ಈಜಿ ದಡ ಸೇರಿದ ಗರ್ಭಿಣಿ
ಯಾದಗಿರಿ: ತುಂಬು ಗರ್ಭಣಿಯೊಬ್ಬಳು ಸುಮಾರು ಒಂದು ಕಿಮೀ ನದಿ ಪ್ರವಾಹದಲ್ಲಿ ಈಜಿ ದಡ ಸೇರಿ ಪ್ರಾಣ ರಕ್ಷಣೆ ಮಾಡಿಕೊಂಡ ಘಟನೆ ಸುರಪುರ ತಾಲೂಕಿನ ನೀಲಕಂಠರಾಯಗಡ್ಡೆಯಲ್ಲಿ ನಡೆದಿದೆ. 28 ವರ್ಷದ ಎಲ್ಲಮ್ಮ ಹೆರಿಗೆ ನೋವಿದ್ದರೂ ಸಾಹಸ ಮೆರೆದಿದ್ದಾಳೆ.
ಕೃಷ್ಣಾ ನದಿಗೆ ಪ್ರವಾಹ ಬಂದಿದ್ದು, ನೀಲಕಂಠರಾಯಗಡ್ಡೆ ಸುತ್ತ ನೀರು ನಿಂತಿದೆ. ಗರ್ಭಿಣಿಯಾದ ಎಲ್ಲಮ್ಮ ಚೊಚ್ಚಲ ಹೆರಿಗೆಗಾಗಿ ಗೊಲಪಲ್ಲೇರದೊಡ್ಡಿಯ ಸಹೋದರನ ಮನೆಗೆ ಹೋಗಬೇಕೆಂಬ ಉದ್ದೇಶ ಹೊಂದಿದ್ದಳು. ಅದಕ್ಕಾಗಿ ತನ್ನ ಸಹೋದರ ಹಾಗೂ ಕೆಲವು ಗ್ರಾಮಸ್ಥರೊಡನೆ ಗಡ್ಡಿಯನ್ನು ದಾಟಿ ಈಜಿ ಸಾಹಸ ಮೆರೆಯುವ ಮೂಲಕ ತವರು ಮನೆ ಸೇರಿದ್ದಾಳೆ.
200ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಗಡ್ಡೆಯಿಂದ ವ್ಯಾಪಾರ, ಇನ್ನಿತರ ಕಾರ್ಯಗಳಿಗಾಗಿ ಕೃಷ್ಣಾ ನದಿ ದಾಟಿಯೇ ಸುರಪುರ ತಾಲೂಕಿನ ಹತ್ತಿರದ ಕಕ್ಕೇರಾ ಪಟ್ಟಣಕ್ಕೆ ಬರಬೇಕು. ಪ್ರವಾಹ ಬಂದಾಗ ಇಲ್ಲಿನವರಿಗೆ ಅನ್ಯ ಗ್ರಾಮ, ಪಟ್ಟಣಗಳ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಪ್ರವಾಹದ ಸಂದರ್ಭದಲ್ಲಿ ಗ್ರಾಮಸ್ಥರು ಊಟಕ್ಕೂ ಪರದಾಡುವ ಪರಿಸ್ಥಿತಿಯಿದೆ.
ನಡುಗಡ್ಡೆ ಜನರು ಅನಾರೋಗ್ಯಕ್ಕೆ ಒಳಗಾದರೂ ಆಸ್ಪತ್ರೆಗೆ ಬರಲು ಸಾಧ್ಯವಿಲ್ಲ. ಇನ್ನು ಗರ್ಭಿಣಿಯರು ಸಾವು- ಬದುಕಿನ ಮಧ್ಯೆ ಹೋರಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ಗ್ರಾಮಸ್ಥರು ಅನೇಕ ವರ್ಷಗಳಿಂದ ಎದುರಿಸುತ್ತಿದ್ದಾರೆ. ಸರ್ಕಾರ ಇನ್ನಾದರೂ ನೀಲಕಂಠರಾಯನಗಡ್ಡೆಗೆ ಸೇತುವೆ ನಿರ್ಮಿಸಿ, ಪರ್ಯಾಯ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

