ಸೇಡಂ; ಇಂದು 5ನೇ ತಾಲೂಕು ಸಾಹಿತ್ಯ ಸಮ್ಮೇಳನ
ಸೇಡಂ: ಕುರಕುಂಟಾ ಗ್ರಾಮದ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಫೆ.22ರಂದು ನಡೆಯಲಿರುವ 5ನೇ ತಾಲೂಕು ಸಾಹಿತ್ಯ ಸಮ್ಮೇಳನವನ್ನು ಹಿರಿಯ ಲೇಖಕ ಕುಂ. ವೀರಭದ್ರಪ್ಪ ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 8 ಗಂಟೆಗೆ ರಾಷ್ಟ್ರ ಧ್ವಜಾರೋಹಣವನ್ನು ಶಾಸಕ ಡಾ. ಶರಣಪ್ರಕಾಶ ಆರ್. ಪಾಟೀಲ್ ಮತ್ತು ಪರಿಷತ್ ಧ್ವಜಾರೋಹಣವನ್ನು ಕಸಾಪ ಅಧ್ಯಕ್ಷ ನಾಗಯ್ಯಸ್ವಾಮಿ ಬೊಮ್ನಳ್ಳಿ ನೆರವೇರಿಸುವರು. ಬೆಳಗ್ಗೆ 8.30ಕ್ಕೆ ಗ್ರಾಮದ ರೈಲು ನಿಲ್ದಾಣದಿಂದ ಮುಖ್ಯರಸ್ತೆ ಮೂಲಕ ದೇವಾಲಯದ ವೇದಿಕೆಗೆ ಸ್ಥಬ್ಧ ಚಿತ್ರಗಳ ಮೂಲಕ ಸಮ್ಮೇಳನಾಧ್ಯಕ್ಷ ಪ್ರಭಾಕರ ಜೋಶಿ ಅವರ ಭವ್ಯ ಮೆರವಣಿಗೆ ಜರುಗಲಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ವಿನಾಯಕ ಜೋಶಿ ಮತ್ತು ಜಗದೀಶ ಕಡಬಗಾಂವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾದ್ವಾರಕ್ಕೆ ಮುರುಗೇಂದ್ರ ಸ್ವಾಮೀಜಿ ಮಂಟಪವೆಂದು, ಪ್ರಧಾನ ವೇದಿಕೆಗೆ ಶ್ರೀಗುರು ಸಂಗಮೇಶ್ವರ, ಮಂಟಪಕ್ಕೆ ಲಿಂ. ಮಡಿವಾಳಯ್ಯ ಸ್ವಾಮೀಜಿ ಹೆಸರಿಡಲಾಗಿದ್ದು, ಸಂಗಮಸಿರಿ ಎಂಬ ಸ್ಮರಣ ಸಂಚಿಕೆ, ಶಿವಪುತ್ರಪ್ಪ ತೆಲ್ಕೂರ ರಚಿತ ಸಂಚಯನ, ಸಿದ್ದಯ್ಯಸ್ವಾಮಿ ಚಿಕ್ಕಮಠ ರಚಿತ ಹೃದಯಾಂತರಾಳ, ಶಿವಾರೆಡ್ಡಿ ಗೌಡನಹಳ್ಳಿ ರಚಿತ ಸಿರಿ ಹಾಗೂ ನಾಗಯ್ಯಸ್ವಾಮಿ ಬೊಮ್ನಳ್ಳಿ ರಚಿತ ಅರಳುವ ಹೂವುಗಳು ಎಂಬ ಕೃತಿಗಳು ಲೋಕಾರ್ಪಣೆಗೊಳ್ಳಲಿವೆ ಎಂದು ಹೇಳಿದರು.
ಸಮ್ಮೇಳನದಲ್ಲಿ ಸಾಹಿತಿಗಳಾದ ಡಾ. ವಿಕ್ರಂ ವಿಸಾಜಿ, ಡಾ. ಬಸವರಾಜ ಡೊಣೂರ, ಸಂಧ್ಯಾ ಹೊನಗುಂಟಿಕರ್, ಡಾ. ನಾಗೇಂದ್ರ ಮಸೂತಿ, ಸಿದ್ಧರಾಮ ಹೊನ್ಕಲ್, ಶಿವರಂಜನ ಸತ್ಯಂಪೇಟೆ, ಡಾ. ಸೂರ್ಯಕಾಂತ ಸುಜ್ಯಾತ್ ಭಾಗವಹಿಸುವರು. ಇದೇ ಸಂದರ್ಭದಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಕ್ರೀಡೆ, ಸಮಾಜ ಸೇವೆ, ಕಲೆ, ಸಾಹಿತ್ಯ, ರಂಗಭೂಮಿ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದ ಗಣ್ಯರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

