ಸರಗಳ್ಳರ ಬೆಂಡೆತ್ತಿದ ಪೊಲೀಸ್
ಗುಲ್ಬರ್ಗ: ಇಲ್ಲಿನ ಬಸವೇಶ್ವರ ನಗರ ಪೊಲೀಸ್ ತಂಡ ಮಂಗಳವಾರ ರಾತ್ರಿ ನಗರದಲ್ಲಿನ ಸರಗಳ್ಳರನ್ನು ಬೆಂಡೆತ್ತುವಲ್ಲಿ ಯಶಸ್ವಿಯಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠ ಎನ್.ಸತೀಶಕುಮಾರ ಮಾರ್ಗದರ್ಶನದಲ್ಲಿ ನಗರ ಸರಗಳ್ಳರ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಸರಗಳ್ಳರನ್ನು ಬಂಧಿಸಿದ್ದಾರೆ.
ರಾತ್ರಿ ವೇಳೆ ನಡೆಸಿದ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳಾದ ರಾಜು ತಂದೆ ಖಂಡಪ್ಪಾ ಬಾಬನ್ (24), ನಾಗು ಉರ್ಫ್ ಲಾಲ್ಯಾ ತಂದೆ ತುಳಜಾರಾಮ(22) ಹಾಗೂ ಪ್ರಸಾದ ಉರ್ಫ ಕೆಂಪ್ಯಾ ತಂದೆ ಮಲ್ಲಿಕಾರ್ಜುನ(22)ನನ್ನು ಬಂಧಿಸಲಾಗಿದೆ. ಇವೆರಲ್ಲರೂ ಸುಂದರ ನಗರವಾಸಿಗಳೆಂದು ಪೊಲೀಸರು ತಳಿಸಿದ್ದಾರೆ.
140 ಗ್ರಾಂ ಚಿನ್ನಾಭರಣ ಜಪ್ತಿ: ಆರೋಪಿಗಳು ಆದರ್ಶ ನಗರ ಬಸ್ ನಿಲ್ದಾಣದ ಹತ್ತಿರ ರಸ್ತೆಯಲ್ಲಿ ಬೆಳಗಿನ ಜಾವ ಮಹಿಳೆಯ ಕೊರಳಲ್ಲಿದ್ದ 15 ತೊಲೆಯ ಬಂಗಾರದ ಮಂಗಳ ಸೂತ್ರ, ನಂತರ ಪ್ರಶಾಂತ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ 13 ತೊಲೆಯ ಬಂಗಾರದ ಚಪಲ ಹಾರ, ವೆಂಕಟೇಶ ನಗರದಲ್ಲಿ ಮಹಿಳೆಯ ಕೊರಳಲ್ಲಿದ್ದ 14 ತೊಲೆಯ ಬಂಗಾರದ ಮಂಗಳಸೂತ್ರ, ಐವಾನ-ಇ-ಶಾಹಿ ಆಲ್ ಬದರ್ ಲೇಡಿಸ್ ಹಾಸ್ಟೆಲ್ ಬಳಿ ಮಹಿಳೆಯ ಕೊರಳಿಂದ 20.5 ತೊಲೆಯ ಬಂಗಾರದ ಚೈನ್ಗಳನ್ನು ಬೈಕ್ ಬಳಸಿಕೊಂಡು ದೋಚಿದ್ದನ್ನು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ.
ಒಟ್ಟು 140 ಗ್ರಾಂ.ನ ಈ ನಾಲ್ಕು ಬಂಗಾರದ ಸರಗಳು, ಈ ಕೃತ್ಯಕ್ಕೆ ಬಳಸಿದ್ದ 30 ಸಾವಿರ ಮೌಲ್ಯದ ಬೈಕ್ ಸೇರಿ 4.51 ಲಕ್ಷ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.
ಅಧಿಕಾರಿಗಳಾದ ಎಂಬಿ ನಗರ ಸಿಪಿಐ ಎಸ್.ಅಸ್ಲಂ ಬಾಷಾ, ಸ್ಟೇಷನ್ ಪಿಐ ಜೆ.ಎಚ್. ಇನಾಂದಾರ, ಎಂಬಿ ನಗರ ಶ್ರೀಮಂತ ಇಲ್ಲಾಳ, ಗೋಪಾಲ ರಾಠೋಡ ಪಿಎಸ್ಐ(ಕಾ.ಸು) ಮತ್ತು ಪ್ರದೀಪ, ವಿಶ್ವವಿದ್ಯಾಲಯ ಠಾಣೆ ಹಾಗೂ ಸಿಬ್ಬಂದಿ ಶಿವಪುತ್ರ ಸ್ವಾಮಿ, ಶಿವಪ್ಪ ಕಮಾಂಡೊ, ಶಂಕರ, ಪ್ರಭಾಕರ, ಶ್ರೀನಿವಾಸರೆಡ್ಡಿ, ಗಂಗಾಧರ, ಅಶೋಕ, ಮಶಾಕ್, ಅರ್ಜುನ, ಸಿದ್ರಾಮಯ್ಯ, ವೀರಶೆಟ್ಟಿ, ಬಲರಾಮ ಅವರು ತಮಗೆ ದೊರೆತ ಖಚಿತ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

