸದಾಶಿವ ಏಟೆ 3, ಏಕನಥ ಏಟೆ 5, ಶ್ರೀಮಂತರಾವ್ ರಾಯೆ 3, ಹಣಮಂತರಾವ್ ಪಾಟೀಲ್ 4, ಸಚಿನ್ ಹತ್ತಿ 5, ಸಿದ್ಧಲಿಂಗ ರಾಯೆ ಅವರಿಗೆ ಸೇರಿದ 4 ಎಕರೆ ಜಮೀನಿನಲ್ಲಿ ಸೋಯಾಬಿನ್ ಬಿತ್ತನೆ ಮಾಡಲಾಗಿದೆ, ಆದರೆ ನಾಟಿಯಾಗಿಲ್ಲ ಎಂದು ನೊಂದ ಯುವ ರೈತ ಸದಾಶಿವ ಏಟೆ 'ಕನ್ನಡಪ್ರಭ'ಕ್ಕೆ ಅಳಲು ತೋಡಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.