ವಿಶ್ವಾರಾಧ್ಯರ ಜಾತ್ರೆ 15ರಂದು
ಗುಲ್ಬರ್ಗ: ನಗರದ ಆಳಂದ ರಸ್ತೆಯಲ್ಲಿರುವ ವಿಶ್ವರಾಧ್ಯರ 20ನೇ ಜಾತ್ರಾ ಮಹೋತ್ಸವ ಫೆ.15 ರಂದು ಹಮ್ಮಿಕೊಳ್ಳಲಾಗಿದೆ. ಅಂದು ಶುಕ್ರವಾರ ಬೆಳಗ್ಗೆ 8ಕ್ಕೆ ಮಹಾ ರುದ್ರಭಿಷೇಕ, ಸಂಜೆ 5ಕ್ಕೆ ಪಲ್ಲಕಿ ಮಹೋತ್ಸವ, ಸಂಜೆ 6ಕ್ಕೆ ರಥೋತ್ಸವ ಹಾಗೂ ಸಂಜೆ 7ಕ್ಕೆ ಧಾರ್ಮಿಕ ಸಭೆ ಜರುಗಲಿದೆ ಎಂದು ವಿಶ್ವರಾಧ್ಯ ಸೇವಾ ಸಮಿತಿಯ ಸಂಸ್ಥಾಪಕ ಮಹಾಂತಪ್ಪ ಹಾವನಳ್ಳಿ ತಿಳಿಸಿದ್ದಾರೆ. ಅಬ್ಬೆ ತುಮಕೂರು ವಿಶ್ವರಾಧ್ಯ ಸಿದ್ಧ ಸಂಸ್ಥಾನ ಮಠದ ಗಂಗಾಧರ ಶಿವಾಚಾರ್ಯ ಸಾನಿದ್ಯ ವಹಿಸಲಿದ್ದಾರೆ. ಬಬಲಾದ ಚನ್ನವೀರೇಶ್ವರ ವಿರಕ್ತಮಠದ ಗುರುಪಾದಲಿಂಗೇಶ್ವರ ಶಿವಯೋಗಿಗಳು ನೇತೃತ್ವವಹಿಸಲಿದ್ದಾರೆ. ಹಾವಿನಾಳ ಹಿರೇಮಠದ ಮಹಾಂತೇಶ ಶಿವಾಚಾರ್ಯ ಅಧ್ಯಕ್ಷತೆ ವಹಿಸುವರು. ಖ್ಯಾತ ಉದ್ದಿಮೆದಾರ ಬಿ.ಜಿ. ಪಾಟೀಲ್, ದತ್ತಾತ್ರೇಯ ಸಿ. ಪಾಟೀಲ ರೇವೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಗುರಶಾಂತಯ್ಯ ಸ್ಥಾವರ ಮಠ, ಶಿವಯ್ಯ ಸ್ವಾಮಿ ಬೀದಿಮನಿ, ಬಾಬುರಾವ್ ಕೋಬಾಳ, ಬಸವರಾಜ ಸ್ಥಾವರಮಠ, ಮಹಾಂತೇಶ ಹರವಾಳ (ತಬಲವಾದಕರು) ನಾಗೀಂದ್ರಪ್ಪ ಪಾಟೀಲ್ ಗೊಬ್ಬೂರ, ಸಾತಲಿಂಗಪ್ಪ ಅವರಾದ ಹಾಗೂ ಸಂಗಡಿಗರಿಂದ ಭಜನಾ ಕಾರ್ಯಕ್ರಮ, ರಾತ್ರಿ 9ಕ್ಕೆ ಶ್ರವಣ್ ಮೇಲೋಡಿ ಮ್ಯುಜಿಕಲ್ ನೈಟ್ ನಡೆಯುವುದು.
