ಗುಲ್ಬರ್ಗಾ

ಆಂಜನೇಯ ದೇಗುಲ ವಾರ್ಷಿಕೋತ್ಸವ

Published On :

ಸುರಪುರ: ಇಲ್ಲಿನ ಖಾನಾಪುರ ಎಸ್.ಎಚ್. ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ವರಸಿದ್ದಿ ಪ್ರಸನ್ನ ಆಂಜನೇಯ ದೇವಸ್ಥಾನದ ವಾರ್ಷಿಕೋತ್ಸವ ಗುರುವಾರದಿಂದ ಎರಡು ದಿನಗಳವರೆಗೆ ನಡೆಯಲಿದೆ.
  ವಾರ್ಷಿಕೋತ್ಸವದ ಅಂಗವಾಗಿ ದೇವಸ್ಥಾನಕ್ಕೆ ಸುಣ್ಣ ಬಣ್ಣ ಬಳಿಯಲಾಗಿದೆ. ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ. ತಳಿರು ತೋರಣ ಕಟ್ಟಿ ಸಿಂಗರಿಸಲಾಗಿದೆ. ಫೆ.14ರಂದು ಬೆ.8 ಗಂಟೆಗೆ ಸುದರ್ಶನ ಹಾಗೂ ಮಹಾಲಕ್ಷ್ಮೀ ಹೋಮ, ಮ.2 ಗಂಟೆಗೆ ಹನುಮಾನ ಚಾಲಿಸಾ ಹಾಗೂ ಸುಂದರ ಕಾಂಡ ಪಠಣ, ಸಾಯಂಕಾಲ 5 ಗಂಟೆಗೆ ಪವಮಾನ ಹೋಮ, ರಾತ್ರಿ 8-30 ಗಂಟೆಗೆ ಹೈದರಾಬಾದ್ ವಿಜಯಜಿ ಜಾಜು ತಂಡದಿಂದ ಜೈ ಭವಾನಿ ಕೀರ್ತನ ಮಂಡಲ ಜರುಗಲಿದೆ.
  ಫೆ.15ರಂದು ಬೆಳಗ್ಗೆ 6 ಗಂಟೆಗೆ ಪ್ರಸನ್ನ ಆಂಜನೇಯ ಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಪುಷ್ಪಾಲಂಕಾರ, ಶಿಖರಕ್ಕೆ ಧ್ವಜಾರೋಹಣ, 11 ಗಂಟೆಗೆ ಹವನ ಮತ್ತು ಪೂರ್ಣಾಹುತಿ, ಮಧ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಜರುಗಲಿದೆ. ಹೈದರಾಬಾದ ಯಾಜ್ಞಿಕ ಪಂಡಿತರಾದ ಯಜ್ಞಾಚಾರ್ಯ ಮತ್ತು ಸುಬ್ರಮಣ್ಯ ಶರ್ಮಾ ಪೌರೋಹಿತ್ಯ ವಹಿಸಲಿದ್ದಾರೆ. ತಿರುಪತಿಯ ಬಾಲಾಜಿ ಮಠದ ಕೃಷ್ಣದಾಸಜಿ, ಪವನದಾಸಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ದೇವಸ್ಥಾನ ಕಮಿಟಿ ಅಧ್ಯಕ್ಷ ಕಿಶೋರಚಂದ್ ಜೈನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.