ಮಾ. 31ರವರೆಗೆ ಕಾಲುವೆಗೆ ನೀರು ಹರಿಸಿ
ಶಹಾಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಜೇವಗರ್ ಶಾಖಾ ಕಾಲುವೆಗಳಿಗೆ ಮಾ. 31ರವರೆಗೆ ನೀರು ಹರಿಸುವಂತೆ ಜೆಡಿಎಸ್ ಕೆಬಿಜೆಎನ್ಎಲ್ ಮುಖ್ಯ ಅಭಿಯಂತರರಿಗೆ ಮನವಿ ಮಾಡಿದೆ.
ಶನಿವಾರ ಭೀಮರಾಯನಗುಡಿಯ ಕೆಬಿಜೆಎನ್ಎಲ್ ಆಡಳಿತ ಕಚೇರಿಗೆ ಆಗಮಿಸಿದ ಜೇವಗರ್ ತಾಲೂಕು ಜೆಡಿಎಸ್ ಹಿರಿಯ ಮುಖಂಡ ಕೇದಾರಲಿಂಗಯ್ಯ ಹಿರೇಮಠ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಆಗಮಿಸಿ ಮಾ. 31ರವರೆಗೆ ನೀರು ಹರಿಸಲು ಘೋಷಣೆಗಳನ್ನು ಕೂಗಿದರು. ಜೆಡಿಎಸ್ನ ಹಿರಿಯ ಮುಖಂಡ ಕೇದಾರಲಿಂಗಯ್ಯ ಹಿರೇಮಠ ಮಾತನಾಡಿ, ರೈತರು ಈಗಾಗಲೇ ಹಿಂಗಾರು ಬೆಳೆಗಳನ್ನು ಬಿತ್ತನೆ ಮಾಡಿದ್ದಾರೆ. ಆದರೆ ಈ ಹಿಂದೆ ಫೆಬ್ರವರಿ 20ರವರೆಗೆ ನೀರು ಬಿಡಲಾಗುವುದು ಎಂದು ನಿಗದಿ ಪಡಿಸಲಾಗಿತ್ತು.
ಬೆಳೆ ನಷ್ಟ: ರೈತರು ಬಿತ್ತನೆಮಾಡಿದ ಹಿಂಗಾರು ಬೆಳೆಗಳಾದ ಶೇಂಗಾ, ಗೋಧಿ, ಮುಸುಕಿನ ಜೋಳ, ಮೆಣಸಿನಕಾಯಿ, ಇನ್ನಿತರ ಬೆಳೆಗಳನ್ನು ಬಿತ್ತಿದ್ದಾರೆ. ಈ ಬೆಳೆಗಳಿಗೆ ಮಾ. 31ರ ತನಕ ನೀರಿನ ಅವಶ್ಯಕತೆ ಇದೆ. ಒಂದು ವೇಳೆ ನಿಗದಿಯಾದಂತೆ ಫೆ. 20ಕ್ಕೆ ನೀರು ಹರಿಸುವುದನ್ನು ನಿಲ್ಲಿಸಿದರೆ ರೈತರ ಕೋಟ್ಯಂತರ ರುಪಾಯಿ ಮೌಲ್ಯದ ಬೆಳೆ ನಷ್ಟವಾಗುತ್ತದೆ. ಪರಿಣಾಮ ಸಾವಿರಾರು ರೈತರು ಬೀದಿಗೆ ಬೀಳುತ್ತಾರೆ. ಆರ್ಥಿಕ ನಷ್ಟ ಸಹಿಸದೇ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆಗಳಿವೆ ಎಂದು ಎಚ್ಚರಿಸಿ ನಂತರ ಮನವಿ ಪತ್ರ ನೀಡಿದರು.
ನೀರು ಬಿಡುವ ನಿರ್ಧಾರ: ಅಭಿಯಂತರ ಈಶ್ವರ ನಾಯಕ ಹಾಗೂ ಬಾಲಸುಬ್ರಮಣ್ಯಂ ಮನವಿ ಸ್ವೀಕರಿಸಿ, ಫೆ. 18 ಸೋಮವಾರ ಆಲಮಟ್ಟಿಯಲ್ಲಿ ಅಧಿಕೃತವಾಗಿ ಸಭೆ ನಡೆಸಿ ನೀರು ಬಿಡುವ ಬಗ್ಗೆ ತಿಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಶಿವಾನಂದ ದ್ಯಾಮಗೊಂಡ, ಎ.ಎಸ್. ಹಿರೇಮಠ, ಎಸ್.ಕೆ. ಹೇರೂರ, ಎಸ್.ಎಸ್. ಸಲಗರ್, ಸೈಯದ್ ಪಟೇಲ ಸೈದಾಪುರ, ಶಾಂತಗೌಡ ಹರನೂರ, ಸಿದ್ದು ಮಾವನೂರ, ಸದಾನಂದ ಪಾಟೀಲ, ಭೀಮಾಶಂಕರ ಮಾಗಣಗೇರಿ, ಶಿರಾಜುದ್ದೀನ್, ವಿರೇಶ ಅಂಗಡಿ ಮತ್ತಿತರರು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

