ಗುಲ್ಬರ್ಗಾ

ಬಿಜೆಪಿಯಿಂದ ಸ್ಪರ್ಧೆಗೆ 180 ಅರ್ಜಿ

Published On :

ಶಹಾಬಾದ್: ನಗರಸಭೆಯ 31 ವಾರ್ಡಗಳಲ್ಲಿ ಸ್ಪರ್ಧಿಸಲು ಒಟ್ಟು 180 ಅಭ್ಯರ್ಥಿಗಳು ಆಕಾಂಕ್ಷಿಗಳಾಗಿದ್ದು, ಪಕ್ಷದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆಂದು ಪಕ್ಷದ ಮಾಧ್ಯಮ ವಕ್ತಾರ ಬಸವರಾಜ ಮದ್ರಕಿ ತಿಳಿಸಿದ್ದಾರೆ.
ಗುರುವಾರ ಪಕ್ಷದ ಚುನಾವಣೆ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶರಣಪ್ಪ ತಳವಾರ, ಜಿಲ್ಲಾ ಮಾಧ್ಯಮ ಪ್ರತಿನಿಧಿ ಮುಕುಂದ ದೇಶಪಾಂಡೆ ಉಪಸ್ಥಿತಿಯಲ್ಲಿ ಶುಕ್ರವಾರ ಪಕ್ಷದ ಅಭ್ಯರ್ಥಿಗಳ ಅಂತಿಮ ಪಟ್ಟಿ ತಯ್ಯಾರಿಸಲು ನಿರ್ಧರಿಸಲಾಯಿತು. ಶನಿವಾರ ಸಚಿವ ರೇವುನಾಯಕ ಬೆಳಮಗಿ ನೇತೃತ್ವದಲ್ಲಿ ಎಲ್ಲಾ ಅಭ್ಯರ್ಥಿಗಳ ನಾಮಪತ್ರ ಸಲ್ಲಿಸುವುದು, ಚುನಾವಣಾ ಪ್ರಚಾರಕ್ಕಾಗಿ ಸಚಿವ ಬೆಳಮಗಿ ಸಹಿತ, ವಿಧಾನ ಪರಿಷತ್ ಸದಸ್ಯರಾದ ಕೆ.ಬಿ.ಶಾಣಪ್ಪ, ಅಮರನಾಥ ಪಾಟೀಲರನ್ನು ಕರೆಸಲು ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ನಗರ ಅಧ್ಯಕ್ಷ ಡಾ.ಅಶೋಕ ಜಿಂಗಾಡೆ, ಜಿಲ್ಲಾ ಉಪಾಧ್ಯಕ್ಷ ಅರುಣಕುಮಾರ ಪಟ್ಟಣಕರ, ಕಾರ್ಯದರ್ಶಿ ಭಾನುದಾಸ ತುರೆ, ನವನಾಥ ಕುಸಾಳೆ, ಭೀಮರಾವ ಸಾಳೊಂಕೆ, ಚಂದ್ರಕಾಂತ ಗೊಬ್ಬುರಕರ್, ತಾಪಂ ಸದಸ್ಯ ನಿಂಗಣ್ಣ ಹುಳಗೋಳ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.