ಚಿತ್ತಾಪುರ ತಾಪಂ ಚುನಾವಣೆ ಇಂದು
ಚಿತ್ತಾಪುರ: ಸ್ಥಳೀಯ ತಾಲೂಕು ಪಂಚಾಯಿತಿ 3ನೇ ಅವಧಿಗೆ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಗಳಿಗೆ ಮಿಸಲಾತಿ ಪಟ್ಟಿ ಪ್ರಕಟಿಸಿ ಚುನಾವಣೆ ದಿನಾಂಕ ನಿಗದಿಯಾಗುತ್ತಿದ್ದಂತೆ ರಾಜಕೀಯ ಚುಟುವಟಿಕೆಗಳು ಚುರುಕುಗೊಂಡಿವೆ. ತಾಪಂನ ಎರಡನೇ ಅವಧಿ ಪೂರ್ಣಗೊಂಡ ಬಳಿಕ 3ನೇ ಅವಧಿಗೆ ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಪ್ರ.ವರ್ಗ-1ಕ್ಕೆ ಮೀಸಲಾಗಿದೆ. ಮಿಸಲಿಟ್ಟು ಚುನಾವಣೆಗೆ ದಿನಾಂಕ ಪ್ರಕಟಗೊಂಡಿದೆ.
ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆದಿರುವುದರಿಂದ ಮೊದಲ ಎರಡೂ ಅವಧಿಯಲ್ಲಿ ನಿರೀಕ್ಷಿತವಾಗಿ ಅಡಳಿತ ಚುಕ್ಕಣಿ ಹಿಡಿದು ಅಧಿಕಾರ ಅನುಭವಿಸಿದೆ. ಪಕ್ಷದಲ್ಲಿ ಎಸ್ಸಿ ಮೀಸಲು ಕ್ಷೇತ್ರದಿಂದ 4 ಮಹಿಳಾ ಸದಸ್ಯರು ವಿಜಯಿಯಾಗಿದ್ದಾರೆ. ಅಧ್ಯಕ್ಷ ಸ್ಥಾನಕ್ಕಾಗಿ ಅಳ್ಳೊಳ್ಳಿ ಕ್ಷೇತ್ರದ ಸದಸ್ಯೆ ಸಿದ್ದಮ್ಮ ಕಾಸನೂರ, ನಾಲವಾರ ಕ್ಷೇತ್ರದ ಹಾಲಿ ಉಪಾಧ್ಯಕ್ಷೆ ಶಾಂತಿಬಾಯಿ ಹರಿಶ್ಚಂದ್ರ ಮತ್ತು ಕೋಡದೂರ ಕ್ಷೇತ್ರದ ಹೇಮಾವತಿ ಚಂದ್ರಕಾಂತ, ಯಾಗಾಪುರ ಕ್ಷೇತ್ರದ ಸೀತಾಬಾಯಿ ಪೈಪೋಟಿ ನಡೆಸಿದ್ದಾರೆ.
ತೀವ್ರ ಪೈಪೋಟಿ: ಅಳ್ಳೊಳ್ಳಿ ಕ್ಷೇತ್ರದ ಸದಸ್ಯೆ ಸಿದ್ದಮ್ಮ ಕಾಸನೂರ 2ನೇ ಬಾರಿ ಸದಸ್ಯೆಯಾಗಿದ್ದು, ಅನುಭವನ ಮೇಲೆ ತಮಗೆ ಅಧ್ಯಕ್ಷ ಸ್ಥಾನ ನೀಡುವಂತೆ ಒತ್ತಾಯಿಸುತ್ತಿದ್ದಾರೆಂದು ತಿಳಿದುಬಂದಿದೆ. ಸದಸ್ಯರಾದ ಹೇಮಾವತಿ ಚಂದ್ರಕಾಂತ, ಶಾಂತಿಬಾಯಿ, ಸೀತಾಬಾಯಿ ಕೂಡಾ ಅರ್ಜಿ ಸಲ್ಲಿಸಿದ್ದು, ಮುಖಂಡರ ಮೂಲಕ ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ. ಉಪಾಧ್ಯಕ್ಷ ಬಿಸಿಎ ವರ್ಗಕ್ಕೆ ಮೀಸಲಾಗಿದ್ದು, ಬಿಜೆಪಿ ಹಾಗೂ ಕಾಂಗ್ರೆಸ್ ಎರಡರಲ್ಲೂ ಅಭ್ಯರ್ಥಿಗಳಿದ್ದಾರೆ. ಆದರೂ 'ಕೈ' ಪಡೆಯ ಮಹಿಳಾ ಅಭ್ಯರ್ಥಿಗಳಿಗೆ ಉಪಾಧ್ಯಕ್ಷ ಸ್ಥಾನ ಒಲಿಯುವ ಸಾಧ್ಯತೆಯಿದೆ.
ಬಲಾಬಲ: ತಾಲೂಕು ಪಂಚಾಯಿತಿಯ ಒಟ್ಟು 25 ಸದಸ್ಯರಲ್ಲಿ ಕಾಂಗ್ರೆಸ್ನ 12, ಬಿಜೆಪಿಯ 12 ಜೆಡಿಎಸ್ ಒಬ್ಬರಿದ್ದಾರೆ. ಬದಲಾದ ರಾಜಕೀಯದಲ್ಲಿ ಜೆಡಿಎಸ್ ಸದಸ್ಯೆ ಕಾಂಗ್ರೆಸ್ಗೆ ಸೇರ್ಪಡೆಗೊಂಡಿರುವುದರಿಂದ ಕಾಂಗ್ರೆಸ್ ಬಲ ಈಗ 13ಕ್ಕೇರಿದೆ.
ಸದಸ್ಯರು ಏನೇ ಕಸರತ್ತು ನಡೆಸಿದರೂ ಜು.5ರಂದು ನಡೆಯುವ ಚುನಾವಣೆಗೆ ಮುನ್ನ ಸಂಸದ ಮಲ್ಲಿಕಾರ್ಜುನ ಖರ್ಗೆ, ಶಾಸಕ ಪ್ರಿಯಾಂಕ್ ಖರ್ಗೆ ಹಾಗೂ ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಯಾರಿಗೆ ಒಲಿಯುವುದು ಬಹಿರಂಗಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

