ಗುಲ್ಬರ್ಗಾ

ಗುಡಿಸಲುಗಳಿಗೆ ಬೆಂಕಿ: ಹಾನಿ

Published On :

ಅಫಜಲ್ಪುರ: ತಾಲೂಕಿನ ಮಣ್ಣೂರ ಗ್ರಾಮದ ಚಂದ್ರಭಾಗ ನಗರ ಪ್ರದೇಶದಲ್ಲಿ ಜಯಪ್ಪ ಯಲ್ಲಪ್ಪ ರೂಢಗಿ ಮತ್ತು ಸೋಮಣ್ಣ ಯಲ್ಲಪ್ಪ ರೂಢಗಿ ಸಹೋದರರು ವಾಸವಾಗಿದ್ದ ಎರಡು ಗುಡಿಸಲುಗಳಿಗೆ ಆಕಸ್ಮಿಕ ಬೆಂಕಿ ತಲುಗಿ ಲಕ್ಷಾಂತರ ರುಪಾಯಿ ನಷ್ಟವಾದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಗುಡಿಸಲುಗಳಲ್ಲಿದ್ದ 5 ತೊಲೆ ಚಿನ್ನ, 70 ಸಾವಿರ ನಗದು, 7 ಚೀಲ ಜೋಳ, 13 ಚೀಲ ಕಡಲೆ, ಸಜ್ಜಿ ಮತ್ತು ಇತರೆ ದವಟ- ಧಾನ್ಯ ಬೆಂಕಿಗೆ ಆಹುತಿಯಾಗಿವೆ.
 ಮನೆಯಲ್ಲಿದ್ದ ಪಾತ್ರೆ, ಬಟ್ಟೆ ಮತ್ತಿತರ ಸಾಮಗ್ರಿ ಭಸ್ಮವಾಗಿದ್ದು, ಕುಟುಂಬ ಸದಸ್ಯರು ಬೀದಿಗೆ ಬಂದಿದ್ದಾರೆ. ಸುದ್ದಿ ತಿಳಿದ ತಕ್ಷಣ ಬಿಜಾಪುರ ಜಿಲ್ಲೆ ಇಂಡಿಯ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಅಫಜಲ್ಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಯುವತಿ ಅಪಹರಣ
ಗುಲ್ಬರ್ಗ: ಜೀಪಿನಲ್ಲಿ ಕೆಲ ದುಷ್ಕರ್ಮಿಗಳು ಯುವತಿಯನ್ನು ಅಪಹರಿಸಿದ ಘಟನೆ ಸೇಡಂ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಹೊಲದಿಂದ ಯುವತಿ ಮನೆಗೆ ಬರುತ್ತಿದ್ದಾಗ ಗ್ರಾಮದ ಶಾಮರಾವ ಸಾತನೂರ, ಬಸವರಾಜ ಡೊಳ್ಳಾ ಮತ್ತು ಇನ್ನಿಬ್ಬರು ಸೇರಿ ಜೀಪಿನಲ್ಲಿ ಬಂದು ಅಪಹರಿಸಿಕೊಂಡು ಹೋಗಿದ್ದಾರೆ. ಯುವತಿಯ ಅಣ್ಣ ಸೇಡಂ ಠಾಣೆಯಲ್ಲಿ ದೂರು ನೀಡಿದ್ದಾರೆ.
ವರದಕ್ಷಿಣೆ ಕಿರುಕುಳ
ಗುಲ್ಬರ್ಗ: ನಗರದ ಪ್ರಗತಿ ಕಾಲೋನಿಯ ಮಹಿಳೆಯೊಬ್ಬಳಿಗೆ ಗಂಡ ವರದಕ್ಷಿಣೆ ಕಿರುಕುಳ ನೀಡಿದ ಕುರಿತು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀತಲ ಗಂಡ ರಾಘವೇಂದ್ರ ಶಿಂತರೆ ಎಂಬ ಯುವತಿ ಕಿರುಕುಳಕ್ಕೆ ಒಳಗಾದವಳು. ಬೆಂಗಳೂರಿನ ಜೆ.ಸಿ. ನಗರದ ರಾಘವೇಂದ್ರ ಎಂಬಾತನೊಂದಿಗೆ ಶೀತಲ್‌ಳನ್ನು ಕೊಟ್ಟು, 2011ರಲ್ಲಿ ನಗದು ಹಣ ಮತ್ತು ಬಂಗಾರ ನೀಡಿ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.