ಆರೋಗ್ಯ ಭಾಗ್ಯಕ್ಕೆ ಆಯುರ್ವೇದ ಸಂಜೀವಿನಿ
ಶಹಾಪುರ: ಆರೋಗ್ಯ ಭಾಗ್ಯಕ್ಕೆ ಆಯುರ್ವೇದ ದಿವ್ಯೌಷಧವಾಗಿದ್ದು ಜನತೆ ಅಡ್ಡಿ ಆತಂಕಗಳಿಲ್ಲದೆ ದೇಹ ಸ್ವಾಸ್ಥ್ಯಕ್ಕೆ ಆಯುರ್ವೇದದ ಮೂಲಕ ಪರಿಣಾಮಕಾರಿ ಚಿಕಿತ್ಸೆ ಪಡೆಯಬಹುದು ಎಂದು ಶಾಸಕ ಗುರುಪಾಟೀಲ ಶಿರವಾಳ ತಿಳಿಸಿದರು.
ಜಿಪಂ, ಆಯುಷ್ ಇಲಾಖೆ ಆಶ್ರಯದಲ್ಲಿ ಬಿಆರ್ಜಿಎಫ್ ಯೋಜನೆಯಡಿ ಸಂಧಿವಾತ, ಶ್ವಾಸಕೋಶ, ಆಮ್ಲಪಿತ್ತ ಮತ್ತು ಉದರಕ್ಕೆ ಸಂಬಂಧಪಟ್ಟ ರೋಗಗಳಿಗೆ ಸಂಬಂಧಿಸಿ ಉಚಿತ ಆಯುರ್ವೇದ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಗತ್ಯಕ್ಕಿಂತ ಹೆಚ್ಚು ಆಲೋಪಥಿಕ್ ಔಷಧ ಸೇವನೆ ಮಾಡುವ ಬದಲು ಮನೆಯ ಆಹಾರ ಪದಾರ್ಥದಲ್ಲೇ ದೊರಕುವ ಔಷಧ ಗುಣದ ಆಯುರ್ವೇದ ಔಷಧ ಸೇವಿಸಿ ಆರೋಗ್ಯ ರಕ್ಷಿಸಿಕೊಳ್ಳಬೇಕು. ಸರ್ಕಾರದ ಉಚಿತ ಶಿಬಿರಗಳ ಸದುಪಯೋಗ ಪಡೆಯಬೇಕೆಂದು ಹೇಳಿದರು.
ಸರ್ಕಾರ ಪ್ರೋತ್ಸಾಹಿಸಲಿ: ಆಯುರ್ವೇದ ವೈದ್ಯರಾದ ಎ.ಡಿ. ಗಂಗನಾಳ ಮಾತನಾಡಿ, ಗಿಡಮೂಲಿಕೆಗಳಿಂದ ಲಭ್ಯವಾಗುವ ಆಯುರ್ವೇದಿಕ್ ಔಷಧ ಸ್ವಾಸ್ಥ್ಯ ರಕ್ಷಣೆಗೆ ಪೂರಕವಾಗಿದ್ದು, ಸರ್ವರು ಹೆಚ್ಚೆಚ್ಚು ಇದರ ಉಪಯೋಗ ಪಡೆಯಬೇಕು. ಆಯುರ್ವೇದ ಪದ್ಧತಿ ಅಧಿಕ ಬಳಕೆಯಾಗಲು ಸರ್ಕಾರ ಸೂಕ್ತ ಪ್ರೋತ್ಸಾಹ ನೀಡಬೇಕು. ಈ ದಿಸೆಯಲ್ಲಿ ಸ್ಥಳೀಯ ಶಾಸಕರು ಹೆಚ್ಚು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಜಿಪಂ ಸದಸ್ಯರಾದ ಹನುಮೇಗೌಡ ಮರ್ಕಲ್, ನಾಗನಗೌಡ ಸುಬೇದಾರ ಮಾತನಾಡಿದರು. ಪುರಸಭೆ ಅಧ್ಯಕ್ಷ ರಾಯಪ್ಪ ಸಾಲಿಮನಿ ಮಲ್ಲಣ್ಣ ಕಟ್ಟಿಮನಿ, ವಸಂತ ಸುರಪುರ, ಡಾ. ವೆಂಕಟೇಶ ಶಿರವಾಳಕರ್, ಡಾ. ಅನಿಲಕುಮಾರ, ಡಾ. ಜಗದೀಶ ಉಪ್ಪಿನ್ ಆಯುಷ್ ವೈದ್ಯಾಧಿಕಾರಿ ಡಾ. ಗಂಗಾಧರ ಸರಾಫ್ ಉಪಸ್ಥಿತರಿದ್ದರು. ಭೀಮಾಶಂಕರ ಬೆನಕನಹಳ್ಳಿ ನಿರ್ವಹಿಸಿದರು. ಡಾ. ಮೀರಾ ಜೋಶಿ ಪ್ರಾರ್ಥಿಸಿದರು. ಡಾ. ಪ್ರಮೋದ ಸ್ವಾಗತಿಸಿದರು. ಸಾರ್ವಜನಿಕರು ಶಿಬಿರದ ಸದುಪಯೋಗ ಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

