9.50 ಲಕ್ಷ ದೋಚಿದ ಕಳ್ಳರು
ಗುಲ್ಬರ್ಗ: ಇಲ್ಲಿನ ಸರಾಫ್ ಬಜಾರ್ ಪ್ರದೇಶದಲ್ಲಿ ನಿಲ್ಲಿಸಿದ್ದ ಬೈಕ್ವೊಂದರ ಡಿಕ್ಕಿಯಲ್ಲಿ ಇಡಲಾಗಿದ್ದ 9.50 ಲಕ್ಷ ನೋಟಿನ ಕಂತೆಗಳಿರುವ ಚೀಲವನ್ನೇ ಕಳ್ಳರು ದೋಚಿದ್ದಾರೆ. ಈ ಸಂಬಂಧ ದಾಲ್ಮಿಲ್ ವರ್ತಕ ಬಸವರಾಜ ಏರಿ ಸೋಮವಾರ ಪೊಲೀಸರಿಗೆ ದೂರು ನೀಡಿದ್ದಾನೆ. ಚೌಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸವರಾಜ ಏರಿ ಕಾರ್ಪೋರೇಷನ್ ಬ್ಯಾಂಕಿನಿಂದ ಈ ಹಣ ಪಡೆದು ಮನೆಗೆ ಹೊರಟಿದ್ದರು. ದಾರಿಯಲ್ಲಿ ಗೆಳೆಯ ನಾಗೇಂದ್ರ ಜೊತೆ ಮಾತುಕತೆ ನಡೆಸಿ ಇನ್ನೇನು ಮನೆ ದಾರಿ ಹಿಡಿಯುವವರಿದ್ದರು. ಬಸವರಾಜ ಇವರು ಹಣದ ಚೀಲವಿದ್ದ ಬೈಕ್ ಪಾರ್ಕ್ ಮಾಡಿದ್ದು, ಇದೇ ಸಮಯದಲ್ಲೇ ಕಳ್ಳರು ಹಣದ ಚೀಲ ಲಪಟಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

