ಮುಳುಗಡೆ ಭೀತಿಯಲ್ಲಿ ಛಾಯಾ ಭಗವತಿ ದೇಗುಲ
ಯಾದಗಿರಿ: ಬಸವಸಾಗರ ಜಲಾಶಯದಿಂದ 5 ಕಿಮೀ ದೂರದಲ್ಲಿರುವ ಸುರಪುರ ತಾಲೂಕಿನ ಸುಕ್ಷೇತ್ರ ಛಾಯಾ ಭಗವತಿ ದೇವಾಲಯಕ್ಕೆ ಪ್ರವಾಹದ ಭೀತಿ ಎದುರಾಗಿದೆ.
ಜಲಾಶಯದಿಂದ ಭಾನುವಾರ 1.41 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬೀಡಲಾಗಿದ್ದು, ದೇಗುಲಕ್ಕೆ ಆಗಮಿಸಿದ ಅರ್ಚಕರು ದೇಗುಲದೊಳಗೆ ನೀರು ನುಗ್ಗುವ ಭೀತಿಯಿಂದ ಗರ್ಭಗೃಹದಲ್ಲಿದ್ದ ದೇವಿಯ ಬೆಳ್ಳಿಯ ಮೂರ್ತಿಯನ್ನು ಹೊರತಂದಿದ್ದು, ಎತ್ತರದ ಮೆಟ್ಟಿಲಲ್ಲಿಟಿರುವ ದೃಶ್ಯ ಕಂಡುಬಂತು. ಈಗಾಗಲೇ ನದಿಯ ಮಧ್ಯೆ ಇರುವ 18 ಪವಿತ್ರ ತೀರ್ಥಗಳು ಮುಳುಗಿವೆ. ನೀರಿನ ರಭಸವು ಅಪಾಯವನ್ನುಂಟು ಮಾಡುವ ಸಂಭವಿದೆ ಎಂದು ಅರ್ಚಕ ಚಿದಂಬರ್ ಭಟ್ ತಿಳಿಸಿದ್ದಾರೆ.
ಕಳೆದ ವರ್ಷವೂ ಮುಳಗಡೆಯಾಗಿತ್ತು: ಕಳೆದ ವರ್ಷವು ಇದೇ ಜುಲೈ ತಿಂಗಳಲ್ಲಿ ನೀರು ದೇವಾಲಯುದ ಗುರ್ಭಗುಡಿಯನ್ನು ಪ್ರವೇಶಿಸಿತ್ತು. ಸದ್ಯ ದೇವಾಲಯದಲ್ಲಿ ಕೇವಲ 15 ಮೆಟ್ಟಿಲು ಬಾಕಿ ಉಳಿದಿವೆ. ಮಂದಿರದ ಮುಂದಿನ ಕಟ್ಟೆಯವರೆಗೂ ನೀರು ಬರುತ್ತಿದ್ದು ಎರಡು ದಿನದಲ್ಲೇ ದೇಗುಲ ಪ್ರವಾಹಕ್ಕೆ ಸಿಲುಕಬಹುದು.
ಜಲಾಶಯದಲ್ಲಿನ ಗರಿಷ್ಠ ನೀರಿನ ಮಟ್ಟ 492 ಮೀ. ಇದ್ದು, ಈಗಾಗಲೇ ನೀರು 490.22 ಮೀಟರ್ಗೆ ತಲುಪಿದೆ. ಹಿನ್ನೀರು ಅಧಿಕವಾಗಿ ಸಂಗ್ರಹವಾಗುತ್ತಿರುವ ಪ್ರಯುಕ್ತ 24 ಕ್ರಸ್ಟ್ಗೇಟ್ಗಳ ಮೂಲಕ ನದಿಗೆ ಹೆಚ್ಚು ನಿರನ್ನು ಬೀಡಲಾಗಿದೆ. ಇದರಿಂದ ಭೋರ್ಗೆಯುತ್ತಿರುವ ನೀರಿನ ಗ್ರಾತ ಪ್ರವಾಹನ್ನುಂಟು ಮಾಡುವಂತಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ನದಿ ತೀರದ ಹಳ್ಳಿಗಳ ಜನರಿಗೆ ಪ್ರವಾಹದ ಭೀತಿಯುಂಟಾಗುವ ಸಾಧ್ಯತೆಗಳು ದಟ್ಟವಾಗಿವೆ. ಈಗಾಗಲೇ ಸುತ್ತಲಿನ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೇರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

