ಗುಲ್ಬರ್ಗಾ

ಚುನಾವಣೆ ನೀತಿ ಸಂಹಿತೆ ಮರೆತ ಪಪಂ: ದೂರು

Published On :

ಚಿಂಚೋಳಿ: ರಾಜ್ಯ ಚುನಾವಣಾ ಆಯೋಗ ಸ್ಥಳೀಯ ಪಟ್ಟಣ ಪಂಚಾಯತ 18 ವಾರ್ಡುಗಳಿಗೆ ಮಾ.7 ಚುನಾವಣೆ ದಿನಾಂಕ ಘೋಷಿಸಿ ಅಧಿಸೂಚನೆ ಹೊರಡಿಸಿದರು ಸಹಾ ಇಲ್ಲಿನ ಪಪಂ ಮಾತ್ರ ಯಾವುದೇ ಚುನಾವಣೆ ನೀತಿ ಸಂಹಿತೆ ಬಗ್ಗೆ ಗಮನಹರಿಸದೇ ಕಣ್ಣು ಮುಚ್ಚಿಕೊಂಡು ಕುಳಿತಿದೆ ಎಂದು ಇಲ್ಲಿನ ಸಾರ್ವಜನಿಕರು ದೂರಿದ್ದಾರೆ. ಸ್ಥಳೀಯ ಪಪಂ 18 ವಾರ್ಡುಗಳಿಗೆ ಚುನಾವಣೆ ಪ್ರಕ್ರಿಯೆ ಮತ್ತು ನಾಮಪತ್ರ ಸಲ್ಲಿಸುವುದು ಶನಿವಾರ ಫೆ.16ರಿಂದ ಪ್ರಾರಂಭಗೊಂಡಿದೆ. ಆದರೆ ಪಟ್ಟಣದ ರಸ್ತೆ ಮಧ್ಯೆಭಾಗದಲ್ಲಿ ಹಾಕಿರುವ ವಿವಿಧ ರಾಜಕೀಯ ಪಕ್ಷಗಳ ಕಟೌಟ್, ಬ್ಯಾನರ್ಸ್ ಮತ್ತು ಪಕ್ಷದ ಚಿನ್ಹೆವುಳ್ಳ ಬಿತ್ತಿ ಪತ್ರಗಳು ಅಲ್ಲಲ್ಲಿ ಗೋಡೆಗಳ ಮೇಲೆ ರಾರಾಜಿಸುತ್ತಿವೆ. ಪಟ್ಟಣದ ಡಾ. ಅಂಬೇಡ್ಕರ್ ವೃತ್ತದಿಂದ ಚಂದಾಪುರ ಮಹಾತ್ಮ ಗಾಂಧಿ ವೃತ್ತದವರಿಗೆ ಅಲ್ಲಲ್ಲಿ ವಿವಿಧ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಟನೆಗಳ ಬ್ಯಾನರ್‌ಗಳು ರಾರಾಜಿಸುತ್ತಿದ್ದರು, ಇಲ್ಲಿನ ಪಪಂ ಮುಖ್ಯಾಧಿಕಾರಿಗಳು ಇವುಗಳನ್ನು ತೆಗೆದು ಹಾಕದೇ ನಿರ್ಲಕ್ಷ್ಯತನ ತೋರಿಸಿದ್ದಾರೆಂದು ರಾಜಕೀಯ ಪಕ್ಷಗಳ ಮುಖಂಡರು ದೂರುತ್ತಾರೆ. ಪಪಂ ವತಿಯಿಂದ ಯಾವುದೇ ಪರವಾನಗಿ ಶುಲ್ಕ ಭರಿಸದೇ ಪಟ್ಟಣದ ಬಸ್ ನಿಲ್ದಾಣ, ಬಸವೇಶ್ವರ ವೃತ್ತ, ಕನಕದಾಸರ ವೃತ್ತಗಳಲ್ಲಿ ಬ್ಯಾನರ್‌ಗಳು ಹಾಕಲಾಗಿದೆ. ಚಂದಾಪುರ ನಗರದ ಅನೇಕ ಬಡಾವಣೆಗಳಲ್ಲಿ ಮತ್ತು ಪಟ್ಟಣದ ಹರಿಜನವಾಡ್, ಧನಗರ ಗಲ್ಲಿ, ಮೋಮಿನಪುರ, ಬ್ರಾಹ್ಮಣ ಗಲ್ಲಿ, ಜ್ಯೋಶಿ ಗಲ್ಲಿ, ಬಡಿ ದರ್ಗಾ, ಛೋಟಿ ದರ್ಗಾ, ಮದರಸಾಬ ದರ್ಗಾ, ತರಕಾರಿ ಮಾರ್ಕೆಟ್, ಚಂದಾಪುರ ಬಸವ ನಗರ, ಆಶ್ರಯ ಕಾಲೋನಿ, ಗಂಗು ನಾಯಕ ತಾಂಡ್ ಮುಂತಾದ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್‌ಗಳು ಹಾರಾಡುತ್ತಿವೆ. ಇದರ ಬಗ್ಗೆ ಪಪಂ ಚುನಾವಣಾಧಿಕಾರಿಗಳು ಮತ್ತು ಮೇಲಾಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕೆಂದು ವಿವಿಧ ರಾಜಕೀಯ ಪಕ್ಷಗಳ ಮುಖಂಡರ ಆಗ್ರಹವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.