ಜೇವರ್ಗಿಯಲ್ಲಿ ಜಂಟಿ ಬೆಂಬಲ
ಜೇವರ್ಗಿ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ಖಂಡಿಸಿ ತಾಲೂಕಿನ ವಿವಿಧ ಕಾರ್ಮಿಕ ಸಂಘಟನೆಯ ಒಕ್ಕೂಟಗಳು ಜಂಟಿಯಾಗಿ ಬುಧವಾರ ಪಟ್ಟಣದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಅಂಗನವಾಡಿ ಕಾರ್ಯಕರ್ತರಿಗೆ ಕನಿಷ್ಠ ಪ್ರತಿ ತಿಂಗಳು 10 ಸಾವಿರ, ಸಹಾಯಕಿಯರಿಗೆ 6 ಸಾವಿರ ಸಂಬಳ ಕೊಡಬೇಕು, ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಡೆಯುತ್ತಿರುವ ಗುತ್ತಿಗೆದಾರರಿಗೆ ನೇಮಿಸಬೇಕು, ಹಮಾಲಿ ಕಾರ್ಮಿಕರಿಗೆ ಸಮುದಾಯ ಭವನ ನಿರ್ಮಿಸಬೇಕು.
ಸರ್ಕಾರಿ ಮಹಿಳಾ ನೌಕರರಿಗೆ ಇರುವ ಹೆರಿಗೆ ರಜೆ, ಇನ್ನಿತರ ರಜೆಗಳನ್ನು ಬಿಸಿಯೂಟದ ಅಡುಗೆದಾರರಿಗೂ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೆರಿಕೆಗಾಗಿ ಪ್ರತಿಭಟನಾಕಾರರು ಆಗ್ರಹಿಸಿದರು. ಇದಕ್ಕೂ ಮುನ್ನ ಬಸವೇಶ್ವರ ವೃತ್ತದಿಂದ ತಹಸೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಅಂಗನವಾಡಿ ನೌಕರರ ಸಂಘದ ತಾಲೂಕಾಧ್ಯಕ್ಷೆ ಗಂಗಮ್ಮ ಬಿರಾದಾರ, ನೀಲಮ್ಮ ಅರಳಗುಂರಗಿ, ಪ್ರಾಂತ ರೈತ ಸಂಘದ ಸುಭಾಷ ಹೊಸ್ಮನಿ, ಸಿದ್ದರಾಮ ಹರವಾಳ, ವೆಂಕೋಬರಾವ ವಾಗಣಗೇರಿ, ನಾಗಮ್ಮ ನರಿಬೋಳ, ಭಾಗಮ್ಮ ಗಂಗಾಕರ್, ಹಳ್ಳೇರಾಯ ದೇಸಾಯಿ, ಲಕ್ಕಪ್ಪ ಪೂಜಾರಿ, ಕೃಷ್ಣಪ್ಪ ದೊತರೆ, ಅಮಲಪ್ಪ, ಹಣಮಂತ ಗುತ್ತೇದಾರ, ಲಾಲಸಾಬ ಕೋಳಕುರ, ಗಜರಾಬಾಯಿ ಬಿರಾದಾರ, ಮಲ್ಲಮ್ಮ ನಾಟಿಕಾರ ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

