ಗುಲ್ಬರ್ಗಾ

ಚೌಡಯ್ಯರ ನಡೆ, ನುಡಿ ಬದುಕಿಗೆ ಆದರ್ಶ

Published On :

ಜೇವರ್ಗಿ: 12ನೇ ಶತಮಾನ ಎಲ್ಲಾ ದೃಷ್ಟಿಯಿಂದಲೂ ಸಮಾಜವನ್ನು ಸುಧಾರಿಸುವಂತಹ ಕಾಲವಾಗಿತ್ತು. ಅದರಲ್ಲಿ ಮುಖ್ಯವಾಗಿ ಅಂಬಿಗರ ಚೌಡಯ್ಯ ಸಮಾಜವನ್ನು ತಿದ್ದಿದ್ದಾರೆ. ಅವರ ನಡೆ ನುಡಿ ನಮ್ಮ ಬದುಕಿಗೆ ಆದರ್ಶವಾಗಬೇಕೆಂದು ಮಾಜಿ ಮುಖ್ಯ ಸಚೇತಕ ವಿಠ್ಠ ಲ್ ಹೇರೂರ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ತಾಲೂಕು ಕೋಲಿ ಸಮಾಜದ ವತಿಯಿಂದ ನಡೆದ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
2012ರಲ್ಲಿ ಕೋಲಿ ಸಮಾಜವನ್ನು ಎಸ್‌ಟಿಗೆ ಸೇರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಸರಿಯಾದ ಮಾಹಿತಿ ಒದಗಿಸಿಲ್ಲ. ಕಳೆದ 1995ರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಎಸ್‌ಟಿಗೆ ಸೇರಿಸುವ ವಿಷಯ ಅಂಗೀಕಾರವಾಗಿದೆ. ಮತ್ತೊಮ್ಮೆ ಕ್ಯಾಬಿನೆಟ್‌ನಲ್ಲಿ ಪ್ರಸ್ತಾಪಿಸುವ ಅಗತ್ಯವಿಲ್ಲ. ವಿನಾಕಾರಣ ಗೊಂದಲಗಳು ಸೃಷ್ಟಿಸದೆ ಕೂಡಲೇ ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಒತ್ತಾಯಿಸಿದರು.
ಜಿಪಂ ಸದಸ್ಯೆ ಶೋಭಾ ಬಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಾವು ಚೌಡಯ್ಯ ಜಯಂತಿ ಆಚರಿಸಿದರೆ ಸಾಲದು ಅಂತಹ ಶರಣರ ನಡೆ, ನುಡಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಷ್ಟೆ ಅವಶ್ಯಕ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೊನಸನಳ್ಳಿಯ ಅಲ್ಲಂಪ್ರಭು ಪೀಠದ ಮಲ್ಲಣ್ಣಪ್ಪ ಮಹಾಸ್ವಾಮೀಜಿ, ಮೈಸೂರು ಉರಿಲಿಂಗಪೆದ್ದಿ ಸಂಸ್ಥಾನ ಮಠದ ಜ್ಞಾನಪ್ರಕಾಶ ಸ್ವಾಮಿಜಿ ಸಾನಿಧ್ಯ ವಹಿಸಿದ್ದರು.
ಪಪಂ ಅಧ್ಯಕ್ಷೆ ಬಾಯಮ್ಮ ತಳವಾರ, ದತ್ತರಾಜ ಕಿನ್ನೂರ, ಬೈಲಪ್ಪ ನೆಲೋಗಿ, ಮಲ್ಲಿಕಾರ್ಜುನ ಸಾಹು ಆಲೂರ, ಶಿವಶರಣಪ್ಪ ಜಂಬೆರಾಳ, ಪುಂಡಲಿಕ ಗಾಯಕವಾಡ, ಶಿವಪುತ್ರಪ್ಪ ಕೋಣಿನ, ಮಹ್ಮದ್ ಶಂಶುದ್ಧಿನ ಗುಂಡಗುರ್ತಿ, ಬಿ. ಬಸಣ್ಣ, ರೇವಣಸಿದ್ದಪ್ಪಗೌಡ ಕಮಾನಮನಿ, ಮನೋಹರ ಕಾಮನಕೇರಿ, ಬಸವರಾಜ ಬೂದಿಹಾಳ, ಹಳ್ಳೆಪ್ಪ ನಾಟಿಕಾರ್, ಅಮೃತ ಮಾಳವಮನಿ, ಚಂದ್ರಕಾಮಪ್ಪ ಗುಡೂರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಅಪ್ಪುಗೆರೆ ಸೋಮಶೇಖರ ವಿಶೇಷ ಉಪನ್ಯಾಸ ನೀಡಿದರು. ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರಾದ ಎಲ್.ಬಿ. ಕೆ. ಆಲ್ದಾಳ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆನಂದ ಶಹಾಬಾದಿ, ಮಲ್ಲಿಕಾರ್ಜುನ ದಿನ್ನಿ, ದೇವಿಂದ್ರ ಗುತ್ತೇದಾರ, ಬಸವರಾಜ ಹಡಪದ, ಭೀಮರಾಯ ಜನಿವಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು. ಹಲಕಟ್ಟೆಪ್ಪ ತಳವಾರ ಪ್ರಾರ್ಥಿಸಿದರು. ಶಿವಶರಣಪ್ಪ ಹೊನ್ನಾಳ ಸ್ವಾಗತಿಸಿದರು. ಭಗವಂತರಾಯ ಬೆಣ್ಣೂರ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.