ಆರೋಗ್ಯದ ಉಚಿತ ತಪಾಸಣೆ ಶಿಬಿರ
ಗುಲ್ಬರ್ಗ/ಶಹಾಬಾದ್: ಮುಗುಳನಾಗಾಂವನ ಸಿದ್ದಲಿಂಗ ಸ್ವಾಮೀಜಿಗಳ 36ನೇ ಹುಟ್ಟುಹಬ್ಬದ ನಿಮಿತ್ತವಾಗಿ ಇತ್ತೀಚೆಗೆ ಜೈ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಬ್ಲೂ ಕ್ರಾಸ್ ಸಂಯುಕ್ತಾಶ್ರಯದಲ್ಲಿ ಮುಗುಳನಾಗಾಂವ ಗ್ರಾಮದಲ್ಲಿ ಆರೋಗ್ಯದ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರವನ್ನು ಬೆಳಗಾವದ ನಾಗಭೂಷಣ ಸ್ವಾಮೀಜಿ ಉದ್ಘಾಟಿಸಿದರು. ಅಭಿನವ ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಜೀವನದಲ್ಲಿ ಒಳ್ಳೆಯ ಆರೋಗ್ಯವನ್ನು ಗಳಿಸಬೇಕು. ಒಳ್ಳೆಯ ಆರೋಗ್ಯ ವ್ಯಕ್ತಿಯ ವ್ಯಕ್ತಿತ್ವ ಹಾಗೂ ವಿಚಾರ ಶಕ್ತಿಯನ್ನು ಹೆಚ್ಚಿಸುವುದರಲ್ಲಿ ಮಹತ್ತರ ಪಾತ್ರವಹಿಸುತ್ತದೆ ಎಂದರು. ಕಡಣಿಯ ರೇವಣಸಿದ್ದ ದೇವರು, ಡಾ. ಬಸವರಾಜ ರಾಯಕೂಡ, ಶರಣು ಪಪ್ಪಾ, ಶರಣು ಮತ್ತಿಮೂಡ, ಮಲ್ಲಿಕಾರ್ಜುನ ಕಮಾನಿ, ಮನೋಜ ಕೊಂಟೆ, ನಾಗರಾಜ ಸರಸಂಬಿ, ಪ್ರಮೋಧ ಧರ್ಮೆಧಿ ಯೋಗೇಶ ಹಳಿಜೋಳ, ಈರಣ್ಣ ಕಾರ್ಗಿಲ್, ಮೌನಪ್ಪ ಮಂತಟ್ಟಿ ಹಾಗೂ ರವಿ ಪವಾರ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

