ಗುಲ್ಬರ್ಗಾ

ಆಳಂದ ಪುರಸಭೆ: 46 ನಾಮಪತ್ರ ಸಲ್ಲಿಕೆ

Published On :

ಆಳಂದ: ಮಾರ್ಚ್ 7ರಂದು 23 ವಾರ್ಡ್‌ಗಳಿಗೆ ನಡೆಯಲಿರುವ ಸ್ಥಳೀಯ ಪುರಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ಶುಕ್ರವಾರ ಒಂದೇ ದಿನಕ್ಕೆ ವಿವಿಧ ಪಕ್ಷಗಳಿಂದ 45 ಮಂದಿ ನಾಮಪತ್ರ ಸಲ್ಲಿಕೆಯಾದವು. ಇದಕ್ಕೂ ಮುನ್ನದಿನ ಗುರುವಾರ ಒಂದು ನಾಮಪತ್ರ ಸಲ್ಲಿಕೆಯಾಗಿದೆ ಎಂದು ತಹಸೀಲ್ದಾರ್ ಪರಮೇಶ್ವರ ಕೆ. ಸ್ವಾಮಿ ತಿಳಿಸಿದ್ದಾರೆ. ಫೆ. 16ರಂದು ಆರಂಭಗೊಂಡ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಶನಿವಾರ 23ರಂದು ಕೊನೆಯಾಗಲಿದೆ. ಈ ದಿನ ಘಟಾನುಘಟಿಗಳು ನಾಮಪತ್ರ ಸಲ್ಲಿಸಲಿದ್ದಾರೆ.
ಮುಂದಿನ ವಿಧಾನಸಭೆ ಚುನಾವಣೆಗಳಿಗೆ ದಿಕ್ಸೂಚಿಯಾಗಲಿರುವ ಈ ಚುನಾವಣೆಯಲ್ಲಿ ಸ್ಥಳೀಯ ಪುರಸಭೆಯನ್ನು ತಮ್ಮ ಹತೊಟಿಗೆ ತೆಗೆದುಕೊಳ್ಳಲು ಶಾಸಕ ಸುಭಾಷ ಗುತ್ತೇದಾರ ಹಾಗೂ ಮಾಜಿ ಉಪಸಭಾಪತಿ ಬಿ.ಆರ್. ಪಾಟೀಲ ಅಪರೋಕ್ಷವಾಗಿ ತೀವ್ರ ಕಸರತ್ತು ನಡೆಸಿದ್ದಾರೆ. ಮತ್ತೊಂದಡೆ ಈ ಎರಡೂ ಶಕ್ತಿಗಳನ್ನು ಹಿಮ್ಮೆಟ್ಟಿಸಬೇಕೆಂಬ ಸಂಚುಹಾಕಿರುವ ಕಾಂಗ್ರೆಸ್ ಪಕ್ಷವು ತನ್ನದೆಯಾದ ಹೈಕಮಾಂಡ್‌ನ ತಂತ್ರಗಾರಿಕೆಯಿಂದ ಚುನಾವಣೆಯ ಪೈಪೋಟಿ ಒಡ್ಡಲು ಒಳಸಂಚು ರೂಪಿಸುತ್ತಿದೆ. ವಿಧಾನಸಭೆ ಚುನಾವಣೆ ಬಿಸಿ ತಾತ್ಕಾಲಿಕ ತಣ್ಣಗಾದರೂ ಈಗ ಸ್ಥಳೀಯ ಸಂಸ್ಥೆಯ ಚುನಾವಣೆ ಬಿಸಿಯಾಗಿ ನಿಂತುಕೊಂಡು ಎಲ್ಲ ಮುಖಂಡರ ದೃಷ್ಟಿ ಇತ್ತ ಹಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.