19ರಂದು ಹಲಕ ಶಿವಯೋಗಿಗಳ ಪುಣ್ಯಾರಾಧನೆ
ಚಿತ್ತಾಪುರ: ತಾಲೂಕಿನ ಹಲಕ ಹಿರೇಮಠದ ಲಿಂಗೈಕ್ಯೆ ಮುನೀಂದ್ರ ಶಿವಯೋಗಿಗಳವರ 30ನೇ ಪುಣ್ಯರಾಧನೆ ಮಹೋತ್ಸವ, ಸಹಸ್ರ ದೀಪೋತ್ಸವ, ಪ್ರಶಸ್ತಿ ಪ್ರಧಾನ, ಭಾವೈಕ್ಯ ಧರ್ಮಸಭೆ ಕಾರ್ಯಕ್ರಮ ಫೆ.19ರಂದು ಸಂಜೆ 6ಕ್ಕೆ ಜರುಗಲಿದೆ ಎಂದು ಮಠದ ಪೀಠಾಧಿಪತಿ ಅಭಿನವ ಮುನೀಂದ್ರ ಶಿವಾಚಾರ್ಯರು ತಿಳಿಸಿದ್ದಾರೆ.
ಅಂದು ಸಂಜೆ6 ಕ್ಕೆ ಮಠದ ಆವರಣದಲ್ಲಿ ಸಹಸ್ರ ದೀಪೋತ್ಸವ ಜರುಗಲಿದೆ. ನಂತರ ಭಾವೈಕತ್ಯೆ ಸಭೆಯಲ್ಲಿ ಖ್ಯಾತ ಉದ್ದಿಮೆದಾರ ಲಿಂಗಾರಡ್ಡಿ ಬಾಸರಡ್ಡಿ ಇವರಿಗೆ ಮುನೀಂದ್ರ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಭಾವ್ಯಕ್ಯತೆ ಧರ್ಮ ಸಭೆಯ ಸಾನಿಧ್ಯವನ್ನು ಅಬ್ಬೆತುಮಕೂರ ಮಠದ ಗಂಗಾಧರ ಸ್ವಾಮಿಗಳು, ಜಾಲಹಳ್ಳಿ ಮಠದ ಶ್ರೀಗಳು ವಹಿಸುವರು. ಕಂಬಳೇಶ್ವರ ಮಠದ ಸೋಮಶೇಖರ ಸ್ವಾಮಿಗಳು ಮುಗಳನಾಗಾಂವದ ಅಭಿನವ ಸಿದ್ದಲಿಂಗ ಶಿವಾಚಾರ್ಯರು ಅಧ್ಯಕ್ಷತೆ ವಹಿಸುವರು. ಕಲಕೇರಿ ಸಿದ್ದರಾಮ ಸ್ವಾಮಿಗಳು ನೇತೃತ್ವ ವಹಿಸುವರು.
ದಂಡಗುಂಡದ ಸಂಗನಬಸವ ಸ್ವಾಮಿಗಳು ದರ್ಗಾದ ಶರೀಫ್ ಸಮ್ಮಖದಲ್ಲಿ ಯಾದಗಿರಿಯ ಏಕದಂಡಿ ಮಠದ ಗುರುನಾಥ ಸ್ವಾಮಿಜಿ ಶಾಹಾಪುರ ಸೂಗುರೇಶ್ವರ ಸ್ವಾಮಿಗಳು, ಮುಗಳನಾಗಾಂವದ ಜೇಮಸಿಂಗ ಮಹಾರಾಜರು, ಹತ್ತಿಕಣಬಸ್ ಪ್ರಶಾಂತ ದೇವರು, ಯರಗೋಳದ ಸಂಗಮೇಶ ದೇವರು, ರಾಣೆಬೆನ್ನೂರದ ಸಿದ್ದಲಿಂಗ ದೇವರು, ಮಾಲಗತ್ತಿಯ ಚೆನ್ನಬಸವ ಶರಣರು, ದಿಗ್ಗಾಂವದ ಮಲ್ಲಯ್ಯ ಸ್ವಾಮಿಗಳು ಆಶಿರ್ವಚನ ನೀಡುವರು.
ಮುಖ್ಯ ಅತಿಥಿಯಾಗಿ ಶಾಸಕ ವಾಲ್ಮೀಕಿ ನಾಯಕ ದೊಡ್ಡಪ್ಪಗೌಡ, ರಾಜ್ಯ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರೀಯಾಂಕ ಖರ್ಗೆ, ಎಸಿಸಿ ಡೈರೆಕ್ಟರ್ ಡಾ. ಎಸ್.ಬಿ. ಸಿಂಗ್, ಮಾನ್ಯೆಜರ್ ಬಿಡಿ ದಲೇರಾ, ತಾಲೂಕಿನ ಜಿಪಂ ಸದಸ್ಯರು ತಾಪಂ ಸದಸ್ಯರು ರಾಜಕೀಯ ಮುಖಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