ಕೃಷಿ ಭೂಸ್ವಾಧೀನ ತಿದ್ದುಪಡಿಗೆ ವಿರೋಧ
ಹುಣಸಗಿ: ಪ್ರಸಕ್ತ ಅಧಿವೇಶನದಲ್ಲಿ ರೈತರ ಕೃಷಿ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳವ ಮಸೂದೆಗೆ ತಿದ್ದುಪಡಿ ತರಲಿದೆ ಎಂದು ತಿಳಿದು ಬಂದಿದ್ದು ಇದನ್ನು ಭಾರತೀಯ ಕಿಸಾನ ಸಂಘ ಉಗ್ರವಾಗಿ ಖಂಡಿಸುತ್ತದೆ ಎಂದು ಸಂಘದ ಉತ್ತರ ಪ್ರಾಂತ ಕಾರ್ಯದರ್ಶಿ ರಾಘವೇಂದ್ರ ಕಾಮನಟಗಿ ತಿಳಿಸಿದರು. ಹುಣಸಗಿಯಲ್ಲಿ ಭಾರತೀಯ ಕಿಸಾನ್ ಸಂಘದಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಈಗಾಗಲೇ ದೇಶದಲ್ಲಿನ ಕೃಷಿ ಭೂಮಿಯನ್ನು ಕೈಗಾರಿಕೆ, ವಿಮಾನ ನಿಲ್ದಾಣ, ವಿದ್ಯುತ್ ಸ್ಥಾವರ, ವಿದೇಶಿ ಕಂಪನಿಗಳಿಗೆ ನೀಡುವ ಮೂಲಕ ರೈತರನ್ನು ಒಕ್ಕಲೆಬ್ಬಿಸಿದಂತಾಗಿದೆ. ಇದರಿಂದಾಗಿ ಈಗಾಗಲೇ ಕೃಷಿ ಉತ್ಪನ್ನ ಉತ್ಪಾದನೆಯಲ್ಲಿ ಭಾರಿ ಪ್ರಮಾಣದಲ್ಲಿ ಇಳಿಮುಖವಾಗಿದೆ. ಮುಂದೆ ರೈತರ ಅನುಮತಿ ಇಲ್ಲದೇ ಫಲವತ್ತಾದ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಬಾರದು ಮತ್ತು ಈ ತಿದ್ದುಪಡಿಯನ್ನು ಕೈಬಿಡಬೇಕೆಂದು ಆಗ್ರಹಿಸಿದರು.
ವಜಾಕ್ಕೆ ಆಗ್ರಹ: ಸಂಘದ ಇನ್ನೊಬ್ಬ ಮುಖಂಡ ಮನೋಹರರಾವ ದ್ಯಾಮನಹಾಳ ಮಾತನಾಡಿ, ಸಂಸತ್ ಮೇಲೆ ದಾಳಿ ಮಾಡಿದ ಅಫ್ಜಲ್ ಗುರುವಿಗೆ ಗಲ್ಲಿಗೇರಿಸಿರುವ ಕೇಂದ್ರದ ಕ್ರಮವನ್ನು ಭಾರತೀಯ ಕಿಸಾನ್ ಸಂಘ ಸ್ವಾಗತಿಸುತ್ತದೆ. ಆದರೆ, ಅಫ್ಜಲ್ ಗುರುವಿಗೆ ಗಲ್ಲಿಗೇರಿಸಬಾರದಿತ್ತೆಂಬ ಹೇಳಿಕೆಯನ್ನು ನೀಡಿರುವ ಕಾಶ್ಮೀರದ ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ದೇಶದ್ರೋಹಿಗಳನ್ನು ರಕ್ಷಿಸುವಂತೆ ನುಡಿದ್ದಾರೆ. ಆದ್ದರಿಂದ ತಕ್ಷಣವೇ ಕಾಶ್ಮೀರ ಸರ್ಕಾರವನ್ನು ವಜಾಗೊಳಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳ್ಳಸಬೇಕೆಂದು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

