ಗುಲ್ಬರ್ಗಾ

ಪಾಲಿಕೆ ಯೋಜನೆಯೇ ಕಾಲಕಸ

Published On :

ಶೇಷಮೂರ್ತಿ ಅವಧಾನಿ
ಕ.ಪ್ರ. ವಾರ್ತೆ ್ಣ ಗುಲ್ಬರ್ಗ ್ಣ ಜು. 4
ನಗರ ವ್ಯಾಪ್ತಿಯಲ್ಲಿ ಉತ್ಪತ್ತಿಯಾಗುವ ಘನತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿಗೆ ಪಾಲಿಕೆ ಸಿದ್ಧಪಡಿಸಿರುವ ವಿಸ್ತೃತ ಯೋಜನೆ ಅಸಲಿ ಕಸ ಹಾಗೇ ಇಟ್ಟುಕೊಂಡಿದೆ ಎಂಬ ಆರೋಪಗಳು ಬಲವಾಗಿ ಪ್ರತಿಧ್ವನಿಸಲಾರಂಭಿಸಿವೆ.
ಏಕೆಂದರೆ ಪಾಲಿಕೆ ತ್ಯಾಜ್ಯ ವಿಲೇವಾರಿಯಲ್ಲಿನ ತನ್ನ ಯೋಜನೆ ಮಹತ್ವದ್ದು ಎಂದು ಬಣ್ಣಿಸಿ ಜು.7ರಂದು ಬೆಳಗ್ಗೆ 11 ಗಂಟೆಗೆ ಸಾರ್ವಜನಿಕ ಉದ್ಯಾನವನದಲ್ಲಿರುವ ಟೌನ್ ಹಾಲ್‌ನಲ್ಲಿ ಸಾರ್ವಜನಿಕ ಅಹವಾಲು ಆಲಿಕೆ ಸಭೆ ಏರ್ಪಡಿಸಿದೆ.
ಈ ಹಿನ್ನೆಲೆಯಲ್ಲಿ ಪಾಲಿಕೆಯ ಕಸ ವಿಲೇವಾರಿಯ ವಿಸ್ತೃತ ಯೋಜನೆ ಸುತ್ತ ಅನೇಕ ಚರ್ಚೆಗಳು ಶುರುವಾಗಿವೆ. ಈಗಾಗಲೇ ಪಾಲಿಕೆಯ ವಿಸ್ತೃತ ಯೋಜನಾ ವರದಿ ಆಳವಾಗಿ ಅಧ್ಯಯನ ಮಾಡಿರುವ ಸ್ಥಳೀಯ ಹೈ-ಕ ಪರಿಸರ ಜಾಗೃತಿ ಹಾಗೂ ಸಂರಕ್ಷಣೆ ಸಂಘಟನೆ ಯೋಜನೆ ಹಲವು ದೋಷಗಳಿಂದ ಕೂಡಿದೆ ಎಂದು ಹೇಳುವ ಮೂಲಕ ಸರ್ವರ ಗಮನ ಸೆಳೆದಿದೆ.
ಜಾತ್ರೆ-ಉರೂಸ್ ಕಸ ಎತ್ತ ಚೆಲ್ಲಬೇಕಯ್ಯ?: ಮಹಾನಗರ ಸಾಕ್ಷಿಯಾಗುವ ಶರಣಬಸವೇಶ್ವರ ಹಾಗೂ ಖಾಜಾ ಬಂದೇ ನವಾಜ್ ಜಾತ್ರೆಗಳಿಂದ, ಕಸಾಯಿಖಾನೆಗಳಿಂದ ಹಾಗೂ ಕಲ್ಯಾಣ ಮಂಟಪಗಳಿಂದ ಉತ್ಪತ್ತಿಯಾಗುವ ಕಸದ ಪ್ರಮಾಣ, ಅದರ ವೈಜ್ಞಾನಿಕ ವಿಲೇವಾರಿ ವಿಚಾರ ಯೋಜನೆಯನ್ನೂ ತಾಕೇ ಇಲ್ಲ.
ಕಸಾಯಿಖಾನೆಗಳೆಷ್ಟು?: ಈಗಾಗಲೇ ಪಾಲಿಕೆ ಹಾಗೂ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಕಾನೂನುಗಳನ್ನೆಲ್ಲ ಉಲ್ಲಂಘಿಸಿ ಕಾರ್ಯಾಚರಣೆಯಲ್ಲಿರುವ ನಗರದ ನೂರಾರು ಕಸಾಯಿಖಾನೆಗಳು ನಿತ್ಯ ಸಾಕಷ್ಟು ಕಸ ಉತ್ಪತ್ತಿಗೆ ಕಾರಣವಾಗುತ್ತಿದೆ. ಆದ್ದರೂ ಈ ಕಸ ಹೇಗೆ ಸಂಗ್ರಹಿಸಬೇಕು, ವಿಲೇವಾರಿ ಮಾಡಬೇಕು ಎಂಬ ವಿಚಾರವೂ ಸದರಿ ಯೋಜನೆ ಒಳಗೊಂಡಿಲ್ಲ.
