ಕವಿಗೋಷ್ಠಿಗೆ ಆಯ್ಕೆ
ಗುಲ್ಬರ್ಗ: ಬಿಜಾಪುರದಲ್ಲಿ ಫೆ.9, 10, 11ರಂದು ಜರುಗಲಿರುವ 79ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಹಾಗೂ ಯುವ ಸಂಘಟಕ ಸುರೇಶ ಬಡಿಗೇರ ಆಯ್ಕೆಯಾಗಿದ್ದಾರೆ ಎಂದು ರಾಜಶೇಖರ ಹಣಕುಣಿ ತಿಳಿಸಿದ್ದಾರೆ. ಕೇಂದ್ರ ಕಸಾಪ ಘಟಕವು ಕವಿಗೋಷ್ಠಿಗೆ ಬಡಿಗೇರ ಅವರನ್ನು ಆಯ್ಕೆ ಮಾಡಿರುವುದಕ್ಕೆ ಎಚ್ಕೆಸಿಸಿಐ ಅಧ್ಯಕ್ಷ ಉಮಾಕಾಂತ ನಿಗ್ಗುಡಗಿ, ಪ್ರೊ. ಎನ್.ಎಸ್. ಹಿರೇಮಠ, ಪ್ರಾಚಾರ್ಯ ರಮೇಶ ಹಣಕುಣಿ, ಶಿವಕುಮಾರ ದೊಡ್ಮನಿ, ರಾಘವೇಂದ್ರ ಮರತೂರ, ಪ್ರೊ. ಜಿ.ಎಸ್. ಮಾಲಿಪಾಟೀಲ್, ಗೀತಾ ಕುಲಕರ್ಣಿ, ವನುಜಾ ಪಾಟೀಲ್ ಸೇರಿದಂತೆ ಅನೇಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಡ್ರೆಸ್ ಡಿಸೈನಿಂಗ್ ತರಬೇತಿ
ಗುಲ್ಬರ್ಗ: ನಗರದ ಕೃಷ್ಣ ಸ್ವಯಂ ಉದ್ಯೋಗ ತರಬೇತಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ತಮ್ಮ ಸಂಸ್ಥೆಯ ಕಚೇರಿಯಲ್ಲಿ ಫೆ.4 ರಿಂದ 24ರವರೆಗೆ ಮಹಿಳೆಯರಿಗಾಗಿ ಡ್ರೆಸ್ ಡಿಸೈನಿಂಗ್(ಟೈಲರಿಂಗ್) ತರಬೇತಿ ಹಮ್ಮಿಕೊಂಡಿದೆ. ತರಬೇತಿ ಸಮಯದಲ್ಲಿ ಉಚಿತ ಊಟ ಮತ್ತು ವಸತಿ ಸೌಲಭ್ಯ ಕಲ್ಪಿಸಲಾಗುವುದು. ಅನುಭವ ಇರುವವರಿಗೆ ಆದ್ಯತೆ ನೀಡಲಾಗುವುದು. ತರಬೇತಿ ಪಡೆಯಲಿಚ್ಛಿಸುವ ಸ್ವವಿವರದೊಂದಿಗೆ ಭಾವಚಿತ್ರ ಲಗತ್ತಿಸಿ ಅರ್ಜಿಯನ್ನು ನಿರ್ದೇಶಕರು, ನಂ. 33/1, ಸರ್ವೆ ನಂ. 32, ದರಿಯಾಪುರ- ಕೋಟನೂರ, ಜಿಡಿಎ ಲೇಔಟ್, ಗುಲ್ಬರ್ಗ(ದೂ. 08472- 292003, ಮೊ. 80882 94498, 98457 04360) ವಿಳಾಸಕ್ಕೆ ಕಳುಹಿಸಬಹುದು..
