ನೇತಾಜಿ ಕನಸು ಸಾಕಾರಗೊಳಿಸಿ: ರಾಮಣ್ಣ
ಗುಲ್ಬರ್ಗ/ಶಹಾಬಾದ್: ಇಂದಿನ ಯುವಕರು ಅನ್ಯಾಯ, ಭ್ರಷ್ಟಾಚಾರದ ವಿರುದ್ಧ ನಿರಂತರ ಹೋರಾಟಗಳನ್ನು ರೂಪಿಸುತ್ತ ನೇತಾಜಿ ಬೋಸ್ ಅವರ ಕನಸಿನ ನವ ಸಮಾಜ ನಿರ್ಮಾಣವನ್ನು ಸಾಕಾರಗೊಳಿಸಬೇಕೆಂದು ಎಸ್ಯುಸಿಐ ನಗರ ಕಾರ್ಯದರ್ಶಿ ರಾಮಣ್ಣ ಇಬ್ರಾಹಿಂಪುರೆ ಕರೆ ನೀಡಿದರು.
ನಗರದ ಪ್ರೌಢ ಶಾಲೆ ಮೈದಾನದಲ್ಲಿ ಇತ್ತೀಚೆಗೆ ಎಐಡಿಎಸ್ಒ, ಎಐಡಿವೈಒ, ಎಐಎಂಎಸ್ಎಸ್ ಸಂಘಟನೆಗಳಿಂದ ಜಂಟಿಯಾಗಿ ಏರ್ಪಡಿಸಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್ ಅವರ 116ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಎಐಡಿವೈಒ ಜಿಲ್ಲಾ ಉಪಾಧ್ಯಕ್ಷ ಗಣಪತರಾವ ಮಾನೆ ಮಾತನಾಡಿದರು. ಎಐಎಂಎಸ್ಎಸ್ ಜಿಲ್ಲಾ ಕಾರ್ಯದರ್ಶಿ ಗುಂಡಮ್ಮ ಮಡಿವಾಳ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್ಒ ಅಧ್ಯಕ್ಷ ವಿರೇಶ, ಎಐಡಿವೈಒ ಕಾರ್ಯದರ್ಶಿ ಸಿದ್ದು ಚೌಧರಿ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಸುಭಾಶ್ಚಂದ್ರ ಬೋಸ್ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಎಐಸಿಐಟಿಯುಸಿ ಸಂಚಾಲಯಕ ರಾಘವೇಂದ್ರ ಎಂ.ಜಿ., ಎಐಡಿಎಸ್ಒ ಕಾರ್ಯದರ್ಶಿ ಅಂಬಿಕಾ ಎಸ್.ಎಚ್, ಜಯಶ್ರೀ, ಅಂಬಿಕಾ, ಸುಭದ್ರಾ, ಕೃಷ್ಣಕಾಂತ, ಶರಣು, ಅಂಬಿಕಾ ಜಿ.ಎಚ್., ಶೆಟ್ಟೆಪ್ಪ, ಶ್ರೀಕಾಂತ, ತೇಜಸ್, ಮಲ್ಲಿಕಾರ್ಜುನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