ಪ್ರಾಣಿಗಳ ದೇಹದ ಭಾಗಗಳೇ ಇಲ್ಲಿ ಕಸ. ಇದು ಅತ್ಯಂತ ಅಪಾಯಕಾರಿ. ಹೀಗಿದ್ದರೂ ಪಾಲಿಕೆಯವರು ಯಾಕೆ ಇದನ್ನು ಗಂಭೀರವಾಗಿ ಪರಿಗಣಿಸಬಾರದು. ಇದನ್ನೆಲ್ಲ ಬದಿಗೊತ್ತಿ ವಿಸ್ತೃತ ಯೋಜನೆ ಅದ್ಹೇಗೆ ಸಿದ್ಧಪಡಿಸಲಾಯ್ತೋ...?
ಕಲ್ಯಾಣ ಮಂಟಪದ ಕಸ: ನಗರದಲ್ಲಿ ಗಲ್ಲಿಗೆ 2ರಂತೆ ಕಲ್ಯಾಣ ಮಂಟಪಗಳಿರುವಾಗ ಇಲ್ಲಿಂದ ಉತ್ಪತ್ತಿಯಾಗುವ ಕಸ ಎತ್ತಿ ಹಾಕುವವರು ಯಾರು? ಇನ್ನು ರಸ್ತೆಯಲ್ಲಿ ನಿಂತು ವ್ಯಾಪಾರ ನಡೆಸುವ 3,500ಕ್ಕೂ ಬೀದಿ ವರ್ತಕರಿಂದ ಉತ್ಪತ್ತಿಯಾಗುವ ಕಸದ ಬಗ್ಗೆಯೂ ಪಾಲಿಕೆಯ ವಿಸ್ತೃತ ಘನತ್ಯಾಜ್ಯ ವರದಿಯಲ್ಲಿ ಯಾವ ಸಂಗತಿಗಳೂ ಇಲ್ಲ.
ಕಟ್ಟಡ ನಿರ್ಮಾಣ ಕಸದ್ದೇ ಕಿರಿಕಿರಿ: ಮಹಾನಗರ ಬೆಳೆಯುತ್ತಿದೆ, ಇದರ ಶಾಪವೆಂದರೆ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣದ ತ್ಯಾಜ್ಯ ರಾಶಿಯೇ ಕಾಣುತ್ತಿದೆ. ರಸ್ತೆಯನ್ನೆಲ್ಲ ಇದೇ ತ್ಯಾಜ್ಯ ಆಪೋಷನಗೈದರೂ ಪಾಲಿಕೆ ಮೌನವಾಗಿರುವುದು ದುರಂತವಲ್ಲದೆ ಮತ್ತೇನು.
ಮಾರುಕಟ್ಟೆಗಳ ವಿಚಾರ ವರದಿಯಲ್ಲಿ ಸರಿಯಾಗಿ ನಮೂದಾಗಿಲ್ಲ, ಇಲ್ಲಿ ದೇವರ ಲೆಕ್ಕವೇ ಪ್ರಧಾನ. ಅಂದಾಜು 15 ಮಾರುಕಟ್ಟೆ ಎಂದು ವರದಿಯಲ್ಲಿದೆ, ಅಂದಾಜು ಯಾಕೆ ನಗರ ಸುತ್ತಾಡಿ ಮಾರುಕಟ್ಟೆ ಸಮೀಕ್ಷೆ ಮಾಡಬಹುದಲ್ಲವೇ? ಸಣ್ಣ, ಗುಡಿ ಕೈಗಾರಿಕೆಯಿಂದ ಉತ್ಪತ್ತಿಯಾಗುವ ಕಸದ ವಿಲೇವಾರಿ, ಕಟ್ಟಡ ನಿರ್ಮಾಣ ಕಸದ ವಿಲೇವಾರಿಯಂತಹ ಪ್ರಮುಖ ಸಂಗತಿಗಳು ವರದಿಯಲ್ಲಿ ಕೈಬಿಟ್ಟು ಹೋಗಿದ್ದು ಯಾಕೆ ಅಥವಾ ಪಾಲಿಕೆ ಇವುಗಳನ್ನೆಲ್ಲ ಸಮಸ್ಯೆಯೇ ಅಲ್ಲ ಎಂದು ತೀರ್ಮಾನಿಸಿದ್ದಾರೋ ಗೊತ್ತಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.