ವೇದಿಕೆಗೆ ತ್ರಿವೇಣಿ ನೇಮಕ
ಗುಲ್ಬರ್ಗ: ಕರ್ನಾಟಕ ಶುದ್ಧೀಕರಣ ಹೋರಾಟ ವೇದಿಕೆಗೆ ಮಹಿಳಾ ಜಿಲ್ಲಾಧ್ಯಕ್ಷರಾಗಿ ತ್ರಿವೇಣಿ ತಾಳಮಡಗಿ ಅವರನ್ನು ನೇಮಕ ಮಾಡಲಾಗಿದೆ ಎಂದು ರಮೇಶ ಸರಡಗಿ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಸಭೆ ಸೇರಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಅಮಾನತು ರದ್ದುಗೊಳಿಸಿ
ಗುಲ್ಬರ್ಗ: ಆಳಂದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪತ್ರಾಂಕಿತ ವ್ಯವಸ್ಥಾಪಕ ಶಂಕರ ಪರೀಟ್ ಅವರನ್ನು ಅಮಾನತುಗೊಳಿಸಿರುವ ಕ್ರಮವನ್ನು ಜಿಲ್ಲಾ ಮಡಿವಾಳರ ಕಲ್ಯಾಣ ಸಂಘ ಖಂಡಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಉದ್ದೇಶಪೂರ್ವಕವಾಗಿ ಅಮಾನತುಗೊಳಿಸಿದ್ದು, ಕೂಡಲೇ ಅದನ್ನು ಹಿಂಪಡೆಯಬೇಕೆಂದು ಅಧ್ಯಕ್ಷ ಶಿವಕುಮಾರ ಮಡಿವಾಳ ಒತ್ತಾಯಿಸಿದ್ದಾರೆ.
ಜೈನ ನೌಕರರ ಸಂಘ ರಚನೆ
ಗುಲ್ಬರ್ಗ: ಜೈನ್ ಮಿಲನ್ದ ಅಧ್ಯಕ್ಷ ವಜ್ರಕುಮಾರ ಕಿವಡೆ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಗರದಲ್ಲಿ ಜೈನ್ ಮಿಲನದ ಕಾರ್ಯಕರ್ತರು ಮತ್ತು ಸಮಾಜದ ಮುಖಂಡರು ಸಭೆ ಸೇರಿ ಹೈ.ಕ. ಜೈನ್ ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘವನ್ನು ರಚನೆ ಮಾಡಿದ್ದಾರೆ. ಸಂಘಕ್ಕೆ ಹೆಸರು ನೋಂದಾಯಿಸಿಕೊಳ್ಳಲು ಜೈನ್ ನೌಕರರು ಸುಭಾಶ್ಚಂದ್ರ ಕಪಾಳೆ 9731046568, ಪ್ರೊ. ನೇಮಿನಾಥ ನಡವಿನಮನಿ 9448650611, ಡಾ. ಆರ್.ಎಲ್. ರಾಯಭಾಗಕರ್ 97393 02083, ಮಹಾವೀರ ಕಾಸಾರ್ 94480 94666ಗೆ ಸಂಪರ್ಕಿಸಬಹುದು.
ಹಿರೇಮಠಗೆ ಪಿಎಚ್ಡಿ
ಗುಲ್ಬರ್ಗ: ನಗರದ ನ್ಯಾಯವಾದಿ ಜಂಬಯ್ಯ ಸ್ವಾಮಿ ಹಿರೇಮಠ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿದೆ. ಹಿರೇಮಠ ಅವರು ಗುಲ್ಬರ್ಗ ವಿಶ್ವವಿದ್ಯಾಲಯದ ಕಾನೂನು ಅಧ್ಯಯನ ವಿಭಾಗದ ಪ್ರೊ. ಡಾ. ಎಸ್.ಎಸ್. ಪಾಟೀಲರ ಮಾರ್ಗದರ್ಶನದಲ್ಲಿ 'ಎ ಕ್ರಿಟಿಕಲ್ ಸ್ಟೆಡಿ ಆಫ್ ಡಾಕ್ಟ್ರೀನ್ ಆಫ್ ಅಲ್ಟ್ರಾ ವಯರ್ಸ್ ಇನ್ ಕಂಪನಿ ಲಾ ವಿಥ್ ರೆಫರೆನ್ಸ್ ಟು ಇಂಡಿಯನ್ ಅಂಡ್ ಇಂಗ್ಲಿಷ್ ಲಾ' ಮಹಾ ಪ್ರಬಂಧಕ್ಕೆ ಡಾಕ್ಟರ್ ಆಫ್ ಫಿಲಾಸಫಿ ಇನ್ ಲಾ ಪದವಿಯನ್ನು ಪ್ರದಾನ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

